More

    ಕವಳೇಶ್ವರ ಜಾತ್ರೆ ನಿರ್ಬಂಧ ಸಡಿಲಿಸಿ

    ದಾಂಡೇಲಿ: ಜೊಯಿಡಾ ತಾಲೂಕಿನ ಪನ್ಸೋಲಿ ಹತ್ತಿರದ ಕವಳಾ ಗುಹೆಯಲ್ಲಿ ಶಿವರಾತ್ರಿಯಂದು ನಡೆಯುವ ಕವಳೇಶ್ವರ ಜಾತ್ರಾ ಮಹೋತ್ಸವವನ್ನು ಕೋವಿಡ್ ಹಿನ್ನ್ನೆಲೆಯಲ್ಲಿ ಸ್ಥಗಿತಗೊಳಿಸುತ್ತಿರುವುದನ್ನು ಖಂಡಿಸಿ ಮಾಜಿ ಶಾಸಕ ಸುನಿಲ ಹೆಗಡೆ ಸ್ಥಳೀಯ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಗೊರವಾರ ಅವರಿಗೆ ಮನವಿ ಸಲ್ಲಿಸಿದರು.

    ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಜಾತ್ರೆ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿರುವ ಸಂದರ್ಭದಲ್ಲಿ, ಕವಳಾ ಜಾತ್ರೆಗೆ ವನ್ಯ ಜೀವಿ ವಿಭಾಗದವರು ನಿರ್ಬಂಧನೆ ಹೇರಿ ಆದೇಶ ಹೊರಡಿಸಿ ಹಿಂದುಗಳ ಭಾವನೆಗಳಿಗೆ ನೋವು ಉಂಟು ಮಾಡುತ್ತಿರುವುದು ಸರಿಯಲ್ಲ ಎಂದರು.

    ಕವಳಾ ಗುಹೆಗೆ ಹೋಗುವ ರಸ್ತೆ ಅಲ್ಲದೆ, ಅಂಬಿಕಾನಗರದಿಂದ ಕವಳಾ ತಲುಪಲು ಇರುವ ಮೆಟ್ಟಿಲುಗಳ ದುರಸ್ತಿ, ಕಾಳಿ ನದಿ ಉಗಮ ಸ್ಥಾನ ಡಿಗ್ಗಿ ತಲುಪುವ ರಸ್ತೆ, ಎರಡು ವರ್ಷದಿಂದ ಹಾಳಾದ ಕುವೇಶಿ-ಗಂಡ್ಸೋಲಿ ರಸ್ತೆ ಸುಧಾರಿಸಿ ದೂದ್​ಸಾಗರ ಜಲಪಾತದಿಂದ ನೀರು ಬೀಳುವ ಕರ್ನಾಟಕದ ಗಂಡ್ಸೋಲಿ ಮೇಲ್ಭಾಗಕ್ಕೆ ತಲುಪಲು ಅನುವು ಮಾಡಿಕೊಟ್ಟು ಜೊತೆಗೆ ಪ್ರವಾಸೋದ್ಯಮಕ್ಕೆ ನೆರವಾಗುವ ಕೆನೊಪಿ ವಾಕ್ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಪ್ರತ್ಯೇಕ ಮನವಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿದರು.

    ಹಳಿಯಾಳದ ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಕರಂಜೇಕರ, ದಾಂಡೇಲಿಯ ಬಿಜೆಪಿ ತಾಲೂಕು ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಜೊಯಿಡಾದ ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ರೇಡಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಜೊಯಿಡಾ ಬಿಜೆಪಿ ಅಧ್ಯಕ್ಷ ತುಕಾರಾಮ ಮಾಂಜ್ರೇಕರ್, ದಾಂಡೇಲಿ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಬಿಜೆಪಿಯ ರಾಜ್ಯ ಮಹಿಳಾ ಸದಸ್ಯೆ ಶಾರದಾ ಪರಶುರಾಮ ಹಾಗೂ ಬಿಜೆಪಿಯ ನಗರಸಭಾ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts