More

    VIDEO| ಐಸ್​ ವಾಟರ್​ನಲ್ಲಿ ಈಜಲು ಹೋಗಿ ಸಾವಿನ ಕದತಟ್ಟಿ ಬಂದ ಟಿಕ್​ಟಾಕ್​ ಸ್ಟಾರ್ ಹೇಳಿದ್ದೇನು ಗೊತ್ತಾ?​

    ನವದೆಹಲಿ: ಜಗತ್ತಿನಾದ್ಯಂತ ತನ್ನದೇ ಹವಾ ಸೃಷ್ಟಿರುವ ವಿಡಿಯೋ ಶೇರಿಂಗ್​ ಆ್ಯಪ್​ ಟಿಕ್​ಟಾಕ್​ಗೆ ಸಾಕಷ್ಟು ಮಂದಿ ಮರುಳಾಗಿದ್ದಾರೆ. ಜನರಿಂದ ಲೈಕ್ಸ್, ಕಾಮೆಂಟ್​ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲದಿಂದ ಅನೇಕರು ಹೊಸ ಹೊಸ ಸಾಹಸಕ್ಕೂ ಕೈಹಾಕುತ್ತಾರೆ. ಆದರೆ, ಆ ಸಾಹಸ ಕೆಲವೊಮ್ಮೆ ಯಮಲೋಕದ ಬಾಗಿಲು ತಟ್ಟಿ ವಾಪಸ್​ ಕರೆದುಕೊಂಡು ಬಂದಿರುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ಅದಕ್ಕೆ ಇನ್ನೊಂದು ಉದಾಹರಣೆ ಸೇರ್ಪಡೆಯಾಗಿದೆ.

    ಜಾಸನ್​ ಕ್ಲಾರ್ಕ್​​​ ಎಂಬ ಅಮೆರಿಕದ ಟಿಕ್​​ಟಾಕ್​ ಸ್ಟಾರ್ ವಿಭಿನ್ನತೆ ಮೆರೆಯಲು ಹೋಗಿ ಸಾವಿನ ಕದ ತಟ್ಟಿ ಬಂದಿದ್ದು, ಅದನ್ನು ಸ್ವತಃ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

    ಯುಎಸ್​ನ ಉತಾಹ್​​​​ ಪ್ರದೇಶದ ಐಸ್​ ವಾಟರ್​ನಲ್ಲಿ ಸ್ವಿಮ್ಮಿಂಗ್​ ಮಾಡುವ ದುಸ್ಸಾಹಸವನ್ನು ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಕ್ಲಾರ್ಕ್​, ನಾನೆಂದಿಗೂ ಸಾವನ್ನು ಹತ್ತಿರದಿಂದ ನೋಡಿರಲಿಲ್ಲ. ನನ್ನ ಕಣ್ಣು ಗುಡ್ಡೆಗಳು ಆದಷ್ಟು ಬೇಗ ಹಿಮಗಟ್ಟುತ್ತದೆ ಎಂದೂ ಯೋಚಿಸಿರಲಿಲ್ಲ. ಐಸ್​ ವಾಟರ್​ಗೂ ಮಂಜುಗೆಡ್ಡೆಯಿಂದ ಆವರಿಸಿದ್ದ ಮೇಲ್ಮೈಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಒಂದು ಕ್ಷಣ ಸಾವಿನ ಬಳಿ ಹೋಗಿ ಬಂದ ಅನುಭವವಾಯಿತು ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಮಂಜುಗೆಡ್ಡೆ ಆವರಿಸಿರುವ ಸರೋವರವೊಂದರಲ್ಲಿ ಮಾನವ ತೂರುವಷ್ಟು ದೊಡ್ಡದಾದ ರಂಧ್ರದ ಮೂಲಕ ಮೇಲ್ಮೈ ಕೆಳಗಿನ ನೀರಿನಲ್ಲಿ ಕ್ಲಾರ್ಕ್​ ಈಜಿಕೊಂಡು ಹೋಗುತ್ತಾರೆ. ಆರಂಭದಲ್ಲಿ ಆರಾಮವಾಗೇ ಈಜುತ್ತಾರೆ. ಬಳಿಕ ಅಡೆತಡೆ ಎದುರಾಗಿ ಈಜಲು ಸಾಧ್ಯವಾಗದಿದ್ದಾಗ ವಾಪಸ್​ ಬರಲು ಯತ್ನಿಸುವ ಕ್ಲಾರ್ಕ್​​ ತಾನು ಬಂದ ದಾರಿಯನ್ನು ಮರೆಯುತ್ತಾರೆ. ಆಗಾಗಲೇ ಸಾಕಷ್ಟು ಸುಸ್ತಾಗಿರುತ್ತಾರೆ. ಬಳಿಕ ರಂಧ್ರವನ್ನು ಹುಡುಕಿ ಮೇಲೆ ಏಳಿ ಮೂರು ಬಾರಿ ಜೋರಾಗಿ ಉಸಿರಾಡಿ ವಾಸ್ತವ ಸ್ಥಿತಿಗೆ ಬರುತ್ತಾರೆ.

    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಕ್ಷಾಂತರ ಮಂದಿ ವಿಡಿಯೋ ನೋಡಿ ತಮ್ಮದೇ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts