More

    ದಲಿತ ಕುಟುಂಬಕ್ಕೆ ಅರಣ್ಯ ಇಲಾಖೆ ಅನ್ಯಾಯ

    ಉಡುಪಿ: ಅರಣ್ಯಾಧಿಕಾರಿಗಳ ಅನ್ಯಾಯ, ಸರಣಿ ಅಕ್ರಮಗಳ ವಿರುದ್ಧ ಮೂರು ದಶಕದಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ದಲಿತ ಕುಟುಂಬಕ್ಕೆ ಈವರೆಗೆ ನ್ಯಾಯ ದೊರೆತಿಲ್ಲ. ಹೊಳೆನರಸೀಪುರ ಅಂಬೇಡ್ಕರ್ ಕಾಲನಿಯ 87 ವರ್ಷದ ಗಿಡ್ಡಯ್ಯ ತಮ್ಮ ಕುಟುಂಬಕ್ಕೆ ಅರಣ್ಯ ಅಧಿಕಾರಿಗಳಿಂದಾಗಿರುವ ಅನ್ಯಾಯಗಳ ವಿರುದ್ಧ 36 ವರ್ಷಗಳಿಂದ ಹೋರಾಡುತ್ತಿದ್ದು, ಇದೀಗ ನ್ಯಾಯ ಪಡೆಯಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಕುಟುಂಬ ಆಶ್ರಯಿಸಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಗಿಡ್ಡಯ್ಯ ಅವರ 2ನೇ ಮಗ ನರಸಿಂಹಮೂರ್ತಿ 1984ರಲ್ಲಿ ದಿನಗೂಲಿ ಅರಣ್ಯ ವೀಕ್ಷಕನಾಗಿ ಅರಣ್ಯ ಇಲಾಖೆೆ ಸೇರಿದ್ದರು. 1984ರ ಮೊದಲು ಕೆಲಸಕ್ಕೆ ಸೇರಿದ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯಬಾರದೆಂಬ ಸುಪ್ರೀಂಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ಇಲಾಖೆ ಕೆಲಸದಿಂದ ವಜಾ ಮಾಡಿತು. 1991ರ ತೀರ್ಪಿನಲ್ಲಿ ಕಾರ್ಮಿಕ ನ್ಯಾಯಾಲಯ ನರಸಿಂಹಮೂರ್ತಿ ಅವರನ್ನು ಮರುನೇಮಕ ಮಾಡಿ ನಿರುದ್ಯೋಗ ದಿನಗಳನ್ನು ಸೇವಾವಧಿ ಎಂದು ಪರಿಗಣಿಸಿ ಸಂಬಳ ನೀಡುವಂತೆ ಆದೇಶಿಸಿತ್ತು. ಕೆಲಸಕ್ಕೆ ಮರುನೇಮಿಸಿದರೂ ಸಂಬಳ ನೀಡಲಿಲ್ಲ.ಮತ್ತೆ ನ್ಯಾಯಲಯದಲ್ಲಿ ಹೋರಾಟ ನಡೆಸಿದಾಗ 2001ರಲ್ಲಿ ತೀರ್ಪು ಪರವಾಗಿ ಬಂದಿದ್ದು, ಮೂರ್ತಿಯವರಿಗೆ ಸಂಬಳ ಸಿಕ್ಕಿದ್ದು 7 ವರ್ಷಕ್ಕೆ 45 ಸಾವಿರ ರೂ ಮಾತ್ರ.ಈ ಹಣ ನೀಡಲೂ 4 ವರ್ಷ ಸತಾಯಿಸಲಾಗಿದೆ.

    ಗಿಡ್ಡಯ್ಯನವರ ಎರಡನೇ ಮಗಳು 2007ರಲ್ಲಿ ಹೊಳೆನರಸೀಪುರದ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ತಿಂಗಳ ವೇತನ 1 ಸಾವಿರ ರೂ.ಗೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಸೇರಿದರು. 9 ವರ್ಷ ದುಡಿದ ತನಗೆ ಅರಣ್ಯ ಇಲಾಖೆ ದರ ಪಟ್ಟಿಯಂತೆ ಸಂಬಳ ನೀಡಲು ವಿನಂತಿಸಿದ್ದರು. ಇಲಾಖೆ ದಾಖಲೆಗಳನ್ನು ಪರಿಶೀಲಿಸಿದಾಗ ಪ್ರತಿ ತಿಂಗಳಲ್ಲಿ 10,043 ರೂ, ವೇತನದ ಬಿಲ್ ಸರ್ಕಾರಕ್ಕೆ ಸಲ್ಲಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಹೇಮಲತಾಗೆ ವಿವಿಧ ರೀತಿಯ ಹಿಂಸೆ ನೀಡಿ 2016ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಶಾನುಭಾಗ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts