More

    ಈ ರಾಜ್ಯದಲ್ಲಿ ಲಿವ್-ಇನ್ ಸಂಬಂಧ ಕಷ್ಟಕರ! ಕಾನೂನು ಮತ್ತಷ್ಟು ಬಿಗಿ, ಜೈಲು ಶಿಕ್ಷೆ ದುಪ್ಪಟ್ಟು ಏರಿಕೆ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ಇನ್ನು ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಿವ್-ಇನ್ ಸಂಬಂಧ ಕಷ್ಟವಾಗಲಿದೆ. ಲಿವ್‌ ಇನ್‌ನಲ್ಲಿರುವ ಜೋಡಿ ಅಥವಾ ಲಿವ್‌ ಇನ್‌ ಆಗ ಬಾಳಲು ಯೋಚಿಸುತ್ತಿರುವವರು, ಜಿಲ್ಲಾಧಿಕಾರಿಗಳಲ್ಲಿ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ ಅಂಥ ಜೋಡಿಯನ್ನು ಜೈಲು ದಂಡ ವಿಧಿಸಬಹುದು.

    ಇದನ್ನೂ ಓದಿ:ಶೀಘ್ರದಲ್ಲೇ ವಂದೇ ಭಾರತ್​ ಸ್ಲೀಪರ್​ ರೈಲು: ಮಾರ್ಗ, ಸಮಯ, ವಿವರ ಹೀಗಿದೆ…

    21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟಿಗೆ ವಾಸಿಸಲು ಬಯಸಿದ್ದರೆ ಅದಕ್ಕೆ ಪೋಷಕರ ಒಪ್ಪಿಗೆಯೂ ಅಗತ್ಯವಿದೆ. ಅಂತಹ ಸಂಬಂಧಗಳ ಕಡ್ಡಾಯ ನೋಂದಣಿಯು ಉತ್ತರಾಖಂಡದ ಯಾವುದೇ ನಿವಾಸಿಯು ರಾಜ್ಯದ ಹೊರಗೆ ಲಿವ್-ಇನ್ ಸಂಬಂಧದಲ್ಲಿದ್ದರೂ ಅದಕ್ಕೆ ವಿಸ್ತರಿಸುತ್ತದೆ.

    ಲಿವ್-ಇನ್ ಸಂಬಂಧಗಳಿಗೆ ನೋಂದಾಯಿಸುವುದು ಹೇಗೆ?: ಲಿವ್-ಇನ್ ಸಂಬಂಧದಲ್ಲಿರುವ ಪಾಲುದಾರರು ತಮ್ಮ ಜೀವನ ಪರಿಸ್ಥಿತಿಯ ಹೇಳಿಕೆಯನ್ನು ಹತ್ತಿರದ ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು ಮತ್ತು ಅವರು ಹೇಳಿಕೆಯ ವಿಷಯಗಳನ್ನು ಪರಿಶೀಲಿಸುತ್ತಾರೆ ಮತ್ತು ಸಾರಾಂಶ ವಿಚಾರಣೆಯನ್ನು ನಡೆಸುತ್ತಾರೆ. ವಿಚಾರಣೆಯ ಸಮಯದಲ್ಲಿ, ರಿಜಿಸ್ಟ್ರಾರ್ ಪರಿಶೀಲನೆಗಾಗಿ ಪೋಷಕರನ್ನು ಕರೆಸಬಹುದು.
    ಪರಿಶೀಲನೆಯ ನಂತರ, ರಿಜಿಸ್ಟ್ರಾರ್, ಹೇಳಿಕೆಯನ್ನು ಸಲ್ಲಿಸಿದ 30 ದಿನಗಳಲ್ಲಿ, ನೋಂದಣಿ ಪ್ರಮಾಣಪತ್ರವನ್ನು ನೀಡಬಹುದು ಅಥವಾ ಹೇಳಿಕೆಯನ್ನು ನೋಂದಾಯಿಸಲು ನಿರಾಕರಿಸಬಹುದು. ನಿರಾಕರಣೆಯ ಸಂದರ್ಭದಲ್ಲಿ, ಅಧಿಕಾರಿಗಳು ಪಾಲುದಾರರಿಗೆ ಲಿಖಿತವಾಗಿ ಕಾರಣಗಳನ್ನು ತಿಳಿಸುತ್ತಾರೆ.

    ಲಿವ್-ಇನ್ ಸಂಬಂಧಗಳನ್ನು ಯಾವಾಗ ನೋಂದಾಯಿಸಲಾಗುವುದಿಲ್ಲ?: “ಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಪ್ರಕರಣಗಳಲ್ಲಿ” ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲಾಗುವುದಿಲ್ಲ. ಜೋಡಿಯಲ್ಲಿ ಒಬ್ಬರು ಮೊದಲೇ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದರೆ, ಅಥವಾ ಒಬ್ಬರ ಒಪ್ಪಿಗೆಯನ್ನು “ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ” ಇವೆಲ್ಲ ಶಿಕ್ಷಾರ್ಹ ಅಪರಾಧಗಳಾಗುತ್ತವೆ.
    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿದೆ. 2022 ರಲ್ಲಿ ಯುಸಿಸಿಗಾಗಿ ಕರಡು ಸಿದ್ಧಪಡಿಸಲು ರಾಜ್ಯ ಸರ್ಕಾರವು – ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯನ್ನು ರಚಿಸಿತ್ತು.

    ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸಾಮಾಜಿಕ ಕಾರ್ಯಕರ್ತ ಮನು ಗೌರ್, ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಖಾ ದಂಗ್ವಾಲ್ ಅವರನ್ನೊಳಗೊಂಡ ಸಮಿತಿಯು 740 ಪುಟಗಳ ಕರಡು ವರದಿಯನ್ನು ಸಿದ್ಧಪಡಿಸಿದೆ ಮತ್ತು ಒಟ್ಟು ನಾಲ್ಕು ಸಂಪುಟಗಳನ್ನು ಹೊಂದಿದೆ. UCC ಉತ್ತರಾಖಂಡ್ 2024 ಮಸೂದೆಯು ಬಹುಪತ್ನಿತ್ವ ಮತ್ತು ಬಾಲ್ಯವಿವಾಹದ ಸಂಪೂರ್ಣ ನಿಷೇಧದಂತಹ ಶಿಫಾರಸುಗಳನ್ನು ಒಳಗೊಂಡಿದೆ.

    ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಅಸಲಿ ಕಾರಣ ತಿಳಿಸಿದ ಕೋಚ್ ಮಾರ್ಕ್ ಬೌಚರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts