More

    ಕುಲಪತಿಗಳ ಹೆಸರಿನಲ್ಲಿ ಹಣದ ಬೇಡಿಕೆ

    ಹೊಸಪೇಟೆ : ಜಾಗತಿಕಯುಗದಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ ಸೈಬರ್ ವಂಚನೆ ನಡೆಯುತ್ತಲೇ ಇವೆ. ಇದೀಗ ಖದೀಮರು ವಿವಿಗಳ ಕುಲಪತಿಗಳನ್ನು ಟಾರ್ಗೆಟ್ ಮಾಡಿದ್ದು, ಅದರಲ್ಲಿ ಹಣದ ಬೇಡಿಕೆ ಇಟ್ಟಿದ್ದಾರೆ.

    ಇದನ್ನೂ ಓದಿ : ಕನ್ನಡ ವಿವಿ ಸಿಇಟಿಯಲ್ಲಿ ನಟಿ ಪವಿತ್ರ ಲೋಕೇಶ್ ಪಾಸ್

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್‌ನಲ್ಲಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಫೋಟೋ ಬಳಸಿದ್ದು, ರಾಜ್ಯಪಾಲರ  ಕಚೇರಿಯ ಶರ್ಮಾ ಎಂಬುವರು ಸೇರಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಜನಾರ್ದನ್, ಚಲುವರಾಜ, ವಿರೂಪಾಕ್ಷ ಪೂಜಾರಿ ಹಾಗೂ ಹಲವರಿಗೆ ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಮೂಲಕ ಹಣದ ಬೇಡಿಕೆ ಇಟ್ಟಿದ್ದಾನೆ.

    ಇದನ್ನು ಕುಲಪತಿ ಗಮನಕ್ಕೆ ತಂದಾಗ ‘ಈ ಸಂದೇಶಕ್ಕೆ ಯಾರೂ ಪ್ರತಿಕ್ರಿಯೆಸಬೇಡಿ’ ಎಂದು ತಮ್ಮ ವಾಟ್ಸ್ಆ್ಯಪ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಂತರ ವಾಟ್ಸ್ಆ್ಯಪ್‌ ಕುಂದುಕೊರತೆಗಳ ಶಾಖೆ ಮತ್ತು ಸಮೀಪದ ಕಮಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾದ ನಂತರ ವಾಟ್ಸಾಪ್ ಡಿಪಿಯಲ್ಲಿ ಅವರ ಪೋಟೋ ತೆರವು ಮಾಡಿದ್ದು, ಆ ಜಾಗಕ್ಕೆ ಧಾರವಾಡ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಿಸಿ ಫೋಟೋ ಬಳಸಲಾಗಿದೆ. ಇವರು ಕೂಡ ದೂರು ದಾಖಲಿಸಿದ್ದಾರೆ.

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ನನ್ನ ಪೋಟೋ ಬಳಸಿ ವಾಟ್ಸ್‌ಆ್ಯಪ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದು ಗಮನಕ್ಕೆ ಬಂದಿದೆ. ಅದೃಷ್ಟವಶಾತ್ ಯಾರೂ ವಂಚನೆಗೆ ಒಳಗಾಗಿಲ್ಲ. ಠಾಣೆಯಲ್ಲಿ ದೂರುದಾಖಲಿಸಿರುವೆ.
    | ಡಾ.ಡಿ.ವಿ.ಪರಶಿವಮೂರ್ತಿ, ಕುಲಪತಿ, ಕನ್ನಡ ವಿವಿ

    ನನ್ನ ಪೊಟೋ ವಾಟ್ಸ್ಆ್ಯಪ್ ಡಿಪಿಯಲ್ಲಿ ಹಾಕಿಕೊಂಡಿದ್ದು ಗಮನಕ್ಕೆ ಬಂತು. ನನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಪ್ರತಿಕ್ರಿಯೆ ಮಾಡಿಬೇಡಿ ಎಂದು ಮಾಹಿತಿ ನೀಡಿರುವೆ. ಇಂತಹ ವಂಚನೆ ಮಾಡುವವರಿಂದ ಎಚ್ಚರಿಕೆಯಿಂದ ಇರಬೇಕು.
    | ಪ್ರೊ.ಕೆ.ಬಿ.ಗುಡಿಸಿ, ಕರ್ನಾಟಕ ವಿವಿಯ ಕುಲಪತಿ, ಧಾರವಾಡ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts