More

    ಒಂಟಿ ಕೈಯಲ್ಲಿ ಮಾಸ್ಕ್ ಹೊಲಿದ ಬಾಲಕಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಡುಪಿ ವಿದ್ಯಾರ್ಥಿನಿ ಕೊಡುಗೆ

    ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳಿಗೆ ಹಂಚಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ 1 ಲಕ್ಷ ಮಾಸ್ಕ್ ಹೊಲಿಯುವ ಗುರಿ ಹೊಂದಿದ್ದು, ಉಡುಪಿಯ ಬಾಲಕಿಯೊಬ್ಬಳು ಒಂದೇ ಕೈಯಲ್ಲಿ 15 ಮಾಸ್ಕ್ ಹೊಲಿದುಕೊಟ್ಟು ಗಮನ ಸೆಳೆದಿದ್ದಾಳೆ.

    ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ 6ನೇ ತರಗತಿ ವಿದ್ಯಾರ್ಥಿ ಸಿಂಧೂರಿ (10) ಹುಟ್ಟಿನಿಂದ ಮಣಿಗಂಟಿನ ಕೆಳಗೆ ಎಡಗೈ ಇಲ್ಲ. ಕಬ್ ಬುಲ್ ಬುಲ್(ಸ್ಕೌಟ್ಸ್ ಆ್ಯಂಡ್ ಗೈಡ್ಸ್) ವಿದ್ಯಾರ್ಥಿಯಾದ ಸಿಂಧೂರಿಗೆ 10 ಮಾಸ್ಕ್ ಮಾಡಿಕೊಡುವಂತೆ ಶಿಕ್ಷಕಿ ತಿಳಿಸಿದ್ದರು. ಪ್ರಾರಂಭದಲ್ಲಿ ಒಂಟಿ ಕೈಯಲ್ಲಿ ಮಾಸ್ಕ್ ಹೊಲಿಯಲು ಸಾಧ್ಯವೇ ಎಂಬ ಅಳುಕಿತ್ತು. ತಾಯಿಯ ಪ್ರೋತ್ಸಾಹದೊಂದಿಗೆ ಬಾಲಕಿಯ ಛಲ ಗುರಿ ಸಾಧನೆಗೆ ನೆರವಾಗಿದೆ. ಈ ಕಾರ್ಯಕ್ಕೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    9ನೇ ತರಗತಿಯಲ್ಲಿ ಓದುತ್ತಿರುವ ಸಹೋದರ ಸರ್ಗಮ್ ಕೂಡ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿ. ಇವರ ಶಾಲೆಯಲ್ಲೇ ತಾಯಿ ಅಟೆಂಡರ್ ಆಗಿದ್ದಾರೆ. ಕಾರು ಚಾಲಕರಾಗಿದ್ದ ಅಪ್ಪನಿಗೆ ಅಪಘಾತವಾಗಿದ್ದ ಹಿನ್ನೆಲೆಯಲ್ಲಿ ಆರ್‌ಟಿಒ ಕಚೇರಿ ಬಳಿ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ.

    ಮಾಸ್ಕ್ ಹೊಲಿಗೆ ಈಗ ಸಲೀಸಾಗಿದೆ. ಈಗ ಒಂದು ಮಾಸ್ಕ್ ಹೊಲಿಯಲು ಐದು ನಿಮಿಷ ಸಾಕು. ಕರೊನಾ ವಿರುದ್ಧದ ಹೋರಾಟದಲ್ಲಿ ನನ್ನ ಅಳಿಲಸೇವೆ ಸಲ್ಲಿಸಿದ ತೃಪ್ತಿಯಿದೆ. ನೆರೆಹೊರೆಯವರಿಗೂ ಮಾಸ್ಕ್ ಹೊಲಿದು ಕೊಡುವ ಇಚ್ಛೆಯಿದೆ. ಟೀಚರ್ ಆಗಬೇಕೆನ್ನುವ ಆಸೆಯಿದೆ. ಡ್ರಾಯಿಂಗ್ ನನ್ನ ಇಷ್ಟದ ಹವ್ಯಾಸ.
    – ಸಿಂಧೂರಿ, ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts