More

    ಉಭಾಳೆಗೆ ಚುಸಾಪ ಆಹ್ವಾನ

    ದೇವದುರ್ಗ: ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಶಂಕರರಾವ್ ಉಭಾಳೆ ಅವರನ್ನು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಸ್ವಾಗತ ಸಮಿತಿಯಿಂದ ಗುರುವಾರ ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಲಾಯಿತು.

    ಕನ್ನಡಾಂಬೆಯ ಸೇವೆ ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ

    ಶಂಕರರಾವ್ ಉಭಾಳೆ ಮಾತನಾಡಿ, ಕನ್ನಡಾಂಬೆಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಖುಷಿಯ ವಿಚಾರ. ಚುಟುಕು ಸಾಹಿತ್ಯ ಕೂಡ ಸಾಹಿತ್ಯಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಕಿರು ಸಾಲುಗಳ ಕವಿತೆ ಪರಿಣಾಮ ಬೀರುವ ಸಾಹಿತ್ಯವಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವುದು ಗಮನಾರ್ಹ ಸಂಗತಿ ಎಂದರು.

    ಇದನ್ನೂ ಓದಿ: ಈತನ ಹೆಸರು ಸಚಿನ್, ಇಷ್ಟದ ಕ್ರಿಕೆಟಿಗ ವಿರಾಟ್ ಕೊಹ್ಲಿ!: ಭಾರತ ಕಿರಿಯರ ತಂಡದ ಗೆಲುವಿನ ರೂವಾರಿ 

    ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಮಾತನಾಡಿ, ಹಲವಾರು ಸಾಹಿತಿಗಳು, ಪದಾಧಿಕಾರಿಗಳೊಂದಿಗೆ ಚರ್ಚಿಸಿ ಶಂಕರರಾವ್ ಉಭಾಳೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಪರಿಷತ್ತಿನ ಘನತೆ ಹೆಚ್ಚಿಸಿದೆ ಎಂದರು.

    ಫೆ.25ರಂದು ಖೇಣೇದ್ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪ್ರಮುಖರಾದ ಭೋಜರಾಜ ಮಿಣಜಗಿ, ಅಭಿಷೇಕ ಬಳೆ, ಗುರುನಾಥ ಇಂಗಳದಾಳ, ಕಲ್ಪನಾ, ಹನುಮಂತ್ರಾಯ ಛಲವಾದಿ, ಶಿವರಾಜ ರುದ್ರಾಕ್ಷಿ, ಯಲ್ಲಗೌಡ ಇರಬಗೇರಾ, ಮಾಧವರಾವ್ ಉಭಾಳೆ, ಶಿವಾನಂದ ಪೇಟಕರ್, ಶಿಕ್ಷಕ ಸುರೇಶ ಚೌವ್ಹಾಣ್, ಮನೋಹರ ಉಭಾಳೆ, ಮನೋಹರ ಕಾಂಬ್ಳೆ, ಕೇಶವ ಉಭಾಳೆ, ಶಿವಾಜಿ ಉಭಾಳೆ, ಗುರುನಾಥ ಉಭಾಳೆ, ರಘುಪತಿ ಚಿತ್ರಗಾರ, ಶ್ರೀನಿವಾಸ ಉಭಾಳೆ, ಮಲ್ಲೇಶ್ವರಯ್ಯ ನೂಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts