More

    ಅವೈಜ್ಞಾನಿಕ ಟೋಲ್‌ಗೇಟ್‌ನಿಂದ ಜನರಿಗೆ ತೊಂದರೆ

    ಗಂಗಾವತಿ: ಭತ್ತ ಅಭಿವೃದ್ಧಿ ನಿಗಮ ಮತ್ತು ಜಿಲ್ಲೆಯ ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರೈತ ಸಂಘದ ಸದಸ್ಯರು ಉಪವಾಸ ಪ್ರತಿಭಟನೆ ಮಂಗಳವಾರ ನಡೆಸಿದರು.

    ಇದನ್ನೂ ಓದಿ: http://ಅವೈಜ್ಞಾನಿಕ ಟೋಲ್‌ಗೇಟ್‌ನಿಂದ ಜನರಿಗೆ ತೊಂದರೆ

    ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಜೆವರಿಗೂ ಉಪವಾಸ ಕೈಗೊಂಡ ಸದಸ್ಯರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಉಪವಾಸದಿಂದ ಅಸ್ವಸ್ಥಗೊಂಡ ಸದಸ್ಯರಾದ ಅಮರೇಶ ಚಾಗಬಾವಿ ಮತ್ತು ಹನುಮಂತಪ್ಪ ನಾಯಕರಿಗೆ,

    ಉಪವಿಭಾಗ ಆಸ್ಪತ್ರೆ ವೈದ್ಯರು ತಪಾಸಣೆ ಮಾಡಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮನವಿ ಸ್ವೀಕರಿಸಿದರು. ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ರಾಜ್ಯದ 18 ಜಿಲ್ಲೆಯಲ್ಲಿ ಭತ್ತ ಬೆಳೆಯುತ್ತಿದ್ದು,

    ಲಕ್ಷಾಂತರ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗುತ್ತಿದ್ದರೂ ಭತ್ತದ ಅಭಿವೃದ್ಧಿ ಮಂಡಳಿ ಸ್ಥಾಪಿಸಿಲ್ಲ. ಜಿಲ್ಲೆಯಲ್ಲಿರುವ ಅವೈಜ್ಞಾನಿಕ ಟೋಲ್‌ಗೇಟ್‌ನಿಂದ ಆರ್ಥಿಕ ಹೊರೆಯಾಗಿದೆ.

    ರೈತರಿಗೆ 12 ನಿರಂತರ ವಿದ್ಯುತ್ ಪೂರೈಕೆ, ರೈತರ ಸಾಲದ ಮರುಪಾವತಿಗೆ ಕಾಲವಕಾಶ, ರಾಜ್ಯ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts