More

    ಕರೊನಾಕ್ಕೆ ತತ್ತರಿಸುತ್ತಿದೆ ಅಮೆರಿಕ; 20,000ಗಡಿ ದಾಟಿದ ಸಾವಿನ ಸಂಖ್ಯೆ, ಇಟಲಿಯಲ್ಲಿ 19,468 ಮಂದಿ ಕೊವಿಡ್​-19ಕ್ಕೆ ಬಲಿ

    ವಾಷಿಂಗ್ಟನ್​: ಕರೊನಾ ವೈರಸ್​ಗೆ ಅಮೆರಿಕ ಅಕ್ಷರಶಃ ತತ್ತರಿಸುತ್ತಿದೆ. ಶನಿವಾರ ಯುಎಸ್​ನಲ್ಲಿ ಕೊವಿಡ್​-19ರಿಂದ ಸತ್ತವರ ಸಂಖ್ಯೆ 20,000ದ ಗಡಿದಾಟಿದೆ.

    ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ 20,506ಕ್ಕೆ ಏರಿದ್ದು, ಕರೊನಾ ವೈರಸ್​ನಿಂದ ಅತಿಹೆಚ್ಚು ಸಾವು ಉಂಟಾದ ದೇಶ ಯುಎಸ್​ ಆಗಿದೆ. ಈ ಮೂಲಕ ಇಟಲಿಯನ್ನು ಹಿಂದಿಕ್ಕಿದೆ. ಸುಮಾರು 5,27,111 ಜನರಿಗೆ ಸೋಂಕು ತಗುಲಿದೆ ಎಂದು ಅಲ್ಲಿನ ಕರೊನಾ ಅಂಕಿಅಂಶಗಳನ್ನು ಟ್ಯಾಲಿ ಮಾಡುತ್ತಿರುವ ಹಾಪ್​ಕಿನ್ಸ್​ ವಿಶ್ವವಿದ್ವಾಲಯ ತಿಳಿಸಿದೆ.

    ಯುರೋಪ್​​ನಲ್ಲಿ ಕೊವಿಡ್​ ಅತಿ ಹೆಚ್ಚಾಗಿ ಬಾಧಿಸಿದ್ದು ಇಟಲಿಯಲ್ಲಿ. ಕಳೆದ ವಾರಗಳಲ್ಲಿ ಸಾಲುಸಾಲು ಸಾವು ಕಂಡ ಆ ದೇಶದಲ್ಲಿ ಕರೊನಾದಿಂದ ಮೃತಪಟ್ಟಿದ್ದು 19,468 ಜನರು.

    ಜಗತ್ತಿನ ಎಲ್ಲ ದೇಶಗಳಲ್ಲೂ ಕರೊನಾ ವೈರಸ್​ನಿಂದ ಆತಂಕ ಸೃಷ್ಟಿಯಾಗಿದೆ. 1.7 ಮಿಲಿಯನ್​ ಜನರಿಗೆ ಸೋಂಕು ತಗುಲಿದ್ದು, 107,000 ಮಂದಿ ಮೃತಪಟ್ಟಿದ್ದಾರೆ. ಅನೇಕರ ಆರೋಗ್ಯ ಸುಧಾರಣೆಯಾಗುತ್ತಿರುವುದು ಸಣ್ಣ ಪ್ರಮಾಣದ ಭರವಸೆ ಹುಟ್ಟಿಸಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts