More

    ಚಿಕ್ಕನಾಯಕನಹಳ್ಳಿಯಲ್ಲಿ ಬಿಡಾಡಿ ಹಂದಿ, ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಾರ್ವಜನಿಕರ ಒತ್ತಾಯ

    ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಬಿಡಾಡಿ ಹಂದಿಗಳು ಹಾಗೂ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.

    ಪಟ್ಟಣದಲ್ಲಿ ಖಾಲಿ ನಿವೇಶನಗಳು, ಚರಂಡಿಗಳು ಹಂದಿ ಆವಾಸ ಸ್ಥಾನವಾಗಿದ್ದು, ಇವುಗಳ ಹಾವಳಿಯಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಅದೇ ರೀತಿ ನಾಯಿಗಳು ಕೆಲವೆಡೆ ಬೀದಿಗಳಲ್ಲಿ ಮಕ್ಕಳ ಮೇಲೆರಗಿ ಗಾಯಗೊಳಿಸಿರುವ ಉದಾಹರಣೆಗಳಿವೆ. ಪುರಸಭೆ ಅಧಿಕಾರಿಗಳು ಅವುಗಳನ್ನು ಹಿಡಿಯಲು ಗಮನ ಹರಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೆಲ ಕುಟುಂಬಗಳು ಹಂದಿ ಸಾಕಾಣಿಕೆಯನ್ನೇ ಕಸುಬನ್ನಾಗಿಸಿಕೊಂಡಿದ್ದು, ಅವುಗಳ ಸಾಕಣೆಗೆ ಸೂಕ್ತವ್ಯವಸ್ಥೆ ಕಲ್ಪಿಸಿಕೊಳ್ಳದೇ, ಹಂದಿಗಳನ್ನು ರಾತ್ರಿಯ ಹೊತ್ತು ಮನೆಗಳ ಮುಂದಿನ ಗೂಡುಗಳಲ್ಲಿ ಕೂಡಿಹಾಕಿಕೊಂಡು, ಹಗಲು ಹೊತ್ತಿನಲ್ಲಿ ಪಟ್ಟಣದಲ್ಲಿ ಓಡಾಡಲು ಬಿಡುತ್ತಾರೆ. ಹೀಗಾಗಿ ಹಂದಿಗಳು ಚರಂಡಿ, ಕಸದ ರಾಶಿಗಳಲ್ಲಿ ಹೊರಲಾಡಿ ಸಾಂಕ್ರಾಮಿಕ ರೋಗಗಳನ್ನು ಹರಡಬಹುದು ಎಂಬ ಆತಂಕದಲ್ಲಿರುವ ಜನತೆ, ಹಂದಿಗಳು ಹಾಗೂ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಒತ್ತಾಯಿಸಿದ್ದಾರೆ

    ಸ್ಥಳಾಂತರಕ್ಕೆ ಗಮನ ಹರಿಸದ ಪುರಸಭೆ : ಇತ್ತೀಚೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಪುರಸಭೆ ಸದಸ್ಯರು, ಹಂದಿ ಹಾಗೂ ನಾಯಿಗಳನ್ನು ಹಿಡಿಸಿ ಸ್ಥಳಾಂತರ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಹಂದಿ ಸಾಕಾಣಿಕೆದಾರರಿಗೆ ನೋಟಿಸ್ ಜಾರಿವಾಡಿ, ಹಂದಿಗಳ ಜತೆ ನಾಯಿಗಳನ್ನು ಹಿಡಿಸಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲದಿರುವುದು ಪುರಸಭೆ ಸದಸ್ಯರಿಗೆ ಇರುಸುಮುರುಸಾಗಿದೆ.

    ವಾರ್ಡ್‌ನಲ್ಲಿ ಖಾಲಿ ನಿವೇಶನಗಳಿದ್ದು, ಅವು ಸ್ವಚ್ಛತೆ ವಾಡದಿದ್ದರಿಂದ ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ಕೊಟ್ಟಂತಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸೂಕ್ತ ಕ್ರಮಕೈಗೊಳ್ಳಬೇಕು.
    ಪೂರ್ಣಿಮಾ ಸುಬ್ರಹ್ಮಣ್ಯ, ಪುರಸಭೆ ಸದಸ್ಯೆ

    ಹೈಕೋರ್ಟ್ ಆದೇಶದಂತೆ ಹಂದಿಗಳನ್ನು ಹಿಡಿಸಲು ಸಾಧ್ಯವಿಲ್ಲ. ಕಾರಣ ಅವರು ಜೀವನೋಪಾಯಕ್ಕಾಗಿ ಸಾಕಿಕೊಂಡಿರುವುದು. ಸಾಕಾಣಿಕೆದಾರರಿಗೆ ಮನೆ ಬಳಿಯಿಂದ ಹೊರಗೆ ಬಿಡದಂತೆ ನೋಡಿಕೊಳ್ಳಲು ನೋಟಿಸ್ ನೀಡಲಾಗಿದೆ. ನಾಯಿಗಳನ್ನು ಹಿಡಿಸಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು.
    ಶ್ರೀನಿವಾಸ್ , ಮುಖ್ಯಾಧಿಕಾರಿ, ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts