More

    ವರ್ಷವಾದ್ರೂ ಬಳಕೆಗಿಲ್ಲ ಶೌಚಗೃಹ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ನಗರವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ಅವುಗಳು ಕೇವಲ ನಿರ್ವಣಕ್ಕೆ ಮಾತ್ರ ಸೀಮಿತವಾಗಿದ್ದು, ಜನರ ಬಳಕೆಗೆ ಸಿಗುತ್ತಿಲ್ಲ.

    ನಗರದಲ್ಲಿ ಸ್ವಚ್ಛ ಭಾರತ ಅಭಿಯಾನ ಸೇರಿ ವಿವಿಧ ಯೋಜನೆಯಡಿ 35 ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗಿದೆ. ಅದರಲ್ಲಿ 8 ಶೌಚಗೃಹಗಳ ನಿರ್ವಹಣೆಯನ್ನು ಹೊರ ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗಿದೆ. ಇನ್ನುಳಿದ ದೊಡ್ಡಪೇಟೆ ರಂಗನಾಥ ನಗರ, ಸುಣಗಾರ ಓಣಿ, ಸಿದ್ದೇಶರ ನಗರ ಅಲ್ತಾಫ್ ಬಡಾವಣೆ, ಗೂಡ್ಸ್​ಶೆಡ್ ರಸ್ತೆ, ಕುರುಬಗೇರಿ, ಸೊಪ್ಪಿನಪೇಟೆ, ಜಾಲಗಾರ ಓಣಿ, ದೊಡ್ಡಕಲ್ಲ ಬಳಿ ಸೇರಿ ವಿವಿಧೆಡೆ ಇರುವ 27 ಶೌಚಗೃಹಗಳು ನಿರ್ವಹಣೆ ಕೊರತೆಯಿಂದ ಬಂದ್ ಆಗಿವೆ.

    ಸಿದ್ದೇಶ್ವರ ನಗರದ ಅಲ್ತಾಫ್ ಬಡಾವಣೆಯಲ್ಲಿ ಕಳೆದ ವರ್ಷ ಸ್ವಚ್ಛ ಭಾರತ ಅಭಿಯಾನದಡಿ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ಈವರೆಗೂ ನೀರಿನ ವ್ಯವಸ್ಥೆ ಮಾಡದ ಕಾರಣ ಬಳಕೆಗೆ ಮುಕ್ತಗೊಳಿಸಿಲ್ಲ. ಹೀಗಾಗಿ ಶೌಚಗೃಹದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ.

    ರಂಗನಾಥ ನಗರ, ಸುಣಗಾರ ಓಣಿ, ಗೂಡ್ಸ್​ಶೆಡ್ ರಸ್ತೆಯ ಶೌಚಗೃಹಗಳು ಹಂದಿಗಳ ವಾಸತಾಣವಾಗಿದ್ದು, ಒಳಗಡೆ ಯಾರೂ ಹೋಗದ ಸ್ಥಿತಿ ನಿರ್ವಣವಾಗಿದೆ. ಆದ್ದರಿಂದ ಸುತ್ತಲಿನ ಜನತೆ ರಸ್ತೆಯ ಅಕ್ಕಪಕ್ಕದಲ್ಲಿಯೇ ಬಹಿರ್ದೆಸೆಗೆ ಕುಳಿತುಕೊಳ್ಳುತ್ತಿದ್ದಾರೆ.

    ನಗರಸಭೆ ಪರಿಸರ ಇಂಜಿನಿಯರ್ ವಿಭಾಗದಲ್ಲಿ ಇಬ್ಬರು ಅಧಿಕಾರಿ, ಕಿರಿಯ ಆರೋಗ್ಯ ನಿರೀಕ್ಷಕರು ನಾಲ್ವರು ಹಾಗೂ 160ಕ್ಕೂ ಅಧಿಕ ಪೌರ ಕಾರ್ವಿುಕರಿದ್ದಾರೆ. ಆದರೂ ಶೌಚಗೃಹಗಳು ನಿರ್ವಹಣೆ ಕೊರತೆ ಎದುರಿಸುವಂತಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೆ ಸೂಕ್ತ ಕ್ರಮ ಕೈಗೊಂಡು ಬಂದ್ ಆಗಿರುವ ಶೌಚಗೃಹಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

    ಈ ಭಾಗದಲ್ಲಿ ಶೌಚಗೃಹ ನಿರ್ವಿುಸಿ ವರ್ಷ ಕಳೆದರೂ ಬಳಕೆಗೆ ಮಾತ್ರ ಸಿಗುತ್ತಿಲ್ಲ. ಇದರಿಂದ ಮಹಿಳೆಯರು, ಮಕ್ಕಳು ಬಯಲು ಬಹಿರ್ದೆಸೆಗೆ ತೆರಳಲು ನಾನಾ ಬಗೆಯ ತೊಂದರೆ ಅನುಭವಿಸಬೇಕಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    | ನೌಷಾದ್ ಖಾನ್, ಸಿದ್ಧೇಶ್ವರ ನಗರ ನಿವಾಸಿ

    ಬಂದ್ ಆಗಿರುವ ಶೌಚಗೃಹಗಳನ್ನು ಪುನರಾರಂಭಿಸಲು ಹಾಗೂ ಅವುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 15ನೇ ಹಣಕಾಸಿನಲ್ಲಿ 6.50 ಲಕ್ಷ ರೂ. ಮೀಸಲಿಡಲಾಗಿದೆ. ಟೆಂಡರ್ ಕರೆಯುವುದು ಬಾಕಿಯಿದ್ದು, ಮುಂದಿನ ದಿನದಲ್ಲಿ ಎಲ್ಲವನ್ನೂ ಆರಂಭಿಸಲಾಗುವುದು.

    | ಡಾ. ಎನ್. ಮಹಾಂತೇಶ, ರಾಣೆಬೆನ್ನೂರ ನಗರಸಭೆ ಆಯುಕ್ತ

    ರಾಣೆಬೆನ್ನೂರ ನಗರದಲ್ಲಿ ಬಂದ್ ಆಗಿರುವ ಎಲ್ಲ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ.

    | ರೂಪಾ ಚಿನ್ನಿಕಟ್ಟಿ, ರಾಣೆಬೆನ್ನೂರ ನಗರಸಭೆ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts