More

    19 ವಯೋಮಿತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸಿದ ಭಾರತ ತಂಡ

    ದುಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಉಪಾಂತ್ಯಕ್ಕೇರಿತು. ಶನಿವಾರ ಪಾಕಿಸ್ತಾನ ಎದುರು ನಿರಾಸೆ ಅನುಭವಿಸಿದ್ದ ಭಾರತ ತಂಡ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ ತಂಡ 4 ವಿಕೆಟ್‌ಗೆ 259 ರನ್ ಪೇರಿಸಿದರೆ, ಪ್ರತಿಯಾಗಿ ಭಾರತ ತಂಡ ಹರ್ನೂರ್ ಸಿಂಗ್ (65ರನ್, 74 ಎಸೆತ, 9 ಬೌಂಡರಿ) ಉತ್ತಮ ಆರಂಭ ಹಾಗೂ ಕಡೇ ಹಂತದಲ್ಲಿ ಕೌಶಲ್ ತಂಬೆ (35ರನ್, 29 ಎಸೆತ, 4 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 48.2 ಓವರ್‌ಗಳಲ್ಲಿ 6 ವಿಕೆಟ್‌ಗೆ 262 ರನ್‌ಗಳಿಸಿ ಜಯದ ಬೀರಿತು.

    ಅಫ್ಘಾನಿಸ್ತಾನ: 4 ವಿಕೆಟ್‌ಗೆ 259 (ಇಜಾಜ್ ಅಹಮದ್ 86*, ಸುಲೈಮಾನ್ ಸಫಿ 73, ಅಲಾಹ ನೂರ್ 26, ಕೈಬೆರ್ ವಾಲಿ 20*, ರಾಜ್ಯವರ್ಧನ್ ಹಂಗಾರ್ಕರ್ 74ಕ್ಕೆ 1, ರಾಜಾ ಬಾವ 66ಕ್ಕೆ 1, ವಿಕಿ ಒಸ್ವಾಲ್ 35ಕ್ಕೆ 1, ಕೌಶಾಲ್ ತಂಬೆ 25ಕ್ಕೆ 1), ಭಾರತ: 48.2 ಓವರ್‌ಗಳಲ್ಲಿ 6 ವಿಕೆಟ್‌ಗೆ 262 (ಹರ್ನೂರ್ ಸಿಂಗ್ 65, ಅಂಕ್ರಿಶ್ ರಘುವಂಶಿ 35, ರಾಜಾ ಬಾವ 43*, ಕೌಶಾಲ್ ತಂಬೆ 35*, ನೂರ್ ಅಹಮದ್ 43ಕ್ಕೆ 4, ಬಿಲಾಲ್ ಸಮಿ 59ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts