More

    ಡ್ರೈವಿಂಗ್​ ಲೈಸೆನ್ಸ್​, ವಾಹನ ನೋಂದಣಿ ದಾಖಲೆಗಳ ಅವಧಿ ಮುಗಿದಿದ್ದರೆ ಚಿಂತೆ ಬೇಡ..ಜೂ.30ರವರೆಗೂ ಮಾನ್ಯತೆ ಇರಲಿದೆ: ಆದ್ರೆ ಷರತ್ತು ಅನ್ವಯ…

    ನವದೆಹಲಿ: ಕರೊನಾ ವೈರಸ್​ನಿಂದ ಎಲ್ಲ ವ್ಯವಸ್ಥೆಗಳೂ ಏರುಪೇರಾಗಿವೆ. ಆದಾಯ ತೆರಿಗೆ ರಿಟರ್ನ್ಸ್​, ಆಧಾರ್​ -ಪಾನ್​ ಕಾರ್ಡ್​ ಲಿಂಕ್​ ಸೇರಿ ಹಲವು ಪ್ರಕ್ರಿಯೆಗಳ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ ಈಗ ವಾಹನಗಳನ್ನು ಹೊಂದಿರುವವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಫೆ.1ರ ನಂತರ ವ್ಯಾಲಿಡಿಟಿ ಮುಕ್ತಾಯ ಆಗಿರುವ ವಾಹನ ನೋಂದಣಿ ದಾಖಲೆಗಳು, ಚಾಲನಾ ಪರವಾನಗಿಗಳ ಮಾನ್ಯತೆಯನ್ನು ಜೂ.30ರವರೆಗೆ ವಿಸ್ತರಿಸಿದೆ. ಅಂದರೆ ಫೆ.1ರ ನಂತರ ಅವಧಿ ಮುಗಿದಿರುವ ಡ್ರೈವಿಂಗ್​ ಲೈಸೆನ್ಸ್​ ಮತ್ತಿತರ ದಾಖಲೆಗಳು ಜೂ.30ರವರೆಗೂ ಚಾಲನೆಯಲ್ಲಿರುತ್ತವೆ. ಅದನ್ನು ಜೂ.30ಕ್ಕೆ ಅಥವಾ ನಂತರ ನಿಗದಿತ ಅವಧಿಯೊಳಗೆ ನವೀಕರಿಸಿಕೊಳ್ಳಬೇಕು.

    ದೇಶಾದ್ಯಂತ ಲಾಕ್​ಡೌನ್​ ಇರುವುದರಿಂದ ಸಾರಿಗೆ ಸಂಸ್ಥೆಗಳು, ಅದಕ್ಕೆ ಸಂಬಂಧಪಟ್ಟ ಕಚೇರಿಗಳೆಲ್ಲವೂ ಬಂದ್ ಆಗಿವೆ. ಹೀಗಾಗಿ ಅನೇಕ ವಾಹನ ಸವಾರರು ತಮ್ಮ ಚಾಲನಾ ದಾಖಲೆಗಳ ನವೀಕರಣಕ್ಕೆ ಪರದಾಡುತ್ತಿದ್ದಾರೆ. ಅಂತಹವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ ಮಾಡಿದ್ದಾಗೆ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಮೋಟಾರು ವಾಹನ ಕಾಯ್ದೆಯಡಿ ಬರುವ ಎಲ್ಲ ತರಹದ ದಾಖಲೆಗಳಿಗೂ ವಿಸ್ತರಣಾ ಅವಧಿ ಅನ್ವಯ ಆಗುತ್ತದೆ. ಹಾಗಂತ ಫೆ.1ರೊಳಗೇ ವ್ಯಾಲಿಡಿಟಿ ಮುಗಿದಿದ್ದರೂ, ಅದನ್ನು ನವೀಕರಿಸದೆ ಇರುವವರಿಗೆ ಈ ಮಾನ್ಯತೆ ಅನ್ವಯ ಆಗುವುದಿಲ್ಲ ಎಂಬ ಷರತ್ತೂ ಇದೆ.

    ಲಾಕ್​ಡೌನ್​ ಇದ್ದರೂ ಅನೇಕರು ಅಗತ್ಯ ಸೇವೆಗಳನ್ನು ಪೂರೈಸುತ್ತಿದ್ದಾರೆ. ಅಂತಹವರ ವಾಹನದ ಯಾವುದಾದರೂ ದಾಖಲೆ ಎಕ್ಸ್​ಪೈರ್​ ಆಗಿದ್ದರೆ ಅದನ್ನು ಪ್ರಶ್ನೆ ಮಾಡುವಂತಿಲ್ಲ, ಕಿರುಕುಳ ನೀಡುವಂತಿಲ್ಲ ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts