ಪಂ.ಪಂಚಾಕ್ಷರ ಗವಾಯಿ ಅವರ ಸ್ಮರಣಾರ್ಥ ‘ವಚನ ಸಂಗೀತೋತ್ಸವ’

Music
Published on

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ಪಂ.ಪಂಚಾಕ್ಷರ ಗವಾಯಿ ಅವರ ಸ್ಮರಣಾರ್ಥ ‘ವಚನ ಸಂಗೀತೋತ್ಸವ’ ಕಾರ್ಯಕ್ರಮವನ್ನು ಮಾರ್ಚ್ 24 ರಂದು ಸಂಜೆ 5 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಖ್ಯಾತ ಗಾಯಕರಾದ ಕೆ.ಆನಂದಕುಮಾರ ಮತ್ತು ರವಿಚಂದ್ರ ಡಿ.ಢಗೆ ಅವರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇವರಿಹೆ ರಮೇಶ್ ಧನ್ನೂರ್ (ತಬಲ) ಮತ್ತು ಬಸವಲಿಂಗಯ್ಯ ಹಿರೇಮಠ ಹಾಗೂ ಮೃತ್ಯುಂಜಯ ಹಿರೇಮಠ ಅವರು (ಹಾರೋನಿಯಂ) ಸಹಕಾರ ನೀಡಲಿದ್ದಾರೆ. ಗಾಯಕಿ ಡಾ.ಸುಕನ್ಯಾ ಪ್ರಭಾಕರ್ ಉದ್ಘಾಟಿಸಲಿದ್ದು, ಸಪ್ತಸ್ವರ ಬಳಗ ಡಾ.ಜಿ.ಸಿದ್ದೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net