More

    ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ತಂಡಕ್ಕೆ 18 ಕ್ರೀಡಾಪಟುಗಳು ಆಯ್ಕೆ

    ದಾವಣಗೆರೆ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಸೀನಿಯರ್ ಮಹಿಳಾ ಹ್ಯಾಂಡ್‌ಬಾಲ್ ಚಾಂಪಿಯನ್ ಶಿಪ್‌ಗೆ 18 ಜನ ಕ್ರೀಡಾಪಟುಗಳ ರಾಜ್ಯ ತಂಡ ಆಯ್ಕೆಯಾಗಿದ್ದು, ಶುಕ್ರವಾರ ತೆರಳಿತು.

    ಹೊನ್ನಾಳಿ ಹಿರೇಕಲ್ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಫೆಬ್ರವರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಕಡೆಗಳ 38 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

    ಇವರಲ್ಲಿ 18 ಜನರನ್ನು ಆಯ್ಕೆ ಮಾಡಿ ಫೆ. 26ರಿಂದ ಮಾ. 11ರ ವರೆಗೆ ತರಬೇತಿ ನೀಡಿ ಮಾ. 15-19ರ ವರೆಗೆ ಆಯೋಜಿಸಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ತಂಡವನ್ನು ಕಳುಹಿಸಲಾಗುತ್ತಿದೆ ಎಂದು ಪ್ರಾಚಾರ್ಯ ಡಾ. ಪ್ರವೀಣ್ ದೊಡ್ಡಗೌಡರ್ ಕಾಲೇಜು ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ರಾಜ್ಯ ಮಟ್ಟದ ಹ್ಯಾಂಡ್‌ಬಾಲ್ ಫೆಡರೇಷನ್ ಖಜಾಂಚಿಯೂ ಆಗಿರುವ ಪ್ರಕಾಶ್ ನರಗಟ್ಟೆ ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ. ಇವರು ಮತ್ತು ತಂಡದ ವ್ಯವಸ್ಥಾಪಕಿ ಸೌಮ್ಯಾ ಅವರೊಂದಿಗೆ ಕ್ರೀಡಾಪಟುಗಳು ತೆರಳಿದ್ದಾರೆ ಎಂದರು.

    ರಾಜ್ಯ ತಂಡದ ಕ್ರೀಡಾಪಟುಗಳು
    ತಂಡದ ನಾಯಕಿ- ಸುಹಾನಾ ಜಂಬಗಿ (ಹೊನ್ನಾಳಿ), ಉಪನಾಯಕಿ- ಜೆ.ರಜನಿ (ಶಿವಮೊಗ್ಗ), ಸಹ ಕ್ರೀಡಾಪಟುಗಳಾದ ನಿಖಿತಾ ಮಾನೆ (ಬಾಗಲಕೋಟೆ), ನಿವೇದಿತಾ ಸಾಹು (ಬೆಂಗಳೂರು), ವಿ.ರಶ್ಮಿ (ಹೊನ್ನಾಳಿ), ಎಚ್.ಬಿ.ರೂಪಾ (ಹೊನ್ನಾಳಿ), ಎಸ್.ಪಿ. ಸುಪ್ರಿನಾ (ಹೊನ್ನಾಳಿ), ಡಿ.ಆರ್. ರಾಣಿ (ಹಾಸನ), ಆರ್.ರೊಷನ್ ( ಮಂಗಳೂರು), ಎಂ. ಶ್ರುತಿ (ಬೆಳಗಾವಿ), ಪಿ. ರೂಪಾ (ಸಾಗರ), ಸಾನಿಯಾ ಚೆ. (ಬೆಳಗಾವಿ), ಕೆ. ನೇತ್ರಾವತಿ (ತುಮಕೂರು), ಎಚ್.ಆರ್. ಸ್ವಾತಿ (ಹೊನ್ನಾಳಿ), ಸಂಜನಾ ಪಾಟೀಲ್ (ಹಾವೇರಿ) ಬಿ.ದಿವ್ಯಾ (ಹೊನ್ನಾಳಿ), ಬಿ. ಪೂಜಾ (ಹೊನ್ನಾಳಿ), ಕೆ.ಎಂ. ಸ್ಪೂರ್ತಿ (ಹೊನ್ನಾಳಿ).
    ಸಹ ಪ್ರಾಧ್ಯಾಪಕ ನಾಗೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ನರಗಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts