More

    ಅನಧಿಕೃತ ಕಟ್ಟಡಗಳ ಮೇಲೆ ಕ್ರಮ ಜರುಗಿಸಿ; ಹನುಮಂತಪ್ಪ ಕಬ್ಬಾರ ಒತ್ತಾಯ

    ರಾಣೆಬೆನ್ನೂರ: ಸರ್ಕಾರದ ನಿಯಮ ಗಾಳಿಗೆ ತೂರಿ ನಗರದಲ್ಲಿ ಅವೈಜ್ಞಾನಿಕವಾಗಿ ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವ ಸ್ಥಳೀಯ ನಗರಸಭೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ವಿರುದ್ಧ ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಆಗ್ರಹಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಿವಿಧ ಪ್ರದೇಶಗಳಲ್ಲಿ 30 ಅಡಿ ರಸ್ತೆಗಳು 15 ಅಡಿ ರಸ್ತೆಗಳಾಗಿವೆ. ಅವೈಜ್ಞಾನಿಕ ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದೆ. ಇದರಿಂದ ನಗರಸಭೆ ಮತ್ತು ಸರ್ಕಾರದ ಆದಾಯ ಕುಂಠಿತವಾಗಿದೆ. ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಅವರ ಆಪ್ತ ಸಹಾಯಕರು ಕೆಲವು ಲೇಔಟ್‌ದಾರರ ಜತೆ ಸೇರಿಕೊಂಡು ಅವರು ಹೇಳಿದ ಹಾಗೆ ಎಸ್ಟಿಮೇಟ್ ತಯಾರಿಸಿ ಆಯುಕ್ತರಿಗೆ ದಿಕ್ಕುತಪ್ಪಿಸಿ ಸಹಿ ಹಾಕಿಸಿ ಮೋಸ ಮಾಡುತ್ತಾ ಬಂದಿದ್ದಾರೆ.
    ನಗರದ ಪ್ಲಾಟ್ ನಂ. 119 ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ನಗರದ ರಿ.ಸ.ನಂ.795/ಎ ಮತ್ತು 795/ಬಿ ರ ಮದ್ಯ ಭಂಗಿ ರಸ್ತೆಯಲ್ಲಿ ಅನಧಿಕೃತ ಬಿಲ್ಡಿಂಗ್ ನಿರ್ಮಿಸಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನಿದ್ದಾರೆ.
    ರಾಜರಾಜೇಶ್ವರಿ ನಗರದಲ್ಲಿ ಅನುಮತಿ ಇಲ್ಲದೆ ಅನಧಿಕೃತ ಕಟ್ಟಡ ನಿರ್ಮಿಸಿದವರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ಆಡಳಿತಾಧಿಕಾರಿಗಳು 15 ದಿನಗಳ ಒಳಗಾಗಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಇದಕ್ಕೆ ಕಾರಣರಾದ ನಗರಸಭೆ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲವಾದರೆ ನಗರಸಭೆ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts