More

    13.4 ಕೋಟಿ ಯುಪಿಐ ಪಾವತಿ ವಹಿವಾಟು: ಜೂನ್​ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ

    ನವದೆಹಲಿ: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಂತೆ ನಗದು ವಹಿವಾಟು ಕಡಿಮೆಯಾಗಿದೆ. ಯೂನಿಫೈಡ್​ ಪೇಮೆಂಟ್ ಇಂಟರ್​ಫೇಸ್​(ಯುಪಿಐ) ಮೂಲಕ ನಡೆಯುತ್ತಿದ್ದ ಪಾವತಿ ವಹಿವಾಟು ಜೂನ್ ತಿಂಗಳಲ್ಲಿ ಗರಿಷ್ಠ ಮಟ್ಟದಲ್ಲಿ ನಡೆದಿದ್ದು, ಸಾರ್ವಕಾಲಿಕ ದಾಖಲೆಯ 13.4 ಕೋಟಿ ವಹಿವಾಟು ದಾಖಲಿಸಿದೆ. ಇದರ ಮೌಲ್ಯ 2.62 ಲಕ್ಷ ಕೋಟಿ ರೂಪಾಯಿ!

    ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಡೇಟಾ ಪ್ರಕಾರ, ತಿಂಗಳಿಂದ ತಿಂಗಳಿನ ಆಧಾರದಲ್ಲಿ ಮೇ ತಿಂಗಳಿನಲ್ಲಿದ್ದ 12.3 ಕೋಟಿ ವಹಿವಾಟು ಜೂನ್​ನಲ್ಲಿ ಶೇಕಡ 8.94 ಹೆಚ್ಚಾಗಿದೆ. ಯುಪಿಐ ಪಾವತಿ ವಹಿವಾಟಿನ ಮೌಲ್ಯ ಏಪ್ರಿಲ್​ನಲ್ಲಿ 1.51 ಲಕ್ಷ ಕೋಟಿ ರೂಪಾಯಿ ಆಗಿತ್ತು. ಮೇ ತಿಂಗಳಲ್ಲಿ ಇದು 2.18 ಲಕ್ಷ ಕೋಟಿ ರೂಪಾಯಿ ಆಗಿತ್ತು.

    ಇದನ್ನೂ ಓದಿ: 21 ಪೊಲೀಸರಿಗೆ ಸೋಂಕು- ಈವರೆಗೆ 168ಕ್ಕೂ ಮಂದಿಗೆ ಕೋವಿಡ್ | ಸಿಐಡಿ ಕಚೇರಿ ಸೀಲ್​ಡೌನ್

    ಎನ್​ಸಿಪಿಐ 2008ರಲ್ಲಿ ಶುರುವಾಗಿದ್ದು, ಇದು ಎಲ್ಲ ರೀತಿಯ ಪಾವತಿ ವಹಿವಾಟಿಗೆ ಉಸ್ತುವಾರಿ ಸಂಸ್ಥೆಯಾಗಿದೆ. ರಿಟೇಲ್ ಪೇಮೆಂಟ್ ಉತ್ಪನ್ನ ರುಪೇ ಕಾರ್ಡ್​, ಇಮ್ಮೀಡಿಯೇಟ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್​), ಯುಪಿಐ, ಭಾರತ್ ಇಂಟರ್​ಫೇಸ್ ಫಾರ್ ಮನಿ(ಭೀಮ್​), ಭೀಮ್ ಆಧಾರ್, ನ್ಯಾಷನಲ್ ಇಲೆಕ್ಟ್ರಾನಿಕ್​ ಟೋಲ್ ಕಲೆಕ್ಷನ್ (ಎನ್​ಇಟಿಸಿ ಫಾಸ್​ಟ್ಯಾಗ್), ಭಾರತ್ ಬಿಲ್ ಪೇ ಗಳನ್ನು ಹೊಂದಿದೆ. ಇತ್ತೀಚೆಗೆ ಯುಪಿಐ 2.0 ಎಂಬ ಹೆಚ್ಚಿನ ಸುರಕ್ಷಿತ ಮತ್ತು ಗ್ರಾಹಕರಿಗೆ, ವ್ಯಾಪಾರಿಗಳಿಗೆ ಅಗತ್ಯವಾದ ಸಮಗ್ರ ಸೇವೆಗಳನ್ನು ಒಳಗೊಂಡ ಇಂಟರ್ ಫೇಸನ್ನು ಪರಿಚಯಿಸಿದೆ. (ಏಜೆನ್ಸೀಸ್)

    VIDEO| ಹೆಸರಿಗಷ್ಟೇ ನಾವು ವಾರಿಯರ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts