More

    ಮೇ ತಿಂಗಳಲ್ಲಿ ಯುಜಿಸಿ-ಎನ್​ಇಟಿ ಪರೀಕ್ಷೆ; ಇಂದಿನಿಂದಲೇ ನೋಂದಣಿ ಆರಂಭ

    ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡಲು ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್​ಇಟಿ)ಯ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಮೇ ತಿಂಗಳ 2ರಿಂದ 17ರವರೆಗೆ ಪರೀಕ್ಷೆ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ತಿಳಿಸಿದ್ದಾರೆ.

    ಜೂನಿಯರ್​ ರಿಸರ್ಚ್​ ಫೆಲೋಶಿಪ್​(ಜೆಆರ್​ಎಫ್​) ಮತ್ತು ಸಹಾಯಕ ಪ್ರಾಧ್ಯಾಪಕ ಅರ್ಹತೆಗೆ ಪರೀಕ್ಷೆ ನಡೆಸಲಾಗುವುದು. ಮೇ2, 3, 4,4, 5, 6, 7, 10, 11, 12, 14, 17ರಂದು ಪರೀಕ್ಷೆ ನಡೆಯಲಿದೆ ಎಂದು ಸಚಿವರು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಫೆಬ್ರವರಿ 2ರಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾರ್ಚ್​ 2ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

    ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇರಲಿವೆ. ಮೊದಲನೇ ಪತ್ರಿಕೆಯಲ್ಲಿ 100 ಅಂಕಗಳಿಗೆ 50 ಪ್ರಶ್ನೆಗಳಿರಲಿದ್ದು, ಎರಡನೇ ಪತ್ರಿಕೆಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿರಲಿವೆ. ಎರಡೂ ಪತ್ರಿಕೆಗೆ ಒಟ್ಟಾರೆಯಾಗಿ 3 ಗಂಟೆಗಳ ಕಾಲಾವಕಾಶ (ಬ್ರೇಕ್​ ಇಲ್ಲದೆಯೇ) ಇರಲಿದೆ. ಇದು ಕಂಪ್ಯೂಟರ್​ ಆಧಾರಿತ ಟೆಸ್ಟ್ (ಸಿಬಿಟಿ) ಆಗಿರಲಿದೆ. (ಏಜೆನ್ಸೀಸ್​)

    ಏರೋ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದೆ ಅಮೆರಿಕದ B-1B ಲ್ಯಾನ್ಸರ್ ಹೆವಿ ಬಾಂಬರ್: ಭಾರತದಲ್ಲಿ ಇದರ ದರ್ಶನ ಇದೇ ಮೊದಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts