More

    ಉತ್ತರ ಪ್ರದೇಶದಲ್ಲೂ ಕನ್ವರ್​ ಯಾತ್ರೆ ರದ್ದು

    ಲಖನೌ : ಜುಲೈ 25 ರಿಂದ ನಡೆಯುವಂತೆ ಆಯೋಜಿಸಲಾಗಿದ್ದ ವಾರ್ಷಿಕ ಕನ್ವರ್​ ಯಾತ್ರೆಯನ್ನು ಕರೊನಾ ಕಾರಣದಿಂದಾಗಿ ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ. ಈ ವಿಶೇಷ ತೀರ್ಥಯಾತ್ರೆಯನ್ನು ನಡೆಸುವ ಭಕ್ತರ ಸಂಘಟನೆಗಳು, ಸರ್ಕಾರದ ಅಹವಾಲಿನ ಮೇರೆಗೆ, ಯಾತ್ರೆಯನ್ನು ನಡೆಸದಂತೆ ನಿರ್ಧರಿಸಿವೆ ಎನ್ನಲಾಗಿದೆ.

    ಯಾತ್ರೆಯನ್ನು ನಡೆಸುವ ಯುಪಿ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದ ಮಾರನೇ ದಿನವಾದ ಶನಿವಾರ ಈ ಬೆಳವಣಿಗೆಯಾಗಿದೆ. ಕರೊನಾ ಮೂರನೇ ಅಲೆ ಬರುವ ಆತಂಕವಿರುವಾಗ ಲಕ್ಷಾಂತರ ಜನರು ಸೇರುವಂತಹ ಕನ್ವರ್​ ಯಾತ್ರೆಯನ್ನು ನಡೆಸುವುದು ಸಾರ್ವಜನಿಕರ ಹಿತದೃಷ್ಟಿಯಲ್ಲಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿತ್ತು.

    ಇದನ್ನೂ ಓದಿ: ಕರೊನಾ ಆತಂಕದಲ್ಲಿ ಕನ್ವರ್ ಯಾತ್ರೆ: ಆರೋಗ್ಯ, ಬದುಕುವ ಹಕ್ಕು ಪರಮೋಚ್ಛ ಎಂದ ಸುಪ್ರೀಂ ಕೋರ್ಟ್​

    ಇದರೊಂದಿಗೆ, ಈ ಯಾತ್ರೆಯನ್ನು ರದ್ದುಗೊಳಿಸಿರುವ ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳ ಪಟ್ಟಿಗೆ ಇದೀಗ ಯುಪಿ ಕೂಡ ಸೇರಿದೆ. ಝಾರ್ಖಂಡ್​ ರಾಜ್ಯ ಸರ್ಕಾರವೂ ಯಾತ್ರೆಯ ಬಗ್ಗೆ ಹೆಚ್ಚಿನ ಆಸಕ್ತಿ ಅಥವಾ ಸಿದ್ಧತೆಗಳನ್ನು ತೋರಿಸಿಲ್ಲ ಎನ್ನಲಾಗಿದೆ. ಕರೊನಾ ಕಾರಣದಿಂದಾಗಿ ಸತತವಾಗಿ ಎರಡನೇ ವರ್ಷ ಈ ಯಾತ್ರೆ ನಡೆಯುತ್ತಿಲ್ಲ.

    ಏನಿದು ಕನ್ವರ್ ಯಾತ್ರೆ ? : ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಈ ಯಾತ್ರೆಯು ಜುಲೈ ಕೊನೇ ವಾರದಲ್ಲಿ ಆರಂಭವಾಗುತ್ತದೆ. ಕನ್ವರಿಯಾಗಳೆಂದು ಕರೆಯಲ್ಪಡುವ ಶಿವ ಭಕ್ತರು ಕಾಲ್ನಡಿಗೆಯಲ್ಲಿ ಹರಿದ್ವಾರ, ಧಿಯೋಗಢ, ಗಂಗೋತ್ರಿ ಮುಂತಾದ ತೀರ್ಥಸ್ಥಳಗಳಿಗೆ ಹೋಗಿ ಗಂಗಾಜಲವನ್ನು ಸಂಗ್ರಹಿಸಿ ತರುತ್ತಾರೆ. ಝಾರ್ಕಂಡಿನ ಪ್ರಸಿದ್ಧ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಈ ಜಲವನ್ನು ಅರ್ಪಿಸುವ ಪ್ರತೀತಿಯೂ ಉಂಟು. ಈ ಯಾತ್ರೆ ಸಾಧಾರಣವಾಗಿ ಆಗಸ್ಟ್​ ಮೊದಲನೇ ವಾರದುದ್ದಕ್ಕೂ ನಡೆಯುತ್ತದೆ. (ಏಜೆನ್ಸೀಸ್)

    ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆಯಲು ಹೋಗುವ ಮುನ್ನ, ನಿಮಗಿದು ತಿಳಿದಿರಲಿ!

    ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಈ ಐಎಎಸ್​ ಅಧಿಕಾರಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts