More

    ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆ: 9 ರಲ್ಲಿ 6 ಸ್ಥಾನ ಗೆದ್ದ ಬಿಜೆಪಿ

    ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ತೀವ್ರ ರಾಜಕೀಯ ವಿರೋಧ ಇದ್ದಾಗ್ಯೂ, ವಿಧಾನ ಪರಿಷತ್ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವನ್ನು ಸಾಧಿಸಿದ್ದಾರೆ. ಒಟ್ಟು ಹನ್ನೊಂದು ಸ್ಥಾನಗಳಿಗೆ ಡಿಸೆಂಬರ್ 1ರಂದು ಮತದಾನ ನಡೆದಿತ್ತು. 199 ಸ್ಪರ್ಧಿಗಳು ಕಣದಲ್ಲಿದ್ದರು. ಗುರುವಾರದಿಂದ ಮತ ಎಣಿಕೆ ಶುರುವಾಗಿದ್ದು, ಇನ್ನೂ ಪೂರ್ತಿ ಸ್ಥಾನಗಳ ಫಲಿತಾಂಶ ಘೋಷಣೆಯಾಗಿಲ್ಲ.

    ಲಖನೌ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಸುದೀರ್ಘ 80 ಗಂಟೆ ಕಾಲ ನಡೆದಿದ್ದು, ನಂತರದಲ್ಲಿ ಫಲಿತಾಂಶ ಪ್ರಕಟವಾದಾಗ ಬಿಜೆಪಿಯ ಅವನೀಶ್ ಕುಮಾರ್ ಸಿಂಗ್ ವಿಜಯದ ನಗು ಬೀರಿದ್ದಾರೆ. ಅವನೀಶ್ ಕುಮಾರ್ ಸಿಂಗ್​ ಅವರು ಸತತ ಹದಿನೆಂಟು ವರ್ಷಗಳಿಂದ ಕ್ಷೇತ್ರದ ಪ್ರತಿನಿಧಿತ್ವನ್ನು ಕಾಯ್ದುಕೊಂಡಿದ್ದ ಹಾಲಿ ಎಂಎಲ್​ಸಿ ಕಾಂತಿ ಸಿಂಗ್ ಮತ್ತವರ ಕುಟುಂಬದ ವಿರುದ್ಧ 6.403 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

    ಇದನ್ನೂ ಓದಿ: ದೂರು ನೀಡಲು ಬಂದ ಯುವತಿಗೆ ಬೆಲ್ಟ್​ನಿಂದ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸಿದ ಎಸ್​ಐ..!

    ಮೇರಠ್​ನ ಪದವೀಧರ ಕ್ಷೇತ್ರವನ್ನು 24 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಮಾಧ್ಯಮಿಕ ಶಿಕ್ಷಾ ಸಂಘದ ಹೇಮ್ ಸಿಂಗ್ ಪುನ್ಧೀರ್​ ವಿರುದ್ಧ ಬಿಜೆಪಿಯ ದಿನೇಶ್ ಗೋಯೆಲ್​ 28,769 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಲಖನೌನ ಮೂರು ಕ್ಷೇತ್ರ., ಮೇರಠ್​, ಬರೇಲಿ-ಮೊರಾದಾಬದ್, ಆಗ್ರಾ ಸೇರಿ ಒಟ್ಟು ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

    ಇದನ್ನೂ ಓದಿ: ಗ್ರಾ.ಪಂ ಚುನಾವಣೆ: ಪತ್ನಿ ಅವಿರೋಧ ಆಯ್ಕೆಗೆ 25 ಲಕ್ಷ ರೂ. ಭರವಸೆ ನೀಡಿದ ತಹಸೀಲ್ದಾರ್!​

    ಇನ್ನು ಮೂರು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಗೆಲುವು ದಾಖಲಿಸಿದೆ. ಅಲಹಾಬಾದ್​, ಝಾನ್ಸಿ, ವಾರಾಣಸಿ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಉಳಿದ ಎರಡು ಕ್ಷೇತ್ರಗಳ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. (ಏಜೆನ್ಸೀಸ್)

    ಕಾಂಗ್ರೆಸ್ ಎಂಎಲ್​ಸಿ ನಸೀರ್ ಅಹ್ಮದ್ ಪುತ್ರ ಫಯಾಜ್​ ಅಹ್ಮದ್ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts