More

    ಹೋಮ್ ಗಾರ್ಡ್​ಗಳ ಸೇವೆ ಸದಾ ಬಳಕೆಯಾಗಲಿ

    ಶಿಗ್ಗಾಂವಿ: ರಾಜ್ಯದಲ್ಲಿ ಗೃಹರಕ್ಷಕ ದಳದ ಅವಶ್ಯಕತೆ ಇದ್ದು, ತುರ್ತು ಸಂದರ್ಭಗಳಲ್ಲಿ ಮಾತ್ರ ಅವರನ್ನು ಸೇವೆಗೆ ಪರಿಗಣಿಸದೇ ಸದಾ ಪೊಲೀಸರ ಜತೆ ಕೆಲಸ ಮಾಡಲು ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಡಿವೈಎಸ್​ಪಿ ಓ.ಬಿ. ಕಲ್ಲೇಶಪ್ಪ ಹೇಳಿದರು.

    ಪಟ್ಟಣದ ಶರೀಫ ಸಭಾಭವನದಲ್ಲಿ ಜಿಲ್ಲಾ ಗೃಹ ರಕ್ಷಕದಳದಿಂದ ಗುರುವಾರ ಆಯೋಜಿಸಿದ್ದ ಗೃಹ ರಕ್ಷಕದಳದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗೃಹ ರಕ್ಷಕದಳ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದೆ. ಇದರಲ್ಲಿ ಬಹುಪ್ರತಿಭೆಯ ಯುವಕರು ಇದ್ದಾರೆ. ಅವರ ಸೇವೆ ಬಂದೋಬಸ್ತ್​ಗೆ ಸೀಮಿತಗೊಳಿಸದೆ ಇಲಾಖೆಯಲ್ಲಿ ಬರಹಗಾರ, ಚಾಲಕ, ಬೆಂಗಾವಲು ಪಡೆಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಇನ್ನಷ್ಟು ಹೋಮ್ಾರ್ಡ್​ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ನಿಮ್ಮ ಹಾವಭಾವ, ಶಿಸ್ತು, ನಿರೀಕ್ಷಿತ ಮಟ್ಟದಲ್ಲಿ ಸಲ್ಲಿಸುತ್ತಿರುವ ಸೇವೆ ಪೊಲೀಸ್ ಇಲಾಖೆ ಗೌರವ ಹೆಚ್ಚಾಗುವಂತೆ ಮಾಡಿದೆ ಎಂದರು.

    ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ಪ್ರಭಾಕರ ಎಸ್. ಮಂಟೂರ ಮಾತನಾಡಿ, ಇಂಡೋ-ಚೈನಾ ಯುದ್ದಕ್ಕೂ ಮೊದಲು ಗೃಹ ರಕ್ಷಕದಳಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಯುದ್ದದ ನಂತರ ಸಾಕಷ್ಟು ಸೈನಿಕರನ್ನು ಕಳೆದುಕೊಂಡು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಆಂತರಿಕ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾದಾಗ ನಮ್ಮ ಬೆಂಗಾವಲಿಗೆ ವಿಶೇಷ ಪಡೆ ಬೇಕು ಎಂದು ತೀರ್ವನಿಸಿ ಸರ್ಕಾರ 1966ರಲ್ಲಿ ಗೃಹ ರಕ್ಷಕದಳ ಕಾಯ್ದೆ ಎಂದು ಜಾರಿಗೆ ತಂದಿತ್ತು. ಅಂದಿನಿಂದ ಇಂದಿನವರೆಗೂ ಗೃಹ ರಕ್ಷಕದಳ ರಾಜ್ಯದಲ್ಲಿ ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದರು.

    ಅಗ್ನಿಶಾಮಕ ದಳದ ಪಿಎಸ್​ಐ ಬಿ. ಸಂತೋಷ, ತಹಸೀಲ್ದಾರ್ ಪ್ರಕಾಶ ಕುದರಿ, ಶಿಗ್ಗಾಂವಿ ಪ್ಲಟೂನ್ ಕಮಾಂಡರ್ ಎಂ.ಎಸ್. ಕಂಕಣವಾಡ ಮಾತನಾಡಿದರು. ನಿವೃತ್ತಿ ಹೊಂದಿದ ಇಬ್ಬರು ಮಹಿಳಾ ಗೃಹ ರಕ್ಷಕದಳದ ಸಿಬ್ಬಂದಿ ಎ.ಜಿ. ಜಿತಗಿ, ಎಲ್.ಬಿ. ಪಿಸೇ ಅವರನ್ನು ಸನ್ಮಾನಿಸಲಾಯಿತು.

    ಘಟಕಾಧಿಕಾರಿ ಎಂ.ಎನ್. ಮತ್ತೂರ, ಹೋಮ್ಾರ್ಡ್​ಗಳಾದ ಹನುಮಂತಪ್ಪ ವಡ್ಡರ, ನಿಂಗಪ್ಪ ಮಾನೆ, ಬಸಪ್ಪ ವನಹಳ್ಳಿ, ಕೆ.ಎನ್. ಬಿಸೆಟ್ಟಿ, ಎನ್.ವೈ. ಮಾದರ, ಎಂ.ಎ. ಗುಳೇದ, ಎಂ.ಬಿ. ಬಡಿಗೇರ, ಎಲ್.ಎಚ್. ಕಟ್ಟಿಮನಿ, ಡಿ.ಎನ್. ಸುಣಗಾರ, ಎಲ್.ಎಸ್. ಕುಂದಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts