More

    ಮೇಡ್ ಇನ್ ಇಂಡಿಯಾಕ್ಕೆ ಬ್ರಿಟನ್ ಪ್ರಧಾನಿ ರಾಯಭಾರಿ!?

    ಲಂಡನ್: ಮೇಡ್​ ಇನ್​ ಇಂಡಿಯಾ ಉತ್ಪನ್ನ ಒಂದು ಈಗ ಜಗತ್ತಿನ ಗಮನಸೆಳೆದಿದೆ. ಫಿಟ್​ ಇಂಡಿಯಾ ಕಾನ್ಸೆಪ್ಟ್​ ನ ಪ್ರೇರಣೆಯೋ ಎಂಬಂತೆ ಇರುವ ಫಿಟ್ ಇಂಗ್ಲೆಂಡ್​ಗೆ ಭಾರತದ ಹೀರೋ ಸೈಕಲ್​ ಪಾಲುದಾರಿಕೆ! ಇಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಸುದ್ದಿ ಇದು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಟ್ವೀಟ್ ಇದಕ್ಕೆ ಕಾರಣ.

    ಅವರು ನಾಟಿಂಗ್​ಹ್ಯಾಂನಲ್ಲಿ ಹೀರೋ ವಿಕಿಂಗ್ ಪ್ರೋ ಬೈಕ್ ಸವಾರಿ ಮಾಡುತ್ತ ಸರ್ಕಾರದ ಕೋವಿಡ್19 ವಿರುದ್ಧ ಸಮರಕ್ಕೆ ಪೂರಕವಾಗಿ ಆ್ಯಂಟಿ ಒಬೆಸಿಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಅದರ ವಿಡಿಯೋ ಮತ್ತು ಫೋಟೋವನ್ನು ಅವರು ಟ್ವಿಟರ್ ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದಾರೆ. ಈ ಅಭಿಯಾನವು 2 ಶತಕೋಟಿ ಪೌಂಡ್ ಮೌಲ್ಯದ್ದಾಗಿದೆ. ಸೈಕ್ಲಿಂಗ್​ಗೆ ಉತ್ತೇಜನ ನೀಡುವುದಕ್ಕಾಗಿ ಪ್ರತ್ಯೇಕ ಸೈಕ್ಲಿಂಗ್ ಪಥವನ್ನೂ ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ.

    ಇದನ್ನೂ ಓದಿ: ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ

    ಹೀರೋ ವಿಕಿಂಗ್ ಪ್ರೋ ಬೈಕ್​ ಇನ್​ಸಿಂಕ್ ಬ್ರ್ಯಾಂಡ್​ನಲ್ಲಿ ಅಲ್ಲಿ ಮಾರಾಟವಾಗಿತ್ತಿದೆ. ಈ ಬ್ರ್ಯಾಂಡ್​ನ ಮಾಲೀಕತ್ವ ಭಾರತದ ಹೀರೋ ಮೋಟಾರ್ಸ್ ಕಂಪನಿಯದ್ದು. ಇದರ ವಿನ್ಯಾಸ ಮ್ಯಾಂಚೆಸ್ಟರ್​ನಲ್ಲಾಗಿದ್ದು, ಭಾರತದ ಹೀರೋ ಸೈಕಲ್ಸ್​ ಇದನ್ನು ಉತ್ಪಾದಿಸುತ್ತಿದೆ. ಹೀರೋ ಸೈಕಲ್ಸ್​ ಕಂಪನಿಯು ವಿಕಿಂಗ್​, ರಿಡ್ಡಿಕ್​, ರಿಡಲೆ ಮುಂತಾದ ಬ್ರಾಂಡ್​ಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದು, ಅವುಗಳನ್ನು ಮರುವಿನ್ಯಾಸದೊಂದಿಗೆ ಇನ್​ಸಿಂಕ್ ಬ್ರ್ಯಾಂಡ್​ನಲ್ಲಿ ಮಾರಾಟ ಮಾಡುತ್ತಿದೆ.

    ಇದನ್ನೂ ಓದಿ: ಅಂತಿಮ ವರ್ಷದ ಪದವಿ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಯುಜಿಸಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ?

    ವಿಕಿಂಗ್ ಬೈಕ್​ಗಳ ಪೈಕಿ ಇನ್​ಸಿಂಗ್​ ಸೈಕಲನ್ನು ಬ್ರಿಟನ್ ಪ್ರಧಾನಿ ತುಂಬಾ ಮೆಚ್ಚಿಕೊಂಡಿದ್ದಾರೆ. ಸೈಕ್ಲಿಂಗ್​ ಗೆ ಇದು ಬೆಸ್ಟ್ ಎಂಬ ಪ್ರಶಂಸೆ ಸಿಕ್ಕಿರುವುದು ಈ ಬ್ರ್ಯಾಂಡ್ ಮಟ್ಟಿಗೆ ಮಹತ್ವದ ಮೈಲಿಗಲ್ಲು ಎಂದು ಹೀರೋ ಮೋಟಾರ್ಸ್ ಕಂಪನಿಯ ಸಿಎಂಡಿ ಪಂಕಜ್ ಮುಂಜಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಡೀಸೆಲ್ ದರ ಒಂದೇ ಸಲ 8 ರೂಪಾಯಿ ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts