More

    ‘ನೆನಪಿರಲಿ ನರೇಂದ್ರ ಮೋದಿ ತುಂಬ ಕಠಿಣ ವ್ಯಕ್ತಿ’ ಎಂದು ಭಾರತೀಯರಿಗೆ ಹೇಳಿದ ಡೊನಾಲ್ಡ್​ ಟ್ರಂಪ್​; 3 ಬಿಲಿಯನ್​ ಯುಎಸ್ ಡಾಲರ್​ಗಳ ರಕ್ಷಣಾ ಒಪ್ಪಂದ ಘೋಷಣೆ

    ಅಹಮದಾಬಾದ್​: ಅಮರಿಕ ಭಾರತವನ್ನು ಪ್ರೀತಿಸುತ್ತದೆ. ಅಮೆರಿಕ ಭಾರತವನ್ನು ಗೌರವಿಸುತ್ತದೆ ಮತ್ತು ಅಮೆರಿಕ, ಭಾರತ ಹಾಗೂ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ಥ ಮತ್ತು ನಿಷ್ಠೆಯುಳ್ಳ ಸ್ನೇಹಿತನಾಗಿರುತ್ತದೆ ಎಂದು ಡೊನಾಲ್ಡ್​ ಟ್ರಂಪ್ ಹೇಳಿದರು.

    ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್​ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಬಳಿಕ ಮಾತನಾಡಿದ ಅವರು, ಭಾರತದ ಬಗ್ಗೆ ತಮಗೆ ಯಾವಾಗಲೂ ಪ್ರೀತಿಯಿದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಭಾರತದೊಂದಿಗೆ 3 ಬಿಲಿಯನ್​ ಯುಎಸ್ ಡಾಲರ್​ಗಳಷ್ಟು(21, 545 ಲಕ್ಷ ಕೋಟಿ ರೂ.) ಮೊತ್ತದ ರಕ್ಷಣಾ ಒಪ್ಪಂದವನ್ನು ಘೋಷಿಸಿದರು. ನಾಳೆ ಈ ಅತಿದೊಡ್ಡ ಒಪ್ಪಂದಕ್ಕೆ ನಾವಿಬ್ಬರೂ ಸಹಿ ಹಾಕಲಿದ್ದೇವೆ ಎಂಬುದನ್ನು ಟ್ರಂಪ್ ಹೇಳಿದರು.

    ಐದು ತಿಂಗಳ ಹಿಂದೆ ಅಮೆರಿಕ ಭಾರತದ ಮಹಾನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಟೆಕ್ಸಾಸ್​ನಲ್ಲಿರುವ ಅತಿದೊಡ್ಡ ಫೂಟ್​ಬಾಲ್ ಸ್ಟೇಡಿಯಂನಲ್ಲಿ ಸ್ವಾಗತಿಸಿತ್ತು. ಇಂದು ಭಾರತ ನನ್ನನ್ನು ಜಗತ್ತಿನ ಅತಿದೊಡ್ಡ ಕ್ರೀಡಾಂಗಣಕ್ಕೆ ಬರಮಾಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಭಾರತದ ಈ ಆತಿಥ್ಯವನ್ನು ನಾವು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಭಾರತಕ್ಕೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದು ಹೇಳಿದ ಟ್ರಂಪ್ ನರೇಂದ್ರ ಮೋದಿಯವರನ್ನು ತುಂಬುಹೃದಯದಿಂದ ಹೊಗಳಿದರು.
    ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಾಟ ಮಾಡುತ್ತಿದ್ದರು. ಅವರೊಬ್ಬ ಚಹಾ ವಾಲಾ ಎಂಬುದು ಎಲ್ಲರಿಗೂ ಗೊತ್ತು. ಅನೇಕಾನೇಕ ಜನರ ಪ್ರೀತಿಯನ್ನು ಅವರು ಗಳಿಸಿಕೊಂಡಿದ್ದಾರೆ. ಆದರೆ ಒಂದು ವಿಷಯ ಹೇಳುತ್ತೇನೆ. ನರೇಂದ್ರ ಮೋದಿಯವರು ಓರ್ವ ಕಠಿಣ ಪ್ರಧಾನಿ ಎಂದು ಹೇಳಿದರು.

    ಪಿಎಂ ಮೋದಿ ಬರೀ ಗುಜರಾತ್​ನ ಹೆಮ್ಮೆಯಲ್ಲ. ಕಠಿಣ ಪರಿಶ್ರಮ ಮತ್ತು ನಿಷ್ಠೆಗೆ ಮೋದಿಯವರು ಅದ್ಭುತ ಉದಾಹರಣೆ. ಭಾರತೀಯರು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಸಾಕ್ಷಿ ಎಂದು ಮೋದಿಯವರನ್ನು ಹೊಗಳಿದರು.

    ರಕ್ಷಣಾ ಕ್ಷೇತ್ರದಲ್ಲಿ ಯುಎಸ್​ ಮತ್ತು ಭಾರತದ ಪರಸ್ಪರ ಸಹಕಾರವನ್ನು ಬಲಗೊಳಿಸಿಕೊಳ್ಳುವುದು ನಮ್ಮ ಉದ್ದೇಶ. ಜಗತ್ತಿನಲ್ಲಿಯೇ ಅತ್ಯಂತ ಬಲಶಾಲಿಯಾದ, ಅತ್ಯುತ್ತಮವಾದ ರಕ್ಷಣಾ ಸಾಧನಗಳನ್ನು, ಮಿಲಿಟರಿ ಉಪಕರಣಗಳನ್ನು ಭಾರತಕ್ಕೆ ನೀಡುವ ಬಗ್ಗೆ ಯುಎಸ್​ ಚಿಂತನೆ ನಡೆಸುತ್ತಿದೆ. ಭಾರತ ಮತ್ತು ಯುಎಸ್ ಜತೆಯಾಗಿ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತೇವೆ ಎಂದು ಹೇಳಿದರು.

    ಇಸ್ಲಾಮಿಕ್​ ಭಯೋತ್ಫಾದನೆಯ ವಿರುದ್ಧ ಹೋರಾಡಲು, ನಮ್ಮ ದೇಶಗಳ ನಾಗರಿಕರನ್ನು ರಕ್ಷಿಸಿಕೊಳ್ಳಲು ಭಾರತ ಮತ್ತು ಅಮೆರಿಕ ಬದ್ಧವಾಗಿವೆ. ರಕ್ತಪೀಪಾಸುಗಳಾದ ಐಸಿಸ್​ ಉಗ್ರರನ್ನು ಹತ್ತಿಕ್ಕಲು ನಾನು ನನ್ನ ದೇಶದ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇನೆ ಎಂದರು. ಉಗ್ರ ಬಾಗ್ದಾದಿ ಸಾವಿನ ಉಲ್ಲೇಖವನ್ನೂ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts