More

    ಲಾಕ್​ಡೌನ್​ ಅವಧಿಯಲ್ಲಿ ದೇಶದ ಮೂಲೆ ಮೂಲೆಗೂ ಔಷಧ ತಲುಪಿದ್ದು ಹೇಗೆ ಗೊತ್ತಾ? ಇಲ್ಲಿದೆ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ

    ನವದೆಹಲಿ: ಕೋವಿಡ್​ 19 ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಅದರಂತೆ, ರೈಲು, ಬಸ್ಸು ಅಲ್ಲದೆ ವಿಮಾನ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಆದರೆ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆಯಾದರೂ ಅವು ನಿಗದಿತ ಗಮ್ಯ ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ಹೀಗಿದ್ದೂ, ಔಷಧಗಳ ದಾಸ್ತಾನು ಸಕಾಲದಲ್ಲಿ ದೇಶದ ಮೂಲೆ ಮೂಲೆಗೂ ತಲುಪಿದವು. ಅದು ಹೇಗೆ ಗೊತ್ತಾ?

    ಲೈಫ್​ಲೈನ್​ ಉಡಾನ್​ ಎಂಬ ಯೋಜನೆಯಡಿ ಸರಕು ಸಾಗಣೆ ವಿಮಾನಗಳು ಒಟ್ಟಾರೆ 463.15 ಟನ್​ ಔಷಧ ಮತ್ತಿತರ ಅಗತ್ಯವಸ್ತುಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದವು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಲೈಫ್​​ಲೈನ್​ ಉಡಾನ್​ ಯೋಜನೆಯಡಿ ಒಟ್ಟಾರೆ 274 ವಿಮಾನಗಳು ಸಂಚಾರ ಕೈಗೊಂಡವು. ಏರ್​ಇಂಡಿಯಾ, ಅಲೈಯನ್ಸ್​ ಏರ್​ ಮತ್ತಿತರ ಖಾಸಗಿ ವಿಮಾನಗಳು ಸಂಚರಿಸಿದವು ಎಂದು ಹೇಳಿದ್ದಾರೆ.

    ಒಟ್ಟು 2,73,275 ಕಿ.ಮೀ. ದೂರ ಸಂಚರಿಸಿದ ಸರಕು ಸಾಗಣೆ ವಿಮಾನಗಳು ಅಗತ್ಯವಸ್ತುಗಳನ್ನು ದೇಶದೆಲ್ಲೆಡೆ ತಲುಪಿಸಿದವು ಎಂದು ವಿವರಿಸಿದ್ದಾರೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್​, ಬೆಂಗಳೂರು ಮತ್ತು ಗುವಾಹಟಿಯನ್ನು ಕೇಂದ್ರವಾಗಿಸಿಕೊಂಡು ಈ ವಿಮಾನಗಳು ಕಾರ್ಯಾಚರಿಸಿದ್ದಾಗಿ ಮಾಹಿತಿ ನೀಡಿದ್ದಾರೆ.

    ಕ್ವಾರಂಟೈನ್​ ಮುಗಿದ ಕೂಡಲೇ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​: ಈಗ ದೆಹಲಿ ಪೊಲೀಸರಿಗೆ ಪತ್ರ ಬರೆದು ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts