More

    ಎಡದಂಡೆ ಕಾಲುವೆಗೆ ನೀರು ಹರಿಸಿ. ಕರ್ನಾಟಕ ಅನ್ನದಾತ ರೈತ ಸಂಘ ಒತ್ತಾಯ

    ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಏ.30ರವರೆಗೂ ನೀರು ಹರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅನ್ನದಾತ ರೈತ ಸಂಘದ ಸದಸ್ಯರು ನಗರದ ಎಪಿಎಂಸಿ ಆವರಣದಿಂದ ಮುನಿರಾಬಾದ್ ಜಲಸಂಪನ್ಮೂಲ ಕಚೇರಿವರೆಗೆ ಸೋಮವಾರ ಬೈಕ್ ರ‌್ಯಾಲಿ ನಡೆಸಿದರು.

    ಸಂಘದ ಅಧ್ಯಕ್ಷ ಶರಣಗೌಡ ಕೇಸರಹಟ್ಟಿ ಮತ್ತು ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ಮಾತನಾಡಿ, ಕಳೆದ ವರ್ಷ ನವೆಂಬರ್‌ನಲ್ಲಿ ಜಲಾಶಯ ಭರ್ತಿಯಾಗಿದ್ದು, ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು. ಎರಡನೇ ಬೆಳೆಗೆ ನೀರು ಹರಿಸಬೇಕಾದ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದು, ಈಗ ಸ್ಥಗಿತಗೊಳಿಸಿದ್ದಾರೆ.

    ಏ.30ರವರೆಗೂ ನೀರು ಹರಿಸಿ

    ಏ.30ರವರೆಗೂ ನೀರು ಹರಿಸದಿದ್ದರೆ ಕೊಯ್ಲು ಹಂತಕ್ಕೆ ಬಂದ ಭತ್ತ ಒಣಗುವ ಸಾಧ್ಯತೆಗಳಿವೆ. ಟೇಲ್ಯಾಂಡ್ ಭಾಗದ ರೈತರು ಸಂಕಷ್ಟಕ್ಕೊಳಗಾಗಲಿದ್ದಾರೆ. ನದಿ ಮತ್ತು ಕಾರ್ಖಾನೆಗಳಿಗೆ ನೀರು ಹರಿಸುವುದನ್ನು ಕೈಬಿಟ್ಟು ರೈತರ ಅನುಕೂಲಕ್ಕಾಗಿ ಕಾಲುವೆಗೆ ಹರಿಸುವಂತೆ ಒತ್ತಾಯಿಸಿದರು.

    ಪದಾಧಿಕಾರಿಗಳಾದ ಕಿಶೋರ, ಯಂಕಣ್ಣ, ಸಂಗಮೇಶ ಹುಲಿಹೈದರ್, ಗೋಸಲಪ್ಪ ಗದ್ದಿ, ಶರಣಪ್ಪ ಬೂದಗುಂಪಾ, ವಿನೋದ ಇತರರಿದ್ದರು.

    ಇದನ್ನೂ ಓದಿ: ಸಮರ್ಪಕ ನೀರು ನಿರ್ವಹಣೆಗೆ ಪ್ರತಿಭಟನೆ: ರೈತ ಸಂಘದ ಉಪಾಧ್ಯಕ್ಷ ಅಮರೇಶ ಚಾಗಬಾವಿ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts