More

    ಚೌಡಯ್ಯ ವೈಚಾರಿಕ ಕ್ರಾಂತಿಯ ಜ್ವಾಲೆ

    ರಾಯಚೂರು
    ಜನಸಾಮಾನ್ಯರ ಮಧ್ಯೆದಿಂದ ಬಂದ ನಿಷ್ಠುರವಾದಿ ನಿಜಶರಣ ಅಂಬಿಗರ ಚೌಡಯ್ಯ ವೈಚಾರಿಕ ಕ್ರಾಂತಿಯ ಬಹುದೊಡ್ಡ ಜ್ಞಾಲೆಯಾಗಿದ್ದರು. ಸರ್ವರು ಪರಿಶುದ್ಧ ಬಾಳು ಕಟ್ಟಿಕೊಳ್ಳಲು ಬಯಸಿದ ಶರಣರಾಗಿದ್ದರು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

    ಸ್ಥಳೀಯ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಶರಣ ಚಿಂತನ ವಚನ ಮಂಥನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಚೌಡಯ್ಯರ ವಚನಗಳು ಬೆಂಕಿಯ ಉಂಡೆಯಿದ್ದಂತೆ. ಅವರು ಸಾತ್ವಿಕ ಸಿಟ್ಟು, ಜನಮನವನ್ನು ತಿದ್ದುವ ಧೋರಣೆಯಾಗಿತ್ತು ಎಂದರು.

    ಬಸವ ಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ವಚನಗಳು ಇಂದಿಗೂ ನಮಗೆಲ್ಲರಿಗೂ ದಾರಿದೀಪವಾಗಿದ್ದು, ವಚನಗಳಲ್ಲಿನ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬದುಕನ್ನು ಸುಂದರ ಹಾಗೂ ಸಾರ್ಥಕಗೊಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

    ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಶರಣರನ್ನು ಬಹುತೇಕವಾಗಿ ಜಾತಿಗೆ ಸಮೀತಗೊಳಿಸಿದ್ದೇವೆ. ಆಯಾ ಶರಣರ ಜಯಂತಿಗಳು ಅವರ ಜಾತಿಗೆ ಸಿಮೀತವಾಗಿರುವುದು ಬಹುದೊಡ್ಡ ದುರಂತವಾಗಿದೆ. ಶರಣರು ಮನುಕುಲಕ್ಕೆ ದಾರಿದೀಪವಾಗಿದ್ದು, ಅವರನ್ನು ಒಂದು ಸಿಮೀತವಾಗಿ ಮಾಡಬಾರದು ಎಂದರು.

    ಈ ಸಂದರ್ಭದಲ್ಲಿ ವಾಜೀದ್ ಸಾಜೀದ್ ರಚಿಸಿದಿ ಚೌಡಯ್ಯರ ಕಲಾಕೃತಿಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿಗಳಾದ ವೀರ ಹನುಮಾನ, ಬಾಬು ಭಂಡಾರಿಗಲ್, ಬಸವ ಕೇಂದ್ರದ ಕಾರ್ಯದರ್ಶಿ ಚೆನ್ನಬಸವಣ್ಣ ಮಹಾಜನಶೆಟ್ಟಿ, ಉಪಾಧ್ಯಕ್ಷ ವಿಜಯಕುಮಾರ ಸಜ್ಜನ್, ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಮುರಳೀಧರ ಕುಲಕರ್ಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts