More

    ಆನ್​ಲೈನ್ ಅಂಗಳದಲಿ, ಮನದಂಗಳ ವಿಕಸಿಸಲಿ

    ಕಳೆದೊಂದು ವರ್ಷದಿಂದ ಬಿಟ್ಟರೂ ಬಿಡದೀ ಮಾಯೆ ಎಂಬಂತೆ ನಮ್ಮನ್ನು ಕಾಡುತ್ತಿರುವ ಕರೊನಾ, ಇಂದಿಗೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಸ್ನೇಹಿತರೊಂದಿಗೆ ನಲಿಯುತ್ತಾ ಕಲಿಯುತ್ತಿದ್ದ ಶಾಲೆಯೆಂಬ ವಿಶಾಲ ದೇಗುಲವು, ಆನ್​ಲೈನ್ ತರಗತಿ ಎಂಬ ಅಂಗೈಯೊಳಗೆ ಸೇರಿಕೊಂಡಿದೆ. ಮಕ್ಕಳೇ, ಈ ಸಮಯವನ್ನು ನೀವು ಪಠ್ಯದ ಜತೆ ಪಠ್ಯೇತರ ಆನ್​ಲೈನ್ ಚಟುವಟಿಕೆಗೂ ಹೇಗೆ ಬಳಸಿಕೊಳ್ಳಬಹುದು? ಬನ್ನಿ, ತಿಳಿದುಕೊಳ್ಳೋಣ.

    ಭಾರತಿ ಎ., ಕೊಪ್ಪ

    ಕೆಲದಿನಗಳ ಕಾಲ ಪ್ರೌಢಶಾಲಾ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದರೂ 1ರಿಂದ 9ನೇ ತರಗತಿವರೆಗಿನ ಮಕ್ಕಳು ಮತ್ತೊಮ್ಮೆ ಪರೀಕ್ಷೆ ಇಲ್ಲದೆಯೇ ಪಾಸ್ ಆಗಿದ್ದಾರೆ. ರಾಜ್ಯ ಸರ್ಕಾರದ ಪಬ್ಲಿಕ್ ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಆನ್​ಲೈನ್ ಪಾಠ, ಆನ್​ಲೈನ್ ಕೋಚಿಂಗ್… ಹೀಗೆ ಮತ್ತೆ ಮತ್ತೆ ವಿದ್ಯಾಭ್ಯಾಸ ಎಂಬ ಚೆಂಡು ಆನ್​ಲೈನ್​ನ ಅಂಗಳಕ್ಕೆ ಬೀಳುತ್ತಲೇ ಇದೆ. ಆದರೇನಂತೆ, ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕಾಗಿದೆ. ಆನ್​ಲೈನ್ ಅಂಗಳದಲ್ಲಿ ಒಳಿತು ಕೆಡಕುಗಳೆರಡನ್ನೂ ಮನದಲ್ಲಿಟ್ಟುಕೊಂಡು, ಹಂಸಕ್ಷೀರ ನ್ಯಾಯದಂತೆ ಒಳಿತನ್ನು ಮಾತ್ರವೇ ಆರಿಸಿಕೊಳ್ಳಬೇಕಿದೆ. ಪಬ್ಲಿಕ್ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳು ಪಾಠಕ್ಕೆ ಪೂರಕ ತಯಾರಿ ಮಾಡಿಕೊಳ್ಳುವುದರ ಜತೆಗೆ, ವಿರಾಮದ ಕಾಲಕ್ಕೆ ಬೇರೆ ಚಟುವಟಿಕೆ ಮಾಡಬಹುದು. ಇಲ್ಲವೇ ಆನ್​ಲೈನ್​ನಲ್ಲಿಯೇ ಬೇರೆ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಬಹುದು. ರಜೆಯನ್ನು ಮನೆಯಲ್ಲಿಯೇ ಲಾಕ್ ಆಗಿ ಕಳೆಯುತ್ತಿರುವ ಪುಟಾಣಿಗಳು ಆನ್​ಲೈನ್ ಅಂಗಳವನ್ನು ಮನದಂಗಳ ವಿಕಸಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುವತ್ತ ಚಿತ್ತ ಬೆಳೆಸಬೇಕು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ, ಕೋವಿಡ್ ಕರ್ಫ್ಯೂವಿನ ಈ ಅವಧಿಯಲ್ಲಿ ಹಿತಮಿತವಾಗಿ ಆನ್​ಲೈನ್ ಅಂಗಳವನ್ನು ಸದುಪಯೋಗಪಡಿಸಿಕೊಂಡು, ಸಕಾರಾತ್ಮಕವಾಗಿ ಯೋಚಿಸಿ, ಮನದಂಗಳವನ್ನು ವಿಕಸಿಸುವಂತೆ ಮಾಡೋಣ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಯತ್ತ ನಿರ್ಭಯವಾಗಿ ತೆರಳಲು ಕರೊನಾ ಅನುವು ಮಾಡಿ ಕೊಡಲಿ ಎಂದು ಆಶಿಸೋಣ.

    ಇ-ಸಾರ್ವಜನಿಕ ಗ್ರಂಥಾಲಯ

    ಮನೆಯಲ್ಲೇ ಇದ್ದು ಬೇಸರ ಕಳೆಯಲು ಮತ್ತು ಜ್ಞಾನಾರ್ಜನೆ ಮಾಡಲು ದೇಶದಲ್ಲೇ ಮೊತ್ತಮೊದಲ ಪ್ರಯತ್ನ ಎಂಬಂತೆ ಡಿಜಿಟಲ್ ಗ್ರಂಥಾಲಯದ ವೆಬ್​ಸೈಟ್ ಮತ್ತು ಇ-ಸಾರ್ವಜನಿಕ ಗ್ರಂಥಾಲಯ ಎಂಬ ಡಿಜಿಟಲ್ ಗ್ರಂಥಾಲಯದ ಆಪ್ ಅನ್ನು ರಾಜ್ಯ ಗ್ರಂಥಾಲಯ ಇಲಾಖೆ ಪ್ರಾರಂಭಿಸಿದೆ. ಸುಮಾರು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ, ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಮೊಬೈಲ್​ನಲ್ಲಿಯೇ ಇ-ಸಾರ್ವಜನಿಕ ಗ್ರಂಥಾಲಯ ಎಂಬ ಆಪ್​ನ ಮೂಲಕ ಓದಬಹುದಾಗಿದೆ. ತಮಗಿಷ್ಟವಾದ ನಿಯತಕಾಲಿಕೆಗಳು, ಭಾಷಾ ಪುಸ್ತಕಗಳು ಇತ್ಯಾದಿಗಳನ್ನು ಇದರಲ್ಲಿ ಓದುವ ಮೂಲಕ ಅಂತರ್ಜಾಲದ ಅಂಗಳ ದಲ್ಲಿ ಗ್ರಂಥಭಂಡಾರವನ್ನು ಪ್ರವೇಶಿಸಬಹುದಾಗಿದ

    ಕಲಿಕಾ ಪೂರಕ ಆಟಗಳು

    ಮೊಬೈಲ್​ನಲ್ಲಿ ಇರುವುದೆಲ್ಲವೂ ಕೆಟ್ಟದ್ದೇನಲ್ಲ. ಕೆಲವು ವೆಬ್​ಸೈಟ್​ಗಳಲ್ಲಿ ಉತ್ತಮ ಕಲಿಕಾ ಪೂರಕ ಆಟಗಳಿರುತ್ತವೆ. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡರೆ ಸಮಯದ ಸದುಪಯೋಗದ ಜತೆಗೆ ಕಲಿಕೆ-ಮನರಂಜನೆಯೂ ಸಿಕ್ಕಂತಾಗುತ್ತದೆ. ಕಠ್ಚಜಟಟ್ಝ.ಜ್ಞಿ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಫನ್ ಕಾರ್ನರ್, ರೈಟಿಂಗ್, ರೀಡಿಂಗ್, ಇಂಗ್ಲಿಷ್ ಗ್ರಾಮರ್, ಸುಡೊಕು… ಹೀಗೆ ಆಟದೊಂದಿಗೆ ಪಾಠದ ಅನೇಕ ಮಜಲುಗಳು ಆ ಒಂದು ಲಿಂಕ್​ನಲ್ಲಿ ಸಿಗುತ್ತವೆ. ಇನ್ನು ಒಚ್ಝಛಿಚಿಜಿ ಎಂಬ ಆಪ್​ಗೆ ಹೋದರೆ ಪದಬಂಧ, ಸುಡೊಕು, ಹಾವು-ಏಣಿ ಮುಂತಾದ ಆಟಗಳ ಮೂಲಕ ಅಂತರ್ಜಾಲದ ಅಂಗಳವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಇವಿಷ್ಟೇ ಅಲ್ಲದೆ ಆನ್​ಲೈನ್ ಅಂಗಳದಲ್ಲಿ ಚೆಸ್, ಕೇರಂನಂತಹ ಆಟಗಳಿಗೂ ಅವಕಾಶವಿದೆ.

    ಸ್ನೇಹಿತರೊಂದಿಗೆ ವೆಬಿನಾರ್ ನಡೆಸಿ!

    ಮನೆಯಲ್ಲಿಯೇ ಲಾಕ್ ಆಗಿರುವುದರಿಂದ ಸ್ನೇಹಿತರನ್ನು ಭೇಟಿ ಮಾಡಲು ಆಗಲಿಲ್ಲ ಎಂಬ ಬೇಸರ ಬೇಡ. ಬದಲಾದ ಕಾಲಕ್ಕೆ ಹೊಂದಿಕೊಂಡು, ತಂತ್ರಜ್ಞಾನವನ್ನೇ ಆಧಾರವನ್ನಾಗಿಸಿ ಆನ್​ಲೈನ್ ಪಾಠ ಕೇಳಿದಂತೆ, ಸ್ನೇಹಿತರನ್ನೂ ವೆಬಿನಾರ್​ಗಳ ಮೂಲಕ ಭೇಟಿ ಮಾಡಿದರಾಯ್ತು. ಘಟಟಞ, ಎಟಟಜ್ಝಛಿ ಞಛಿಛಿಠಿ, Mಜ್ಚಿ್ಟಠಟ್ಛಠಿ ಠಿಛಿಚಞಠ, ಆಜಚ್ಟಚಠಿ ಖಛಿಠ್ಠಿ ಮತ್ತು ಇತರ ಆಪ್​ಗಳ ಮೂಲಕ ಲಿಂಕ್ ಕ್ರಿಯೇಟ್ ಮಾಡಿ, ವಾರಕ್ಕೊಮ್ಮೆ ಸ್ನೇಹಿತರೆಲ್ಲಾ ಆನ್​ಲೈನ್​ನಲ್ಲಿಯೇ ಒಟ್ಟಾಗುವ ಪ್ರಯತ್ನವನ್ನು ಮಾಡಬಹುದಾಗಿದೆ. ಹೀಗೆ ಅಂತರ್ಜಾಲದ ಅಂಗಳದಲ್ಲಿ ಭೇಟಿಯಾದಾಗ, ಕಳೆದೊಂದು ವಾರದಲ್ಲಿ ಓದಿದ ಹೊಸ ಪುಸ್ತಕದ ವಿವರ ಹಂಚಿಕೊಳ್ಳಿ, ಆಡಿದ ಆಟದ ಬಗ್ಗೆ ಹೇಳಿ, ಸ್ವರಚಿತ ಕಥೆ-ಕವನ ಇದ್ದರೆ ವಾಚನ ಮಾಡಿ, ಮನೆಯಲ್ಲಿ ಮಾಡಿದ ಹೊಸರುಚಿ ಅಡುಗೆಯ ಸವಿ ಹಂಚಿಕೊಳ್ಳಿ. ಹೀಗೆ ಮನಬಿಚ್ಚಿ ವಿಚಾರ ವಿನಿಮಯ ಮಾಡುವುದರಿಂದ ಮನದ ಭಾವನೆಗಳಿಗೆ ಸ್ಪಂದನೆ ದೊರೆತಂತಾಗುತ್ತದೆ.

    ಅಂತರ್ಜಾಲ ಆಧರಿಸಿದ ಸ್ಪರ್ಧೆಗಳು

    ಕರೊನಾ ಕರಿನೆರಳಿನ ಕಳೆದೊಂದು ವರ್ಷದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಂತರ್ಜಾಲದ ಅಂಗಳದಲ್ಲಿಯೇ ವಿವಿಧ ಸ್ಪರ್ಧೆಗಳನ್ನು ನಡೆಸುತ್ತಿವೆ. ಸಂಗೀತ, ಭಾಷಣ, ಕಥೆ-ಕವನ ರಚನೆ, ಚಿತ್ರಕಲೆ ಇವೆಲ್ಲವೂ ಆನ್​ಲೈನ್ ಅಂಗಳದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಸಾಮಾನ್ಯವಾಗಿವೆ. ದೊಡ್ಡ ದೊಡ್ಡ ಆಫ್​ಲೈನ್ ವೇದಿಕೆಗಳಲ್ಲಿನ ಸ್ಪರ್ಧೆಗಳಲ್ಲಿ ಸಭಾ ಕಂಪನ ಎದುರಾಗಿ, ಭಾಗವಹಿಸುವಿಕೆಯಲ್ಲಿ ಹಿನ್ನಡೆ ಕಾಣುವವರೂ ಆನ್​ಲೈನ್ ಅಂಗಳದಲ್ಲಿ ಸಮರ್ಥವಾಗಿ ಭಾಗವಹಿಸಬಹುದು. ಮನೆಯೊಳಗೆ ಕುಳಿತು ಆನ್​ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ, ಬಹುಮಾನ ಬರಲಿ, ಬಾರದಿರಲಿ ಸ್ಪರ್ಧಾತ್ಮಕ ಸ್ಪೂರ್ತಿಯಂತೂ ಬೆಳೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts