More

    ಬೆಂಬಿಡದ ಕರೊನಾ ಭೂತ

    ಬೆಳಗಾವಿ: ಜಿಲ್ಲೆಯ ಜನರಿಗೆ ಕರೊನಾ ವೈರಸ್ ಬೆಂಬಿಡದ ಭೂತದಂತೆ ಕಾಡುತ್ತಿದ್ದು, ಭಾನುವಾರ 172 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಸೋಂಕಿತರ ಸಂಖ್ಯೆ 3,628ಕ್ಕೆ ಏರಿಕೆಯಾಗಿದೆ.

    ಬೆಳಗಾವಿ ತಾಲೂಕಿನಲ್ಲಿ 113, ಸವದತ್ತಿ ತಾಲೂಕಿನಲ್ಲಿ 18, ಚಿಕ್ಕೋಡಿ, ಬೈಲಹೊಂಗಲ ತಾಲೂಕಿನಲ್ಲಿ ತಲಾ 7, ಅಥಣಿ, ರಾಯಬಾಗ, ರಾಮದುರ್ಗ ತಾಲೂಕಿನಲ್ಲಿ ತಲಾ 6, ಹುಕ್ಕೇರಿ ತಾಲೂಕಿನಲ್ಲಿ 4, ಖಾನಾಪುರ ತಾಲೂಕಿನಲ್ಲಿ 3 ಹಾಗೂ ಗೋಕಾಕ ತಾಲೂಕಿನ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಭಾನುವಾರ ಕರೊನಾ ಸೋಂಕಿತ ಬೆಳಗಾವಿಯ 54 ವರ್ಷದ ಪುರುಷ ಮೃತಪಟ್ಟಿದ್ದು, ಮೃತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

    56 ಜನ ಬಿಡುಗಡೆ: ಕರೊನಾ ಸೋಂಕು ತಗುಲಿದ್ದ 56 ಜನರು ಭಾನುವಾರ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಈವರೆಗೆ ಒಟ್ಟು 1,045 ಜನ ಬಿಡುಗಡೆಯಾದಂತಾಗಿದೆ. 2,508 ಸಕ್ರಿಯ ಪ್ರಕರಣಗಳಿವೆ. 492 ಶಂಕಿತರ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 44,024 ಜನರ ಮೇಲೆ ನಿಗಾ ವಹಿಸಲಾಗಿದೆ. 8,555 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7,804 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 25,278 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 42,728 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 37,840 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

    ಐಸಿಎಂಆರ್ ಸಿಬ್ಬಂದಿಗೂ ಭೀತಿ: ಬೆಳಗಾವಿಯ ಐಸಿಎಂಆರ್ ಲ್ಯಾಬ್ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರಿಗೆ ಕರೊನಾ ಸೋಂಕು ತಗುಲಿದೆ ಎಂಬ ಮಾಹಿತಿಯಿದ್ದು, ಕ್ಯಾಂಟೀನ್‌ನಲ್ಲಿ ಊಟೋಪಹಾರ ಸೇವಿಸಿದ್ದ 5ಕ್ಕೂ ಹೆಚ್ಚು ಲ್ಯಾಬ್ ಸಿಬ್ಬಂದಿ ಭೀತಿಗೊಳಗಾಗಿದ್ದಾರೆ. ಈ ಮಹಿಳೆಯರಿಗೆ ರೋಗದ ಗುಣ ಲಕ್ಷಣ ಇರದ ಹಿನ್ನೆಲೆಯಲ್ಲಿ ಸುಭಾಷ ನಗರದ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts