More

    ಶ್ರೀಮದ್ ಭಾಗವತದಲ್ಲಿ ವಿಜ್ಞಾನ ಅನಾವರಣ

    ಆಧುನಿಕ ವಿಜ್ಞಾನ ಎಂಬುದು ಯಾವೆಲ್ಲಾ ಸತ್ಯಗಳನ್ನು ಸಂಶೋಧನೆ ಮಾಡಿ ವಿಶ್ವಕ್ಕೆ ತಿಳಿಸಿದ್ದೇವೆಯೋ ಅವೆಲ್ಲವುಗಳ ಬಗ್ಗೆ ಶ್ರೀಮದ್ ಭಾಗವತ ಯುಗಾಂತರಗಳ ಹಿಂದೆಯೇ ಬೆಳಕು ಚೆಲ್ಲಿದೆ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ತಿಳಿಸಿದರು.

    ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಅಧಿಕ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಗುರುವಾರ ಮಾತನಾಡಿದರು.

    ಅಣುವಿಜ್ಞಾನ ಎಂಬುದು ವಿಜ್ಞಾನದ ವಿಶೇಷವಾದ ಶಾಖೆ. ಆಧುನಿಕ ವಿಶ್ವ ಈ ವಿಷಯದಲ್ಲಿ ಸಾಕಷ್ಟು ನವನವೀನ ಸಂಶೋಧನೆ ನಡೆಯುತ್ತಿದೆ. ಆದರೆ, ವೇದವ್ಯಾಸರು ಪರಮಾಣುವಿನಲ್ಲೂ ಭಗವಂತನ ಸನ್ನಿಧಾನ ಇದೆ, ದ್ರವ್ಯದಲ್ಲಿ ಕೊನೆಯದೇ ಪರಮಾಣು, ಅಲ್ಲಿಯೂ ವಿಶ್ವವನ್ನು ಆಳುವ ಅಪಾರ ಶಕ್ತಿಯನ್ನು ದೇವರು ತುಂಬಿದ್ದಾನೆಂದು ಯುಗಗಳ ಹಿಂದೆಯೇ ದಾಖಲಿಸಿದ್ದಾರೆ ಎಂದು ಶ್ಲೋಕಗಳ ಸಹಿತ ವಿಶ್ಲೇಷಣೆ ಮಾಡಿದರು.

    ಪರಿಸರ ಕಾಳಜಿ: ಪರಿಸರ ಸಂರಕ್ಷಣೆ ಬಗ್ಗೆ ಇತ್ತೀಚಿನ ದಶಕದಲ್ಲಿ ಹೆಚ್ಚು ಕಾಳಜಿ ಮೂಡುತ್ತಿದೆ. ಶ್ರೀಮದ್ ಭಾಗವತ ಪರಿಸರ ಸಂರಕ್ಷಣೆ ಮಾಡದಿದ್ದರೆ ವಿಶ್ವ ಉಳಿಯದು ಎಂಬ ಎಚ್ಚರಿಕೆ ನೀಡಿದೆ. ಪ್ರತಿಯೊಂದು ಗಿಡ, ಮರ, ಪ್ರಾಣಿಗಳಲ್ಲಿ ದೈವತ್ವ ಕಂಡಿದೆ. ವೃಕ್ಷ ಸಂಕುಲಗಳಂತೆ ಮಾನವರೂ ಉಪಕಾರಿಗಳಾಗಿ ಬಾಳಬೇಕು ಎಂಬ ಎಚ್ಚರಿಕೆಯನ್ನೂ ನೀಡಿದೆ. ಶ್ರೀಮದ್ ಭಾಗವತ ಈ ಎಲ್ಲ ಕಾರಣಗಳಿಂದ ಸಕಲ ದೇಶ- ಕಾಲ ಮತ್ತು ಪರಿಸ್ಥಿತಿಗಳಿಗೂ ತಕ್ಕ ಉತ್ತರ ನೀಡುವ, ನಮ್ಮನ್ನು ಜಾಗೃತವಾಗಿಡುವ ಮಹೋನ್ನತ ಗ್ರಂಥವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts