More

    ಭಾಷೆಗಳಲ್ಲಿ ಭೇದ, ಭಾವ ಸಲ್ಲ

    ಬಾಗಲಕೋಟೆ: ಸಂಸ್ಕೃತ ಭಾರತದ ಎಲ್ಲ ಭಾಷೆಗಳ ತಾಯಿಯಾಗಿದ್ದು, ಅದರ ಆಧಾರದ ಮೇಲೆ ಪ್ರಾದೇಶಿಕ ಭಾಷೆಗಳು ರೂಪುಗೊಂಡಿವೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ಕಾಳಿದಾಸ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಚ್.ಎನ್. ಯಾದವಾಡ ರಚಿಸಿದ ದೊಡ್ಡಕ್ಕ ರಾಜಮಾ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಭಾಷೆಗಳಲ್ಲಿ ಭೇದ, ಭಾವ ಸಲ್ಲದು. ಮಾತೃ ಭಾಷೆ ಸರ್ವ ಶ್ರೇಷ್ಠ. ವಿವಿಧ ಭಾಷೆಗಳನ್ನು ಕಲಿಯುವುದು ಉತ್ತಮ ಎಂದು ಹೇಳಿದರು.

    ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ನಾರಾಯಣ ಶೆವಿರೆ ಮಾತನಾಡಿ, ಸಾಹಿತ್ಯ ರಚನೆ ಮನದಾಳದಿಂದ ಅನುಭವಿಸಿ ಬರೆದಾಗ ಉತ್ತಮವಾಗಿ ಮೂಡಿ ಬರುತ್ತದೆ ಎಂದರು.

    ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಎಸ್.ಜಿ. ಕೋಟಿ ಮಾತನಾಡಿ, ಯುವಕರು ಸೃಜನಶೀಲ ಸಾಹಿತ್ಯ ರಚಿಸುವತ್ತ ಗಮನ ಹರಿಸಬೇಕು. ಸತ್ವಯುತ ಸಾಹಿತ್ಯಕ್ಕೆ ಪರಿಷತ್‌ನ ಬೆಂಬಲ ಸದಾ ಇರುತ್ತದೆ ಎಂದರು.

    ಸಾಹಿತಿ ಎಂ.ಬಿ. ಹೂಗಾರ, ಸದಾಶಿವ ಮರಡಿ, ಗೀತಾ ದಾನಶೆಟ್ಟಿ, ಶ್ರೀಶೈಲ ಗೋಲಗೊಂಡ, ಡಾ.ಎಸ್.ಬಿ. ಬಿರಾದಾರ, ಮಹಾಂತೇಶ ಹವಾಲ್ದಾರ, ಶಿವಕುಮಾರ ರಾಂಪುರ, ಕಾಶಿನಾಥ ಸೋಮನಕಟ್ಟಿ, ಬಿ.ವೈ.ಗೌಡರ ಉಪಸ್ಥಿತರಿದ್ದರು. ವಿಕ್ರಮ ಬಸನಗೌಡರ ಸ್ವಾಗತಿಸಿದರು. ಶ್ರೀಶೈಲ ಮಠಪತಿ ನಿರೂಪಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts