More

    ಸಂಶೋಧನಾರ್ಥಿಗಳಿಗೆ ಯುಜಿಸಿ ಸಹಾಯ ಹಸ್ತ: ಪ್ರಬಂಧ ಮಂಡನೆಗೆ 6 ತಿಂಗಳ ಕಾಲಾವಧಿ ವಿಸ್ತರಣೆಗೆ ಚಿಂತನೆ

    ನವದೆಹಲಿ: ಲಾಕ್​ಡೌನ್​ಗೂ ಮುನ್ನವೇ ಶಾಲಾ-ಕಾಲೇಜುಗಲು ಬಂದ್​ ಆಗಿದ್ದರೆ, ನಂತರದಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಕಾಯರ್ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದು ಸಂಶೋಧನಾರ್ಥಿಗಳಿಗೆ ಅದರಲ್ಲೂ ಯುಜಿಸಿ ಅನುದಾನ ಪಡೆದು ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಕಳವಳ ಮೂಡಿಸಿದೆ. ಏಕೆಂದರೆ ನಿಗದಿತ ಸಮಯದಲ್ಲಿ ಪ್ರಬಂಧ ಮಂಡನೆ ಮಾಡದಿದ್ದಲ್ಲಿ, ಪರಿಗಣಿಸಲಾಗುವುದಿಲ್ಲ. ಜತೆಗೆ, ಸಂಶೋಧನಾ ಅನುದಾನವೂ ದೊರೆಯುವುದಿಲ್ಲ.

    ಹೀಗಾಗಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸಂಶೋಧನಾರ್ಥಿಗಳಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಪಿಎಚ್​ಡಿ ಅಭ್ಯರ್ಥಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ಆರು ತಿಂಗಳವರೆಗೆ ಕಾಲಾವಧಿ ವಿಸ್ತರಿಸಲು ಚಿಂತನೆ ನಡೆಸಿದೆ.

    ಪ್ರಸ್ತುತ ಲಾಕ್​ಡೌನ್​ ಸಮಯದಲ್ಲಿ ಕ್ಷೇತ್ರಕಾರ್ಯವನ್ನು ನಡೆಸಲಂತೂ ಸಾಧ್ಯವಿಲ್ಲ. ಅಲ್ಲದೇ, ನೆಮ್ಮದಿಯಿಂದ ಕುಳಿತು ಸಂಶೋಧನಾ ಪ್ರಬಂಧವನ್ನು ಮುಗಿಸುವ ವಾತಾವರಣವೂ ಇಲ್ಲವಾಗಿದೆ. ಈ ಕಾರಣದಿಂದಾಗಿ ಪ್ರಬಂಧ ಮಂಡಿಸಲು ನೀಡಿರುವ ಕಾಲಾವಧಿಯನ್ನು ಕನಿಷ್ಠ ಆರು ತಿಂಗಳ ಮಟ್ಟಿಗಾದರು ವಿಸ್ತರಿಸುವಂತೆ ಸಂಶೋಧನಾರ್ಥಿಗಳು ಯುಜಿಸಿಗೆ ಮನವಿ ಮಾಡಿದ್ದಾರೆ. ಜತೆಗೆ ಪ್ರಾಧ್ಯಾಪಕರ ಸಂಘಟನೆಗಳು ಕೂಡ ಇಂಥದ್ದೇ ಕೋರಿಕೆ ಸಲ್ಲಿಸಿವೆ. ಇವರ ಮನವಿ ಪರಿಗಣಿಸಿರುವ ಯುಜಿಸಿ, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ.

    ಶೈಕ್ಷಣಿಕ ವೇಳಾಪಟ್ಟಿ ಹಾಗೂ ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳಿಗಾಗಿ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಡಿ.ಪಿ. ಸಿಂಗ್​ ಇತ್ತೀಚೆಗೆ ಪ್ರಕಟಿಸಿದ್ದರು. (ಏಜೆನ್ಸೀಸ್​)

    ಮಹಾಮಾರಿ ಕರೊನಾ ಸೋಂಕಿತರ ಸೇವೆಗೆ ನಿಂತ ಭಾರತ ಮೂಲದ ಇಂಗ್ಲೆಂಡ್‌ ಸುಂದರಿ

    ಐಎಲ್ಒ ನೀಡಿದೆ ಆತಂಕದ ವರದಿ: ಕರೊನಾದಿಂದಾಗಿ ಭಾರತದಲ್ಲಿ 40 ಕೋಟಿ ಜನರು ಬಡತನದ ಕೂಪಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts