More

    ಅಮೆರಿಕದ ಸ್ಟಾರ್ ಅಥ್ಲೀಟ್ ಆಸೆಯನ್ನು ಭಗ್ನಗೊಳಿಸಿದ ಕರೊನಾ…

    ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟ ಯಶಸ್ವಿಯಾಗಿ ಒಂದೆಡೆ ಸಾಗುತ್ತಿದ್ದರೂ ಮತ್ತೊಂದೆಡೆ ಕೋವಿಡ್-19 ಕೂಡ ಇನ್ನಿಲ್ಲದಂತೆ ಕಾಡುತ್ತಿದೆ. ಅಮೆರಿಕದ ಪೋಲ್‌ವಾಲ್ಟ್ ಪಟು ಸ್ಯಾಮ್ ಕೆಂಡ್ರಿಕ್ಸ್‌ಗೆ ಗುರುವಾರ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಟದಿಂದ ಹೊರಬಿದ್ದರೆ, ಇವರೊಂದಿಗೆ ಕೆಲ ಅಥ್ಲೀಟ್‌ಗಳು ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಅಥ್ಲೆಟಿಕ್ಸ್ (ಟ್ರ್ಯಾಕ್) ತಂಡವನ್ನು ಅಲ್ಪಾವಧಿಗೆ ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗಿದೆ. ಎರಡು ಬಾರಿ ವಿಶ್ವ ಚಾಂಪಿಯನ್ ಹಾಗೂ ಅಮೆರಿಕದ ದಾಖಲೆ ಹೊಂದಿರುವ ಕೆಂಡ್ರಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಕೇಂದ್ರ ಬಿಂದುವಾಗಿದ್ದರು. ಇದರಿಂದ ಸ್ಪರ್ಧೆ ಆರಂಭವಾಗುವುದಕ್ಕೂ ಮುನ್ನವೇ ಅಮೆರಿಕದ ಅಥ್ಲೀಟ್ ಕೂಟದಿಂದ ಹೊರಬಿದ್ದಿದ್ದಾರೆ.

    ಇದನ್ನೂ ಓದಿ: ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಟ್ರ್ಯಾಕ್ ಅಂಡ್ ಫೀಲ್ಡ್ ಆರಂಭಕ್ಕೆ ಕೇವಲ 24 ತಾಸು ಇರುವಾಗಲೇ ಪ್ರಮುಖ ಅಥ್ಲೀಟ್ ಒಬ್ಬರು ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾದ 54 ಮಂದಿಯನ್ನು (41 ಅಥ್ಲೀಟ್‌ಗಳು, 13 ಸಿಬ್ಬಂದಿ) ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದ್ದು, ಇವರಲ್ಲಿ 3 ಮಂದಿ ಕೆಂಡ್ರಿಕ್ಸ್ ಜತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆದರೆ, ಮೂವರ ವರದಿಯೂ ನೆಗೆಟಿವ್ ಬಂದಿದ್ದು, ಆಸೀಸ್ ತಂಡ ಶೀಘ್ರವೇ ಅಭ್ಯಾಸಕ್ಕಿಳಿಯಲಿದೆ ಎಂದು ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿ ತಿಳಿಸಿದೆ. ಅಥ್ಲೆಟಿಕ್ಸ್‌ನಲ್ಲಿ ಸುಮಾರು 2 ಸಾವಿರ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ.

    ಇದನ್ನೂ ಓದಿ: ಡಾಕ್ಟರ್ ಆಗಬೇಕೆಂಬ ರೈತನ ಮಗಳ ಕನಸು ನನಸಾಗಿಸಿದ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್

    ಸ್ವರ್ಣ ಪದಕ ಕನಸಿನಲ್ಲಿದ್ದ ಪೋಲ್‌ವಾಲ್ಟ್ ಪಟು ಸ್ಯಾಮ್ ಕೆಂಡ್ರಿಕ್ಸ್‌ಗೆ ಕರೊನಾ ಆಘಾತ ತಂದಿದೆ. ಶುಕ್ರವಾರದಿಂದ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭಗೊಳ್ಳುತ್ತಿದ್ದು, ಒಟ್ಟು 48 ಸ್ವರ್ಣ ಪದಕಗಳು ಪಣದಲ್ಲಿದ್ದು, ಭಾರತಕ್ಕೆ ನೀರಜ್ ಚೋಪ್ರಾ, ಸೀಮಾ, ಸಿಮ್ರಾನ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

    ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಕೊವ್ರೇಷಿಯಾ ಸಹೋದರರ ಅಪರೂಪದ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts