More

    ವ್ಯಾಕ್ಸಿನ್ ಇದ್ದರೂ ಹಾಕುವಂತಿಲ್ಲ!

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಗಳಿವೆ. ಆದರೆ, ಇದನ್ನು ಯಾರಿಗೂ ಹಾಕುವಂತಿಲ್ಲ. ಇದಕ್ಕೆ ಕಾರಣವಾಗಿರುವುದು ಸರ್ಕಾರದ ನಿಯಮಾವಳಿ.

    ಹೌದು. ಸರ್ಕಾರದ ಹೊಸ ನಿಯಮಾವಳಿಗಳ 18 ಹಾಗೂ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಡೋಸ್ ನೀಡುವುದನ್ನು ಸದ್ಯ ತಡೆ ಹಿಡಿಯಲಾಗಿದೆ. 2ನೇ ಡೋಸ್ ಮಾತ್ರ ಹಾಕಲಾಗುತ್ತಿದೆ. ಆದರೆ, 2ನೇ ಡೋಸ್ ಹಾಕಲು 16 ವಾರಗಳ ಕಾಲಾವಧಿಯನ್ನು ನಿಗದಿ ಮಾಡಲಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 30 ಸಾವಿರ ಜನಸಂಖ್ಯೆ ಇದೆ. ಇದರಲ್ಲಿ ಕರೊನಾ ಸೇನಾನಿಗಳು ಸೇರಿ 2678 ಜನರು ಮೊದಲ ಡೋಸ್ ಪಡೆದಿದ್ದಾರೆ. 780 ಜನರು ಎರಡನೇ ಡೋಸ್ ಪಡೆದಿದ್ದಾರೆ.

    ಮೊದಲನೇ ಡೋಸ್ ಪಡೆದ 2678 ಜನರಲ್ಲಿ ಯಾರೊಬ್ಬರೂ 16 ವಾರ ಕಾಲಾವಧಿ ದಾಟಿಲ್ಲ. ಇದರಿಂದಾಗಿ ಲಸಿಕೆ ಇದ್ದರೂ ಇದರಿಂದ ಎರಡನೇ ಡೋಸ್ ಹಾಕಲಾಗದ ಪರಿಸ್ಥಿತಿ ನಿರ್ವಣವಾಗಿದೆ. ಇದರಿಂದ ನಿತ್ಯ ಜನರು ಆಸ್ಪತ್ರೆಗೆ ಅಲೆದಾಡುತ್ತಿರುವುದು ಮಾಡುತ್ತಿರುವುದು ಸಾಮಾನ್ಯವಾಗಿದೆ. ಜನರು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಿತ್ಯ ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

    ವ್ಯಾಕ್ಸಿನ್ ಪಡೆಯುವಂತೆ ಸರ್ಕಾರ ಸಾಕಷ್ಟು ಪ್ರಚಾರ ಮಾಡುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳೊಲು ಹೋದರೆ ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಮಗೆ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಹೇಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಲಸಿಕೆ ನೀಡುವ ನಿಯಮಾವಳಿಯನ್ನು ತಕ್ಷಣ ತಿದ್ದುಪಡಿ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಬೇಕು.

    | ಸುನೀಲ ಬಸವರಡ್ಡೇರ, ಪಪಂ ಮಾಜಿ ಅಧ್ಯಕ್ಷ

    ನಮ್ಮ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಲಭ್ಯವಿದೆ. ಆದರೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಲಸಿಕೆ ಪಡೆದುಕೊಳ್ಳುವವರು ಯಾರು ಇಲ್ಲ. ಲಸಿಕೆ ಹಾಕಿಸಿಕೊಳ್ಳಲು ಸಾಕಷ್ಟು ಜನರು ಬರುತ್ತಿದ್ದಾರೆ. ಆದರೆ, ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಸಿಕೆ ನೀಡಲು ಸರ್ಕಾರದ ಆಪ್ ಮೂಲಕ ನೋಂದಣಿ ಮಾಡುವುದು ಕಡ್ಡಾಯ. ಅದರಲ್ಲಿ 18 ವರ್ಷ ಮೇಲ್ಪಟ್ಟ, 45 ವರ್ಷ ಮೇಲ್ಪಟ್ಟವರನ್ನು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ.

    | ಡಾ. ಎ.ಡಿ. ಸಾಮುದ್ರಿ, ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts