More

    ದೇಶದ ಅಭಿವೃದ್ಧಿಗೆ ಕೇಂದ್ರ ಬಜೆಟ್ ನೀಲಿನಕ್ಷೆ

    ಬಾಗಲಕೋಟೆ: ಜನರ ಆರ್ಥಿಕ ಅಭಿವೃದ್ಧಿ ಮೇಲೆ ದೇಶದ ಅಭಿವೃದ್ಧಿ ಅವಲಂಬಿಸಿದೆ. ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ನೀಲಿನಕ್ಷೆಯಂತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕುಮಾರ ಜಿಗಜಿನ್ನಿ ಹೇಳಿದರು.

    ನಗರದ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರ ಕಾಲೇಜು ವಿದ್ಯಾರ್ಥಿಗಳ ಬಜೆಟ್ ಪೆ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದ ಸುಸ್ಥಿರ ಅಭಿವೃದ್ಧಿಗೆ ಸರ್ಕಾರಗಳು ಮಂಡಿಸುವ ಬಜೆಟ್‌ಗಳು ಬಹು ಪ್ರಾಮುಖ್ಯ ಪಡೆದುಕೊಂಡಿವೆ. ಒಂದು ಅಂಶದ ಟೀಕೆಯಿಂದ ಇಡೀ ಬಜೆಟ್‌ನ್ನು ಅಲ್ಲಗಳೆಯಬಾರದು. ಬಜೆಟ್ ಮೇಲೆ ಉತ್ತಮ ಚರ್ಚೆಗಳಾಗಬೇಕು ಎಂದರು.

    ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪ್ರಕಾಶ ವಡವಡಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಬಜೆಟ್ ಮಂಡನೆ ಮಾಡುವುದು ಆರ್ಥಿಕ ಅಭಿವೃದ್ಧಿ ಜತೆಗೆ ದಿಕ್ಸೂಚಿ ಅಡಗಿರುತ್ತದೆ. ಆರೋಗ್ಯ ಸಂಪತ್ತು, ಉತ್ತಮ ಶಿಕ್ಷಣ, ಉದ್ಯೋಗಾವಕಾಶಗಳ ಗಮನದಲ್ಲಿಟ್ಟುಕೊಂಡು ಸರ್ಕಾರ ಬಜೆಟ್ ಮಂಡಿಸುತ್ತದೆ ಎಂದು ಹೇಳಿದರು.

    ಬಜೆಟ್ ಪೆ ಚರ್ಚಾ ಕುರಿತು ಸ್ಪರ್ಧೆಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಬಿವಿವಿ ಸಂಘದ ಸದಸ್ಯ ಬಿ.ಎಸ್.ಹಿರೆಗೌಡರ, ಎಸ್.ಎ ನಾವಲಗಿ ಉಪಸ್ಥಿತರಿದ್ದರು. ಶ್ರದ್ಧಾ ಸರ್‌ದೇಸಾಯಿ ನಿರೂಪಿಸಿದರು. ರೋಹಿತ್ ಹಂಗರಗಿ ಪರಿಚಯಿಸಿದರು. ಐಶ್ವರ್ಯ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts