More

    ಕಿರಿಯರ ವಿಶ್ವ ಅಥ್ಲೆಟಿಕ್ಸ್; ಭಾರತ ಮಿಶ್ರ ರಿಲೇ ತಂಡಕ್ಕೆ ಐತಿಹಾಸಿಕ ಕಂಚು

    ನೈರೋಬಿ: ಕನ್ನಡತಿ ಪ್ರಿಯಾ ಮೋಹನ್ ಒಳಗೊಂಡ ಭಾರತ ಮಿಶ್ರ ರಿಲೇ ತಂಡ 20 ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡು ಇತಿಹಾಸ ನಿರ್ಮಿಸಿತು. ಕೂಟದ ಇತಿಹಾಸದಲ್ಲಿ ಭಾರತ ಗೆದ್ದ 5ನೇ ಪದಕ ಇದಾಗಿದೆ. ಬುಧವಾರ ನಡೆದ ಸ್ಪರ್ಧೆಯಲ್ಲಿ ಭರತ್ ಶ್ರೀಧರ್, ಪ್ರಿಯಾ ಮೋಹನ್, ಸುಮಿ ಹಾಗೂ ಕಪಿಲ್ ಒಳಗೊಂಡ ಭಾರತ ತಂಡ 4/400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ 3 ನಿಮಿಷ 20.60 ಸೆಕೆಂಡ್‌ಗಳಲ್ಲಿ ಓಡಿ ಮೂರನೇ ಸ್ಥಾನ ಪಡೆಯಿತು. ನೈಜೀರಿಯಾ ತಂಡ (3ನಿ.19.70ಸೆ) ಕೂಟ ದಾಖಲೆಯೊಂದಿಗೆ ಸ್ವರ್ಣ ಹಾಗೂ ಪೋಲೆಂಡ್ ತಂಡ (3ನಿ.19.80ಸೆ) ಬೆಳ್ಳಿ ಪದಕ ಗೆದ್ದುಕೊಂಡಿತು.

    ಇದನ್ನೂ ಓದಿ: ಭಾರತ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ವಿಸ್ತರಿಸಿದ ಒಡಿಶಾ ಸರ್ಕಾರ

    ಕಿರಿಯರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಈ ಮುನ್ನ ಸೀಮಾ ಆಂಟಿಲ್ (2002, ಡಿಸ್ಕಸ್ ಥ್ರೋ ಕಂಚು), ನವನೀತ್ ಕೌರ್ ದಿಲ್ಲೋನ್ (2014, ಡಿಸ್ಕಸ್ ಥ್ರೋ ಕಂಚು), ನೀರಜ್ ಚೋಪ್ರಾ (2016, ಜಾವೆಲಿನ್ ಥ್ರೋ ಚಿನ್ನ) ಮತ್ತು ಹಿಮಾ ದಾಸ್ (2018, 400 ಮೀ. ಚಿನ್ನ) ಪದಕ ಗೆದ್ದಿರುವ ಭಾರತೀಯರು.

    ಇದನ್ನೂ ಓದಿ: ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    400 ಮೀಟರ್ ಓಟದ ವೈಯಕ್ತಿಕ ವಿಭಾಗದಲ್ಲೂ ಪ್ರಿಯಾ ಮೋಹನ್ ಫೈನಲ್ ಪ್ರವೇಶಿಸಿದ್ದಾರೆ. 3ನೇ ಹೀಟ್ಸ್‌ನಲ್ಲಿ ಓಡಿದ ಪ್ರಿಯಾ 53.79 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿದರು. ಒಟ್ಟಾರೆ 4ನೆಯವರಾಗಿ ಫೈನಲ್‌ಗೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts