More

    ನಗರಸಭೆ ಸದಸ್ಯರ ಪ್ರಶ್ನೆಗಳಿಗೆ ಸಿಗದ ಉತ್ತರ

    * ಅಧಿಕಾರಿ, ಸಿಬ್ಬಂದಿಗಳ ಬೇಜವಾಬ್ದಾರಿಗೆ ಆಕ್ರೋಶ
    * ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

    ಹೊಸಪೇಟೆ: ನರಗರಸಭೆ ಸದಸ್ಯರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಸಿಗದ ಉತ್ತರ. ಜನ ಸಾಮಾನ್ಯರು ಸಮಸ್ಯೆಗಳಿಗೆ ತಿಂಗಳು ಕಳೆದರೂ ಸಿಗದ ಪರಿಹಾರ. ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಸದಸ್ಯರು ಬಯಲುಗೊಳಿಸಿದರು.

    ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಪ್ರಮುಖ ಅಂಶಗಳು.

    ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಯೊಬ್ಬರು ೧೫ನೇ ಹಣಕಾಸು ಯೋಜನೆಯಡಿ ಉದ್ದೇಶಿತ ಕಾಮಗಾರಿಗಳು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಡಜನ ಕಲ್ಯಾಣ ಯೋಜನೆಯಡಿ ಹೊಲಿಗೆ ಯಂತ್ರ ವಿತರಣೆ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಿ ನಗರಸಭೆ ಸಲ್ಲಿಸಿದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿ, ಮರು ಪ್ರಸ್ತಾವನೆಗೆ ಸೂಚಿಸಿದ್ದಾರೆ ಎಂದು ಓದಿದರು.

    ಅದಕ್ಕೆ ಆಕ್ಷೇಪಿಸಿದ ಸದಸ್ಯ ಅಬ್ದುಲ್ ಖದೀರ್ ಮಾತನಾಡಿ, ನಗರಸಭೆ ಕಾಮಗಾರಿಗಳ ಪ್ರಸ್ತಾವನೆ ತಯಾರಿಸುವಾಗ ನಿಯಮಾವಳಿ ಓದುವುದಿಲ್ಲವೇ. ಪದೇ ಪದೇ ಮರು ಪ್ರಸ್ತಾವನೆ ಸಲ್ಲಿಕೆಯಲ್ಲೇ ಕಾಲಹರಣವಾದರೆ, ನಗರದ ಅಭಿವೃದ್ಧಿಯಾವಾಗ ಎಂದು ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು.
    ಅದಕ್ಕೆ ಧ್ವನಿಗೂಡಿಸಿದ ಎಲ್.ಎಸ್.ಆನಂದ, ವಾರ್ಡ್ಗಳಲ್ಲಿ ತುರ್ತಾಗಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡಿವೆ. ಈಗ ಟೆಂಡರ್ ಅಪ್ರೋವಲ್ ಸಿಗುತ್ತಿಲ್ಲ ಎಂದು ಹೇಳಿದರೆ, ಗುತ್ತಿಗೆದಾರರ ಪರಿಸ್ಥಿತಿ ಏನಾಗಬೇಕು ಎಂದು ಹರಿಹಾಯ್ದರು.

    ವಸ್ತುಗಳನ್ನು ಖರೀದಿಸುವ ಮಾಫಿಯಾ:
    ಅಬ್ದುಲ್ ಖದೀರಿ, ಕೆ.ಗೌಸ್, ರೂಪೇಶ ಮಾತನಾಡಿ, ನಗರಸಭೆ ಪರಿಸರ ವಿಭಾಗದಲ್ಲಿ ಹೊಸ ವಾಹನಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಅವು ಅನಗತ್ಯವಾಗಿದ್ದರೆ ಮಾರಿಬಿಡಿ. ವಾಹನಗಳನ್ನು ಖರೀದಿಸಿ ಜನರ ತೆರಿಗೆ ಹಣ ಯಾಕೆ ಪೋಲು ಮಾಡುತ್ತೀರಿ? ನಿಮ್ಮ ಸ್ವಂತ ವಾಹನಗಳಾಗಿದ್ದರೆ, ಹೀಗೆ ಇರುತ್ತಿದ್ದವೇ? ಇದನ್ನು ಒಪ್ಪಿಕೊಳ್ಳಬೇಕು ಎಂದು ಸವಾಲು ಹಾಕಿದರು.
    ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹರಿಗೆ ವಿತರಣೆಯಾಗದೇ ನೂರಾರು ಹೊಸ ವಾಟರ್ ಫಿಲ್ಟರ್, ವೀಲ್ ಚೇರ್‌ಗಳು ಗೋದಾಮುಗಳಲ್ಲಿ ನಿರುಪಯುಕ್ತವಾಗಿ ಬಿದ್ದಿವೆ. ಇದು ಹೊಸ ವಸ್ತುಗಳನ್ನು ಖರೀದಿಸುವ ಮಾಫಿಯಾ ಎಂದು ಆರೋಪಿಸಿದರು.

    ಒತ್ತುವರಿ ತೆರವಿಗೆ ನಿರಾಸಕ್ತಿ:
    ಕಿರಣ್ ಎಸ್. ಮಾತನಾಡಿ, ನಗರಸಭೆ ಮಾಲೀಕತ್ವದ ನಾಗರಿಕ ಮೀಸಲು, ಉದ್ಯಾನಗಳ ಒತ್ತುವರಿ ತೆರವು, ಸಮೀಕ್ಷೆಗೆ ಸೂಚಿಸಿ ಎರಡು ತಿಂಗಳಾಗಿದೆ. ೨೯ನೇ ವಾರ್ಡ್ನ ಮುಖ್ಯ ರಸ್ತೆಯಲ್ಲಿ ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸದಸ್ಯರೇ ಮಾಹಿತಿ ನೀಡಿದರೂ, ಪೌರಾಯುಕ್ತರು ಕ್ರಮಕ್ಕೆ ಮುಂದಾಗುತ್ತಿಲ್ಲ. ಭೂ ಕಬಳಿಕೆದಾರರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
    ಸರ್ಕಾರಿ ಜಾಗೆಗಳ ಸಮೀಕ್ಷೆಗೆ ಸಂಬಂಧಿಸಿದವರಿಗೆ ಸೂಚಿಸಿದ್ದೇನೆ ಎಂಬ ಪೌರಾಯಿಕ್ತ ಬಿ.ಟಿ.ಬಂಡಿವಡ್ಡರ್ ಹೇಳಿದರೆ, ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದು ಕಿರಿಯ ಅಭಿಯಂತರ ಖಾಜಿ ಜಾರಿಕೊಂಡರು.
    ಇದರಿAದ ಕೆರಳಿದ ಸದಸ್ಯರು ನಗರಸಭೆ ಆಸ್ತಿಗಳ ಸಮೀಕ್ಷೆ ಕುರಿತು ಒಂದೇ ಒಂದೇ ಪೇಪರ್ ಮೂವ್‌ಮೆಂಟ್ ಆಗಿಲ್ಲ. ಕಂದಾಯ ಇಲಾಖೆ ನಿಷ್ಕಿçಯೆಗೊಂಡಿದೆ ಎಂದು ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಇನ್ನೊಂದು ತಿಂಗಳಲ್ಲಿ ನಗರಸಭೆ ಆಸ್ತಿಗಳ ಸಮೀಕ್ಷೆ ಪೂರ್ಣಗೊಳಿಸಿ, ಒತ್ತುವರಿ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.
    ಒಟ್ಟು ೬೦೦ ಮನೆಗಳಲ್ಲಿ ಮೊದಲ ಹಂತದಲ್ಲಿ ಎಸ್‌ಸಿ. ಎಸ್ಟಿಗೆ ೧೩೫ ಮನೆಗಳು ಮಂಜೂರಾಗಿದ್ದು, ೭೬ ಅರ್ಜಿ ಬಂದಿವೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

    ಕಂದಾಯ ವಿಭಾಗ ನಿಷ್ಕ್ರಿಯ:
    ನಗರಸಭೆ ವಾಣಿಜ್ಯ ಮಳಿಗೆಗಳು ಎಷ್ಟಿವೆ ಎಂಬ ಎಲ್.ಎಸ್.ಆನಂದ ಪ್ರಶ್ನೆಗೆ ಅಧಿಕಾರಿಯೊಬ್ಬರು ೧೩೫ ಎಂದು ಉತ್ತರಿಸಿದರು. ಆದರೆ, ೧೫೮ ಎಂದು ವರದಿಯಲ್ಲಿ ಉಲ್ಲೇಖಿಸಿದ್ದೀರಿ. ಇದರಲ್ಲಿ ಯಾವುದು ಸುಳ್ಳು? ಮಳಿಗೆಗಳಿಂದ ಬರುವ ಬಾಡಿಗೆ ಎಷ್ಟು? ಯಾವಾಗ ಅವಧಿ ಮುಕ್ತಾಯಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಅಧಿಕಾರಿಗಳು ಏನೇನೋ ಹೇಳಲು ಮುಂದಾದರಾದರೂ, ನಿಖರ ಉತ್ತರ ಸಿಗಲಿಲ್ಲ.
    ಅಬ್ದುಲ್ ಖದೀರ್ ಮಾತನಾಡಿ, ಕಂದಾಯ ವಿಭಾಗ ನಿಷ್ಕಿçಯೆಗೊಂಡಿದೆ. ಬಾಡಿಗೆದಾರರಿಗೆ ಏಕರೂಪದ ನೋಟಿಸ್ ನೀಡಿ, ಕೋರ್ಟ್ಗೆ ಹೋಗಲು ಪರೋಕ್ಷವಾಗಿ ನೆರವಾಗುತ್ತಿದ್ದಾರೆ ಎಂದು ದೂರಿದರು.

    ಮುಕ್ತಿಧಾಮ ವಿಷಯಕ್ಕೆ ವಾಕ್ಸಮರ:
    ಇಲ್ಲಿನ ಜಂಬುನಾಥಹಳ್ಳಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಮೃತ ದೇಹಗಳನ್ನು ಸುಡುವುದರಿಂದ ಸುತ್ತಮುತ್ತಲಿನ ನಿವಾಸಿಗಳು, ಶಾಲೆಗಳು, ವಸತಿ ನಿಲಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅದನ್ನು ಸ್ಥಳಾಂತರಿಸಬೇಕು ಎಂದು ಸದಸ್ಯ ಶೇಕ್ಷಾವಲಿ, ಕೆ.ರಾಘವೇಂದ್ರ ಸಭೆಗೆ ಒತ್ತಾಯಿಸಿದರು.
    ಅದಕ್ಕೆ ಆಕ್ಷೇಪಿಸಿದ ರಮೇಶ ಗುಪ್ತಾ, ಇದು ೧೯೧೦ ರಲ್ಲಿ ಸ್ಥಾಪನೆಯಾಗಿದ್ದು, ಸ್ಥಳಾಂತರಿಸಲು ಸಾಧ್ಯವಿಲ್ಲ. ಮುಕ್ತಿಧಾಮ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಮ್ಮ ಸಮಾಜದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಮಾತು ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸಹ ಸದಸ್ಯರು ಇಬ್ಬರನ್ನೂ ಸಮಾಧಾನ ಪಡಿಸಿದರು.
    ಮುಕ್ತಿಧಾಮ ಸ್ಥಳಾಂತರ ಇಲ್ಲವೇ, ವಿದ್ಯುತ್ ಚಿತಾಗಾರ ಸ್ಥಾಪಿಸುವ ಕುರಿತು ನಿರ್ಣಯಿಸಲು ಸಮಿತಿ ರಚಿಸಲಾಗುವುದು ಎಂದು ಉಪಾಧ್ಯಕ್ಷ ರೂಪೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.
    ಇದೇ ವೇಳೆ ನಗರಸಭೆಯಿಂದ ಕೈಗೊಂಡ ಸ್ವಚ್ಛತಾ ಕಾರ್ಯವನ್ನು ಉಲ್ಲೇಖಿಸಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಫೇಸ್ ಬುಕ್‌ನಲ್ಲಿ ಇದು ಕಾರ್ಯಕರ್ತರ ಸಾಧನೆ ಎಂದು ಬರೆದುಕೊಂಡಿರುವುದ ಅಕ್ಷಮ್ಯ. ನಗರದ ಅಭಿವೃದ್ಧಿಗೆ ಶಾಸಕರು ಕೈಜೋಡಿಸದೇ, ಜನರ ದಿಕ್ಕು ತಪ್ಪಸುವುದು ಅವರಿಗೆ ಶೋಭೆಯಲ್ಲ ಎಂದು ಸದಸ್ಯರಾದ ತಾರಿಹಳ್ಳಿ ಜಂಬುನಾಥ,
    ಅಸಮಾಧಾನ ವ್ಯಕ್ತಪಡಿಸಿದರು
    ಇನ್ನುಳಿದಂತೆ ವಿವಿಧ ವಾರ್ಡ್ಗಳಲ್ಲಿನ ಯುಜಿಡಿ, ೨೪*೭, ರಸ್ತೆಗಳ ಸಮಸ್ಯೆಗಳ ಕುರಿತು ಚರ್ಚೆನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts