More

    ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ

    ವಿಜಯಪುರ: ಹಾಥರಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಸಮಿತಿ ಅಧ್ಯಕ್ಷ ರವಿ ಬಿಸನಾಳ ಮಾತನಾಡಿ, ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಖಂಡನೀಯ. ಇಂತಹ ಹೀನಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಶೀಘ್ರ ಆರೋಪಿಗಳನ್ನು ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
    ವಾಲ್ಮೀಕಿ ಸಮಾಜದ ಮುಖಂಡ ಬಿ.ಎಸ್. ಗಸ್ತಿ ಮಾತನಾಡಿ, ಬೇಟಿ ಬಚಾವೋ ಬೇಟಿ ಫಡಾವೋ ಎಂದು ಹೇಳುವ ಕೇಂದ್ರ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಧಾನಿ ಮೋದಿ ಅವರು ಕೇವಲ ಮಾತಿನಲ್ಲಿಯೇ ಹೊರತು, ಕೆಲಸದಲ್ಲಿ ಮಾತ್ರ ತೋರುತ್ತಿಲ್ಲ. ಆದ್ದರಿಂದ ರಾಷ್ಟ್ರಪತಿ ಅವರು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಯುವತಿಯ ಕುಟಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
    ಮುಖಂಡರಾದ ಶೇಸಪ್ಪ ಹಂಚನಾಳ, ಮಲ್ಲಪ್ಪ ಕವಲಗಿ, ಶಂಕರ ನಾಯ್ಕಡಿ, ಶರಣಬಸಪ್ಪ ನಾಯ್ಕೋಡಿ, ಚಂದ್ರು ನಾಟೀಕಾರ, ಅರ್ಜುನ ನಾಯ್ಕಡಿ, ಈರಣ್ಣ ಮುದಗಾರ, ಸಿದ್ದು ನಾಯ್ಕೋಡಿ, ಸದಾಶಿವ ಕೊಣ್ಣೂರ, ಬಾಪು ಜಾಲಮಟ್ಟಿ, ಅಪ್ಪು ದಳವಾಯಿ, ಸಾಹೇಬಗೌಡ ಕೊಡೇಕಲ್, ಶೇಷರಾವ ಮಾನೆ ಮತ್ತಿತರರಿದ್ದರು.

    ಸರ್ಕಾರ ವಜಾಕ್ಕೆ ಡಿಎಸ್‌ಎಸ್ ಆಗ್ರಹ

    ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲಗೊಂಡಿರುವ ಅಲ್ಲಿನ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಸಮತಾವಾದ) ಕಾರ್ಯಕರ್ತರು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಯಮನಪ್ಪ ಸಿದರಡ್ಡಿ ಮಾತನಾಡಿದರು.
    ಮುಖಂಡರಾದ ಶ್ರೀಶೈಲ ದೊಡಮನಿ, ಮಹಾಂತೇಶ ಮಿಲ್ಟ್ರಿ , ಸುರೇಶ ಸಿಂಧೆ, ಶಿವಪ್ಪ ಪಡಸಲಗಿ, ಸುರೇಶ ಚಿಮ್ಮಲಗಿ, ಮಾದೇವ ದೇವಾಪುರ, ಪರಮೇಶ್ವರ ಹೊಕ್ಕುಂಡಿ, ಶಿವಪ್ಪ ಡೆಂಗ, ಯಮನಪ್ಪ ಡೆಂಗ, ಆನಂದ ಚೌಡಕಿ ಮತ್ತಿತರರಿದ್ದರು.

    ಯುಪಿಯಲ್ಲಿ ಗೂಂಡಾ ಸರ್ಕಾರ

    ಉತ್ತರ ಪ್ರದೇಶದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಜಿಲ್ಲಾ ಸಂಚಾಲಕ ಸುರೇಶ ಎಸ್.ಮಣ್ಣೂರ ಮಾತನಾಡಿದರು.
    ಸಂಘಟಕರಾದ ದೇವೇಂದ್ರ ಹಾದಿಮನಿ, ರಾವುತ್ ತಳಕೇರಿ, ಹರೀಶ ನಾಟಿಕಾರ, ಅನೀಲ ಹೊಸಮನಿ, ನಾಗೇಶ ಕಟ್ಟಿಮನಿ, ಯಮನೂರಿ ಚಲವಾದಿ, ಚಂದ್ರಕಾಂತ ಶಿಂಗೆ, ಗುರು ಗುಡಿಮನಿ, ಪರಶುರಾಮ ಕುಬಕಡ್ಡಿ, ಹಣಮಂತ ಚಲವಾದಿ, ರಾಮು ಚಲವಾದಿ, ಶೇಖರ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ, ಸಂತೋಷ ತಳಕೇರಿ, ರಮಜಾನ ಹೆಬ್ಬಾಳ, ಮುತ್ತಣ್ಣ ಚಲವಾದಿ, ಈಶ್ವರ ಚಲವಾದಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts