More

    ರಂಗಕರ್ಮಿ, ಸಾಹಿತಿ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ

    ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಗೀತ ಪ್ರಧಾನ ಗೀತಾ ನಾಟಕ ನಿದೇರ್ಶಕರಾಗಿ ಪ್ರಸಿದ್ಧರಾರಾಗಿದ್ದ ರಂಗಕರ್ಮಿ, ಸಾಹಿತಿ ಪ್ರೊ. ಉದ್ಯಾವರ ಮಾಧವ ಆಚಾರ್ಯ (80) ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

    ಅರ್ಥಶಾಸ್ತ್ರ ಎಂಎ ಪದವಿ ಪಡೆದಿದ್ದ ಇವರು, ಮೊದಲಿಗೆ ಕುಂದಾಪುರ ಭಂಡಾರಕರ್ಸ್ ಕಾಲೇಜಿನಲ್ಲಿ, ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದರು. 1970, 80, 90ರ ದಶಕದಲ್ಲಿ ಸಣ್ಣ ಕಥೆಗಳ ರಚನೆ, ಗೀತಾ ನಾಟಕಗಳ ಮೂಲಕ ಸಾಹಿತ್ಯ, ರಂಗಭೂಮಿ ಚಟುವಟಿಕೆಯ ಉತ್ತುಂಗದಲ್ಲಿದ್ದರು. ಕನ್ನಡದ ಸಣ್ಣ ಕಥೆಗಾರರಲ್ಲಿ ಇವರು ಪ್ರಮುಖರಾಗಿದ್ದು, ಹಲವಾರು ಕಥೆಗಳನ್ನು ಬರೆದಿದ್ದಾರೆ. ಬಾಗಿದ ಮರ, ಸಮಗ್ರ ಕಥಾ ಸಂಕಲನ ಪ್ರಸಿದ್ಧ.

    ಸಮೂಹ ಎಂಬ ಸಂಸ್ಥೆಯ ಮೂಲಕ ಹತ್ತಾರು ಗೀತಾ ನಾಟಕ, ನೃತ್ಯ ರೂಪಕ ನಿರ್ದೇಶಿಸಿದ್ದರು. ಶಬರಿ, ರಾಮನ ಕಥೆ ಪ್ರಮುಖವಾದವು. ಯಕ್ಷಗಾನದಲ್ಲಿಯೂ ಹಲವು ಪ್ರಯೋಗ ಮಾಡಿದ್ದರು. ಇವರಿಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts