More

    ಸಂಭ್ರಮದ ಉರೂಸ್ ಆಚರಣೆ

    ಯಳಂದೂರು : ಪಟ್ಟಣದ ಬಳೇಪೇಟೆಯ ಸುವರ್ಣಾವತಿ ನದಿ ದಡದಲ್ಲಿರುವ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ಉರೂಸ್(ಗಂಧೋತ್ಸವ) ನಡೆಯಿತು.

    ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಜೆ 7 ಗಂಟೆಗೆ ಪಟ್ಟಣದ ಜಾಮೀಯಾ ಮಸೀದಿಯಿಂದ ದೇವರ ನಾಮ ಹಾಡುವ ಫಕೀರರ ತಂಡ ಹಾಗೂ ನೃತ್ಯ ತಂಡಗಳು ದೇವರ ನಾಮಗಳನ್ನು ಹಾಡಿಕೊಂಡು ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ, ಸುವರ್ಣಾವತಿ ಸೇತುವೆ, ಬಳೇಪೇಟೆಯಲ್ಲಿ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು.

    ರಾತ್ರಿ 8.30ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ರಾತ್ರಿ ಅಬ್ರಾರ್ ಅಹ್ಮದ್, ಅಬ್ದುಲ್ ಹಲೀಂ ಹಾಗೂ ಕೇರಳದ ನೃತ್ಯ ತಂಡಗಳು ಪ್ರವಚನ ಹಾಗೂ ದೇವರ ನಾಮಗಳನ್ನು ಹಾಡುವ ಮೂಲಕ ರಂಜಿಸಿದರು. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದರು.
    ಶಾಸಕ ಎ.ಆರ್.ಕೃಷ್ಣಮೂರ್ತಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಹಿಂದು ಭಕ್ತರು ಭಾಗವಹಿಸಿದ್ದರು. ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಶಾಂತಮ್ಮ ನಿಂಗರಾಜು, ಲಕ್ಷ್ಮೀಮಲ್ಲು, ಮುಖಂಡರಾದ ನಯಾಜ್ ಖಾನ್, ಲಿಂಗರಾಜ ಮೂರ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts