More

    ಧರೆಗುರಳಿದ ವಿದ್ಯುತ್ ಕಂಬಗಳು

    ಸಿದ್ದಾಪುರ: ತಾಲೂಕಿನಾದ್ಯಂತ ಕಳೆದ ಮೂರ‌್ನಾಲ್ಕು ದಿನಗಳಿಂದ ಬೀಸಿದ ಗಾಳಿ-ಮಳೆಗೆ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದ್ದಲ್ಲದೆ, 10ಕ್ಕೂ ಹೆಚ್ಚಿನ ಟಿಸಿಗಳು ಹಾಳಾಗಿವೆ.

    ವಿದ್ಯುತ್ ಕಂಬಗಳು ಮುರಿದು ಬಿದ್ದಲ್ಲಿ ಬದಲಿ ಕಂಬಗಳನ್ನು ಅಳವಡಿಸಿ ಹಾಗೂ ಟಿಸಿಗಳು ಹಾಳಾದಲ್ಲಿ ಬೇರೆ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದರೂ ಗ್ರಾಹಕರಿಗೆ ವಿದ್ಯುತ್ ಲಭ್ಯವಾಗುತ್ತಿಲ್ಲ. ಒಂದು ಕಡೆ ದುರಸ್ತಿ ಮಾಡಿದ ಹಾಗೆ ಮತ್ತೊಂದು ಕಡೆ ವಿದ್ಯುತ್ ತಂತಿಯ ಮೇಲೆ ಮರ ಬೀಳುವುದು, ತಂತಿ ತುಂಡಾಗುತ್ತಿರುವುದು ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಲೆನೋವು ಉಂಟುಮಾಡುತ್ತಿದೆ. ಇದರ ನಡುವೆ ಇನ್ಸುಲೇಟರ್ ಪಂಚರ್ ಆಗುತ್ತಿರುವುದರಿಂದ ಹೆಸ್ಕಾಂ ಸಿಬ್ಬಂದಿ ಅದನ್ನು ಕಂಡು ಹಿಡಿಯುವುದಕ್ಕೆ ಸಂಕಟಪಡುವಂತಾಗಿದೆ.

    ತಾಲೂಕಿನ ಗ್ರಾಮೀಣ ಭಾಗವಾಗಿರುವ ಮಾವಿಗುಂಡಿ, ಹಲಗೇರಿ, ಹೇಮಗಾರ, ಚಂದ್ರಘಟಗಿ, ಇಟಗಿ, ದೊಡ್ಮನೆ, ಹಾರ್ಸಿಕಟ್ಟಾ, ಹೇರೂರು, ಬಾಳೇಸರ, ನಿಲ್ಕುಂದ, ಹೆಗ್ಗರಣಿ, ಬಾಳೇಸರ ಮತ್ತಿತರ ಕಡೆಗಳಲ್ಲಿ ಕಳೆದ ಒಂದು ವಾರದ ಮಳೆಯಿಂದಾಗಿ ವಿದ್ಯುತ್ ಕಣ್ಣುಮುಚ್ಚಾಲೆ ಆಟ ಆಡುತ್ತದೆ. ಇಂದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಇನ್ನು ಆಗಾಗ ವಿದ್ಯುತ್ ಬಂದು ಹೋಗುತ್ತಿರುವುದರಿಂದ ಕೆಲವು ಗ್ರಾಹಕರ ಮನೆಯ ವಿದ್ಯುತ್ ಉಪಕರಣಗಳು ಸುಟ್ಟುಹೋಗಿದೆ.

    ಗಾಳಿ-ಮಳೆಯಿಂದಾಗಿ ವಿದ್ಯುತ್ ಸಂಪರ್ಕ ನೀಡುವುದಕ್ಕೆ ತೊಂದರೆ ಆಗುತ್ತಿದ್ದರೂ ಎಲ್ಲ ಕಡೆಗೂ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts