More

    ಮೆಕ್ಸಿಕೊ ಬೆಡಗಿ ವಿಶ್ವ ಸುಂದರಿ; ಉಡುಪಿ ಮೂಲದ ಆಡ್ಲೆನ್​ಗೆ 4ನೇ ಸ್ಥಾನ

    ಮಾಡೆಲಿಂಗ್ ಕ್ಷೇತ್ರದಲ್ಲಿ ಕರ್ನಾಟಕದವರು ಹಿಂದೆ ಬಿದ್ದಿಲ್ಲ. ಈಗಾಗಲೇ ಸಾಕಷ್ಟು ಕನ್ನಡತಿಯರು ಹೊರದೇಶಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಐಶ್ವರ್ಯಾ ರೈ, ಶ್ರೀನಿಧಿ ಶೆಟ್ಟಿ ಆಶಾ ಭಟ್ … ಹೀಗೆ ಆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

    ಇದೀಗ ಆ ಸಾಲಿಗೆ ಮತ್ತೋರ್ವ ಸುಂದರಿ ಸೇರ್ಪಡೆಯಾಗಿದ್ದಾರೆ. ಪ್ರತಿಷ್ಠಿತ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ ಉಡುಪಿ ಮೂಲದ ಆಡ್ಲೆನ್ ಕ್ಯಾಸ್ಟೆಲಿನೋ. ಕುವೈತ್​ನಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದಿರುವ ಆಡ್ಲೆನ್ ಅವರ ಪೋಷಕರು ಮೂಲತಃ ಉಡುಪಿಯ ಉದ್ಯಾವರದವರಾದರೂ ಸದ್ಯ ಮುಂಬೈನಲ್ಲಿಯೇ ಇಡೀ ಕುಟುಂಬ ನೆಲೆಸಿದೆ. ಇದೀಗ ವಿಶ್ವ ಸುಂದರಿ ರೇಸ್​ನಲ್ಲಿ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ನಾಡಿಗೆ ಕೀರ್ತಿ ತಂದಿದ್ದಾರೆ.

    ಆಂಡ್ರಿಯಾ ಭುವನ ಸುಂದರಿ: 2021ನೇ ಸಾಲಿನ 69ನೇ ವಿಶ್ವಸುಂದರಿ ಕಾರ್ಯಕ್ರಮಕ್ಕೆ ಸೋಮವಾರ ತೆರೆಬಿದ್ದಿದೆ. ಮೆಕ್ಸಿಕೊ ಮೂಲದ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. ಬ್ರೆಜಿಲ್​ನ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್ ಆದರೆ, ಪೆರುವಿನ ಜೆನಿಕ್ ಮಸಿಟಾ ದ್ವಿತೀಯ, ಡೊಮಿನಿಕನ್ ರಿಪಬ್ಲಿಕ್​ನ ಕಿಂಬರ್ಲಿ ಪೆರೆಝ್, ಭಾರತದ ಆಡ್ಲೆನ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ವಿಶ್ವದ ಹಲವೆಡೆಯಿಂದ 70ಕ್ಕೂ ಅಧಿಕ ರೂಪದರ್ಶಿಯರು ಈ ಸಲದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts