More

    100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌; ಅಯ್ಯಯ್ಯೋ ನಿಜ್ವಾಗಲೂ ಇಷ್ಟು ಭಾರ ಇದ್ಯಾ? ಎಂದ್ರು ಫ್ಯಾನ್ಸ್​

    ಮುಂಬೈ: ವಿಚಿತ್ರವಾದ ಫ್ಯಾಷನ್​ಗೆ ಹೆಸರುವಾಸಿಯಾಗಿರುವ ಸೋಶಿಯಲ್​ ಮೀಡಿಯಾ ತಾರೆ ಉರ್ಫಿ ಜಾವೇದ್‌​​. ಇದೀಗ ಸುಮಾರು 100 ಕೆ.ಜಿ. ತೂಕ ಹೊಂದಿದ ಉಡುಗೆ ತೊಟ್ಟು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

    ಉರ್ಫಿ ಜಾವೇದ್ 100 ಕೆಜಿ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ, ಇದಕ್ಕಾಗಿ ಅವರು ಪೊಲೀಸರಿಂದ ಅನುಮತಿ ಪಡೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌; ಅಯ್ಯಯ್ಯೋ ನಿಜ್ವಾಗಲೂ ಇಷ್ಟು ಭಾರ ಇದ್ಯಾ? ಎಂದ್ರು ಫ್ಯಾನ್ಸ್​

    ನೀಲಿ ಬಣ್ಣದ 100 ಕೆಜಿ ಗೌನ್​ ಧರಿಸಿದ್ದ ಉರ್ಫಿ ಉಡುಪಿಗೆ ತಕ್ಕಂತೆ ಕೇಶ ವಿನ್ಯಾಸ ಹಾಗೂ ಮೇಕಪ್​ ಮಾಡಿಕೊಂಡಿದ್ದರು. ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟ್ಯಾಂಡ್‌ನ ಮೇಲೆ ನಿಂತು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

    ಈ ಉಡುಪು ತುಂಬಾ ಭಾರ ಮತ್ತು ದೊಡ್ಡ ಗಾತ್ರದ್ದಾಗಿದೆ. ಫೋಟೋಶೂಟ್‌ ನಡೆಸುವ ಸ್ಥಳಕ್ಕೆ ಕಾರಿನಲ್ಲಿ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಉಡುಪು ಅಷ್ಟು ದೊಡ್ಡದಾಗಿತ್ತು. ಟೆಂಪೊ ವಾಹನದಲ್ಲಿ ಇವರು ಬಂದಿದ್ದಾರೆ ಎನ್ನಲಾಗಿದೆ.

    ಉರ್ಫಿ ಜಾವೇದ್ ತನ್ನ ಬಟ್ಟೆಗಳ ಆಯ್ಕೆಗಾಗಿ ಆಗಾಗ್ಗೆ ಟ್ರೋಲ್‌ಗೆ ಒಳಗಾಗುತ್ತಾರೆ. ಈ ಹಿಂದೆ, ಉರ್ಫಿ ಜಾವೇದ್ ತನ್ನ ಫ್ಯಾಷನ್ ಬಗ್ಗೆ ಮಾತನಾಡುತ್ತಾ, ನಾನು ಎಲ್ಲರ ಗಮನವನ್ನು ಸೆಳೆಯಬೇಕು. ಆದ್ದರಿಂದ ನಾನು ಹಾಗೆ ಧರಿಸುತ್ತೇನೆ ಎಂದು ಈ ಹಿಂದೊಮ್ಮೆ ಹೇಳಿದ್ದರು.

    ಉರ್ಫಿ ಜಾವೇದ್‌ ಆಗಾಗ ಭಿನ್ನ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಡ್ರೆಸ್​​ ನೋಡಿದ ಫ್ಯಾನ್ಸ್​​, ಯಾಕಮ್ಮಾ ಹೀಗೆಲ್ಲಾ ಮಾಡ್ತೀಯಾ? 100 ಕೆಜಿ ಎಂದರೆ 100 ಜೊತೆ ಒಟ್ಟೆಯನ್ನೇ ಖರೀದಿಸಬಹುದಾಗಿತ್ತು ಎಂದು ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

    VIDEO | ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts