More

    ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿ ಆಗಿ ಸಿಎಂ ಉದ್ಧವ್​ ಠಾಕ್ರೆ ಪತ್ನಿ ನೇಮಕ

    ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅವರನ್ನು ಶಿವಸೇನಾ ಮುಖವಾಣಿ ಸಾಮ್ನಾ ಗ್ರೂಪ್​ನ ಸಂಪಾದಕಿ ಆಗಿ ನೇಮಿಸಲಾಗಿದೆ.

    ಸಾಮ್ನಾ ಗ್ರೂಪ್​ ಪ್ರಬೋಧನ್​ ಪ್ರಕಾಶನ್​ ಸಂಸ್ಥೆಯಿಂದ ನಡೆಯುತ್ತಿದೆ. ಈ ಸಂಸ್ಥೆಯ ಅಡಿಯಲ್ಲಿ ಸಾಮ್ನಾ(ಮರಾಠಿ ಭಾಷೆ) ಮತ್ತು ದೂಪಹರ್​ ಕಾ ಸಾಮ್ನಾ(ಹಿಂದಿ ಭಾಷೆ) ಎಂಬ ದಿನಪತ್ರಿಕೆ ಪ್ರಕಟಗೊಳ್ಳುತ್ತಿವೆ. ಸಾಮ್ನಾ ಗ್ರೂಪ್​ ಅನ್ನು ಶಿವಸೇನಾ ಪಕ್ಷದ ಪಿತಾಮಹ ಬಾಳಾಸಾಹೇಬ್​ ಠಾಕ್ರೆ ಅವರು ಸ್ಥಾಪಿಸಿದ್ದರಿಂದ ಶಿವಸೇನೆಯ ಮುಖವಾಣಿಯಂತಲೇ ಇದು ಪ್ರಸಿದ್ಧಿಯಾಗಿದೆ.

    ಭಾನುವಾರ ಪ್ರಕಟಗೊಂಡ ನ್ಯೂಸ್​ಪೇಪರ್​ನಲ್ಲಿ ಸಾಮ್ನಾ ಗ್ರೂಪ್​ ಪ್ರಕಾಶಕರಾದ ರಾಜೇಂದ್ರ ಎಂ. ಭಾಗವತ್​ ಮತ್ತು ಟ್ರಸ್ಟ್​ನ ಇತರೆ ಸದಸ್ಯರ ಹೆಸರುಗಳೊಂದಿಗೆ ಸಂಪಾದಕರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

    ಈ ಬಗೆಗಿನ ಮಾಹಿತಿಗಾಗಿ ಪಕ್ಷದ ನಾಯಕರನ್ನು ಸಂಪರ್ಕಿಸಿದಾಗ ಬಹಳ ಜವಾಬ್ದಾರಿಯುತ ಸ್ಥಾನಕ್ಕೆ ಅವರನ್ನು ನೇಮಿಸಲಾಗಿದೆ. ಅದನ್ನು ಅವರು ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಎಂದಷ್ಟೇ ಹೇಳಿದರು. ಆದರೆ, ವಿಸ್ತಾರವಾಗಿ ಮಾತನಾಡಲು ನಿರಾಕರಿಸಿದರು. ಶಿವಸೇನಾ ಕುಟುಂಬದ ಆಪ್ತರಲ್ಲಿ ಒಬ್ಬರಾದ ಸಂಸದ ಸಂಜಯ್​ ರಾವತ್​ ಸಾಮ್ನಾ ಗ್ರೂಪ್​ನ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿಯಲಿದ್ದಾರೆ.

    ಅಂದಹಾಗೆ ಬಹು ಆವೃತ್ತಿಯ ಮರಾಠಿ ಸಾಮ್ನಾ ಪತ್ರಿಕೆಯನ್ನು 1983ರ ಜನವರಿ 23ರಂದು ದಿವಂಗತ ಬಾಳಾ ಠಾಕ್ರೆ ಅವರು ಸ್ಥಾಪಿಸಿದರು. ಮೊದಲ ಸಂಪಾದಕರೂ ಆಗಿದ್ದರು. ಹಿಂದಿ ಆವೃತ್ತಿ ದೂಪಹರ್​ ಕಾ ಸಾಮ್ನಾ ಪತ್ರಿಕೆಯನ್ನು 1993ರ ಫೆ. 23ರಂದು ಸ್ಥಾಪಿಸಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts