More

    LIVE: ಭಾರತದ ಉದ್ಯಮಿಗಳೊಂದಿಗೆ ಟ್ರಂಪ್​ ಸಂವಾದ; ಮುಕೇಶ್ ಅಂಬಾನಿ ಉಪಸ್ಥಿತಿ

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ದೆಹಲಿಯಲ್ಲಿ ಉದ್ಯಮಿಗಳ ಜತೆ ಸಂವಾದ ನಡೆಸಿದರು. ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಇದ್ದಾರೆ.  

    ಉದ್ಯಮಿಗಳೊಂದಿಗೆ ಟ್ರಂಪ್​​ ಸಂವಾದ: ನಾನಿಲ್ಲಿರುವುದು ನನಗೆ ಗೌರವ ಎನಿಸುತ್ತಿದೆ. ತುಂಬಾ ವಿಶೇಷವಾದ ಪ್ರಧಾನಮಂತ್ರಿಗಳನ್ನು ನೀವು ಹೊಂದಿದ್ದೀರಾ, ಅವರಿಗೆ ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವು ಚೆನ್ನಾಗಿ ತಿಳಿದಿದೆ. ಅವರೊಬ್ಬ ಕಠಿಣ ವ್ಯಕ್ತಿಯಾಗಿದ್ದು, ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಕೂಡ ಅಭಿವೃದ್ಧಿಗಾಗಿ ಒಟ್ಟಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಟ್ರಂಪ್​ ಹೇಳಿದರು.

    ಡೊನಾಲ್ಡ್​ ಟ್ರಂಪ್​: ಪಾಕಿಸ್ತಾನದ ನೆಲದಲ್ಲಿರುವ ಉಗ್ರರನ್ನು ಮಟ್ಟ ಹಾಕಲು ಆ ದೇಶಕ್ಕೆ ಅಮೆರಿಕ ಕೂಡ ಸಹಕಾರ ನೀಡಲಿದೆ.

    ಡೊನಾಲ್ಡ್​ ಟ್ರಂಪ್​: ಇಸ್ಲಾಮಿಕ್​ ಭಯೋತ್ಪಾದಕರಿಂದ ನಮ್ಮ ದೇಶಗಳ ನಾಗರಿಕರನ್ನು ರಕ್ಷಣೆ ಮಾಡಿಕೊಳ್ಳಲು ಅಮೆರಿಕ ಮತ್ತು ಭಾರತ ಬದ್ಧವಾಗಿದೆ.

    ಡೊನಾಲ್ಡ್​ ಟ್ರಂಪ್​: ವ್ಯಾಪಾರೀ ಸಮಗ್ರ ಒಪ್ಪಂದದಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ.

    ಡೊನಾಲ್ಡ್​ ಟ್ರಂಪ್​: ಭಾರತ ಅಮೆರಿಕದಿಂದ 3 ಬಿಲಿಯನ್​ ಡಾಲರ್​ಗಳಿಗಿಂತಲೂ ಹೆಚ್ಚಿನ ಮೌಲ್ಯದ ಸುಧಾರಿತ ಮಿಲಿಟರಿ ಉಪಕರಣಗಳನ್ನು ಖರೀದಿಸಲಿದೆ.

    ಡೊನಾಲ್ಡ್​ ಟ್ರಂಪ್​: ಭಾರತದ ಭವ್ಯತೆಯನ್ನು ನೋಡಿ ನಾನು ಮತ್ತು ಮೆಲಾನಿಯಾ ವಿಸ್ಮಯಗೊಂಡಿದ್ದೇವೆ.

    ರೇಂದ್ರ ಮೋದಿ: ಅಮೆರಿಕ-ಭಾರತದ ನಡುವೆ ವ್ಯಾಪಾರ ಒಪ್ಪಂದಗಳು ಕುರಿತು ಮಾತುಕತೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. 

    ರೇಂದ್ರ ಮೋದಿ: ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ಭಾರತ ಮತ್ತು ಅಮೆರಿಕ ಒಟ್ಟಾಗಿ ಕಾರ್ಯಾಚರಣೆ ನಡೆಸಲಿದೆ.

    ರೇಂದ್ರ ಮೋದಿ: ಭಾರತ ಮತ್ತು ಅಮೆರಿಕದ ಜನರು ಪರಸ್ಪರ ಹತ್ತಿರ ಆಗಿದ್ದಾರೆ. ಹಲವು ವೃತ್ತಿಯಲ್ಲಿ ತೊಡಗಿಸಿಕೊಂಡವರು, ವಿದ್ಯಾರ್ಥಿಗಳು, ಅಮೆರಿಕದಲ್ಲಿರುವ ಭಾರತದ ವಲಸಿಗರಿಂದ ಎರಡೂ ದೇಶಗಳು ಇನ್ನಷ್ಟು ಹತ್ತಿರ ಆಗಿವೆ.

    ರೇಂದ್ರ ಮೋದಿ: ಅಮೆರಿಕ-ಭಾರತ ಸಹಭಾಗಿತ್ವದ ಬಗ್ಗೆ ನಾವಿಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದೇವೆ. ರಕ್ಷಣೆ, ಭದ್ರತೆ, ಇಂಧನ, ವ್ಯಾಪಾರಗಳ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಅಮೆರಿಕ ಮತ್ತು ಭಾರತ ನಡುವೆ ರಕ್ಷಣಾ ಒಪ್ಪಂದ ಪ್ರಮುಖ ವಿಚಾರ. 

    ಪ್ರಧಾನಿ ನರೇಂದ್ರ ಮೋದಿ:  ನಿನ್ನೆ ಮೊಟೆರಾ ಸ್ಟೇಡಿಯಂನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

    ಜಂಟಿ ಸುದ್ದಿಗೋಷ್ಠಿ ಆರಂಭ

    ಯುಎಸ್​ ಅಧ್ಯಕ್ಷ ಡೊನಾಲ್ಡ್ ಟ್ರಂಪ್​: ಕಳೆದ ಎರಡು ದಿನಗಳಿಂದ ನನಗೆ ಭಾರತದಲ್ಲಿ ಅದ್ಭುತವಾಗಿ ಗೌರವ ಸಿಗುತ್ತಿದೆ. ಅದರಲ್ಲೂ ನಿನ್ನೆ ಮೊಟೆರಾ ಸ್ಟೇಡಿಯಂನಲ್ಲಿ ಸಿಕ್ಕ ಗೌರವ ತುಂಬ ಮಹತ್ವದ್ದಾಗಿತ್ತು. ಸ್ಟೇಡಿಯಂಗೆ ಅಷ್ಟೊಂದು ಜನ ಆಗಮಿಸಿದ್ದು ಬಹುಶಃ ನನಗಾಗಿ ಅಲ್ಲ, ಅವರೆಲ್ಲರೂ ಮೋದಿಯವರನ್ನು ನೋಡಲೆಂದೇ ಬಂದಿದ್ದರು. ಪ್ರತಿಬಾರಿ ನಾನು ನರೇಂದ್ರ ಮೋದಿಯವರ ಹೆಸರು ಹೇಳಿದಾಗಲೂ ಸ್ಟೇಡಿಯಂ ಒಳಗೆ ಇದ್ದ 125 ಸಾವಿರ ಜನರೂ ಕೂಡ ಮೋದಿ ಎಂದು ಚಿಯರ್ ಮಾಡುತ್ತಿದ್ದರು. ಇಲ್ಲಿನ ಜನರು ಮೋದಿಯನ್ನು ಪ್ರೀತಿಸುತ್ತಾರೆ.

    ಪ್ರಧಾನಿ ನರೇಂದ್ರ ಮೋದಿ: ಅಮರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಕುಟುಂಬ ಸಹಿತರಾಗಿ ಬಂದಿದ್ದು ತುಂಬ ಸಂತೋಷ ತಂದಿದೆ. ಅವರು ತಮ್ಮೆಲ್ಲ ಒತ್ತಡ, ಕೆಲಸದ ಮಧ್ಯೆಯೂ ಕೂಡ ನಮ್ಮ ದೇಶಕ್ಕೆ ಬಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ತುಂಬ ಕೃತಜ್ಞನಾಗಿರುತ್ತೇನೆ.

    12.23: ಹೈದರಾಬಾದ್​ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಜಂಟಿ ಸುದ್ದಿಗೋಷ್ಠಿ ಪ್ರಾರಂಭವಾಗಿದೆ.

    11.58 ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಅವರು ದೆಹಲಿಯ ಸರ್ವೋದಯ ಸೀನಿಯರ್​ ಸೆಕೆಂಡರಿ ಶಾಲೆಗೆ ಭೇಟಿ ನೀಡಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ಅವರನ್ನು ಸ್ವಾಗತಿಸಿದರು. ಮೆಲಾನಿಯಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

    11.08: ರಾಜ್​ಘಾಟ್​ನಿಂದ ನೇರವಾಗಿ ಹೈದರಾಬಾದ್ ಭವನಕ್ಕೆ ಆಗಮಿಸಿದ ಡೊನಾಲ್ಡ್​ ಟ್ರಂಪ್​. ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ವಾಗತ

    10.50: ಡೊನಾಲ್ಡ್​ ಟ್ರಂಪ್​ ಅವರು ರಾಜ್​ಘಾಟ್​ನಲ್ಲಿ ಸಸಿ ನೆಟ್ಟರು. ಈ ವೇಳೆ ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ಇದ್ದರು.

    LIVE: ಭಾರತದ ಉದ್ಯಮಿಗಳೊಂದಿಗೆ ಟ್ರಂಪ್​ ಸಂವಾದ; ಮುಕೇಶ್ ಅಂಬಾನಿ ಉಪಸ್ಥಿತಿ

    10.49: ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಮ ನಮನ ಸಲ್ಲಿಸಿದ ಡೊನಾಲ್ಡ್​ ಟ್ರಂಪ್​ ದಂಪತಿ ಸಂದರ್ಶಕರ ಪಟ್ಟಿಯಲ್ಲಿ ವಿವರಣೆ ಬರೆದು, ಸಹಿ ಹಾಕಿದರು.

    LIVE: ಭಾರತದ ಉದ್ಯಮಿಗಳೊಂದಿಗೆ ಟ್ರಂಪ್​ ಸಂವಾದ; ಮುಕೇಶ್ ಅಂಬಾನಿ ಉಪಸ್ಥಿತಿ

    10.40: ಡೊನಾಲ್ಡ್ ಟ್ರಂಪ್​ ಹಾಗೂ ಮೆಲಾನಿಯಾ ಟ್ರಂಪ್​ ಅವರು ರಾಜ್​ ಘಾಟ್​ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. 

    10.38: ದೆಹಲಿಯ ರಾಜ್​ ಘಾಟ್​ ತಲುಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ 

    10.33: ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್​ ಭವನಕ್ಕೆ ತೆರಳಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಡೊನಾಲ್ಡ್​ ಟ್ರಂಪ್ ಆಗಮಿಸಲಿದ್ದಾರೆ. 

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್​, ರಾಷ್ಟ್ರಪತಿ ರಾಮನಾಥ ಕೋವಿಂದ, ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ಗ್ರುಪ್​ ಫೋಟೋಕ್ಕೆ ಪೋಸ್​ ನೀಡಿದರು.

    10.08: ರಾಷ್ಟ್ರಪತಿ ಭವನದಲ್ಲಿ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಯಿತು. ಮೂರೂ ಸೇನಾಪಡೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಗೌರವ ಸಲ್ಲಿಸಲಾಯಿತು. 

    10.07: ಡೊನಾಲ್ಡ್​ ಟ್ರಂಪ್​ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಲ್ಲಿರುವ ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳಿಗೆ ಶೇಕ್​ ಹ್ಯಾಂಡ್ ಮಾಡಿದ ಟ್ರಂಪ್​ ಚುಟುಕಾಗಿ ಮಾತುಕತೆ ನಡೆಸಿದರು.

    10.04: ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಾಗತ ಕೋರಿದರು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಎರಡನೇ ದಿನದ ಕಾರ್ಯಕ್ರಮ ಪ್ರಾರಂಭವಾಗಿದೆ. ರಾಷ್ಟ್ರಪ್ರತಿ ಭವನದಲ್ಲಿ ಟ್ರಂಪ್​ ಅವರ ಗೌರವಾರ್ಥ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಕೇಂದ್ರ ಸಚಿವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts