ಎರಡು ವಾರದಲ್ಲಿ ಹುಲಿ ಸಫಾರಿಗೆ ಅವಕಾಶ

blank

ಬೆಳಗಾವಿ: ಇಲ್ಲಿನ ಮೃಗಾಲಯಕ್ಕೆ ಈಗಾಗಲೇ ಮೂರು ಸಿಂಹಗಳನ್ನು ತರಲಾಗಿದೆ. ಚಿರತೆ, ಹುಲಿ ಸೇರಿ ಅನೇಕ ಪ್ರಾಣಿಗಳೂ ಆಗಮಿಸಲಿವೆ. ಇನ್ನು ಎರಡು ವಾರದಲ್ಲಿ ಹುಲಿ ಸಫಾರಿಗೆ ಅವಕಾಶ ಮಾಡಿಕೊಡಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಬರಲಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯವನ್ನು ಮೊದಲ ಹಂತದಲ್ಲಿ 16 ಕೋಟಿ ರೂಪಾಯಿ
ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ ಎಂದರು.

ಎರಡು ಕೆರೆ ನಿರ್ಮಾಣ: ಮೈಸೂರು ಮಾದರಿಯಲ್ಲಿ ಬೆಳಗಾವಿಯ ಮೃಗಾಲಯಕ್ಕೂ ಒತ್ತು ನೀಡಲಾಗುವುದು. ಇದರಿಂದ ಉತ್ತರ ಕರ್ನಾಟಕದ ಜನತೆ ಪ್ರಾಣಿ ವೀಕ್ಷಣೆಗೆ ಮೈಸೂರು ಮೃಗಾಲಯಕ್ಕೆ ಹೋಗುವುದು ತಪ್ಪಲಿದೆ. ಮೃಗಾಲಯಕ್ಕೆ ಮಾರ್ಕಂಡೇಯ ನದಿ ಮೂಲಕ ನರೇಗಾ ಯೋಜನೆಯಡಿ ನೀರು ಪೂರೈಕೆ ಮಾಡಲು ಎರಡು ಕರೆ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಸಫಾರಿಗೆ ಅನುಕೂಲವಾಗುವ ವಾಹನಗಳ ಪೂರೈಕೆಗೆ ಕ್ರಮ ಕೈಗೊಳ್ಳವಂತೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

ದತ್ತು ಪಡೆಯಲು ಅವಕಾಶ: ಸಿಸಿಎಫ್ ಬಸವರಾಜ ಪಾಟೀಲ ಮಾತನಾಡಿ, ಪ್ರಾಣಿಗಳ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಪ್ರಾಣಿಗಳ ದತ್ತು ಪಡೆಯಬಹುದಾಗಿದೆ. ಹುಲಿ, ಸಿಂಹ ದತ್ತು ಪಡೆಯಲು ಒಂದು ವರ್ಷಕ್ಕೆ 1 ಲಕ್ಷ ರೂ. ಹಾಗೂ ಇತರ ಪ್ರಾಣಿ, ಪಕ್ಷಿಗಳಿಗೆ ಏಳೂವರೆ ಸಾವಿರ ರೂ. ನಿಗದಿ
ಪಡಿಸಲಾಗುವುದು ಎಂದು ತಿಳಿಸಿದರು.

‘ಕೈ’ನಲ್ಲಿ ಮೂಲೆ ಗುಂಪು ಮಾಡಲು ಸಾಧ್ಯವಿಲ್ಲ

ಕಾಂಗ್ರೆಸ್‌ನಲ್ಲಿ ಯಾರು ಯಾರನ್ನೂ ಮೂಲೆ ಗುಂಪು ಮಾಡಲು ಸಾಧ್ಯವಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ನನಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು. ಗೋಕಾಕ ಸೇರಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಜಿಲ್ಲೆಯ ಕಾಂಗ್ರೆಸ್‌ನ ಎಲ್ಲ ಶಾಸಕರು ಮತ್ತು ಮುಖಂಡರು ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ. ಆಯಾ ಕ್ಷೇತ್ರದಲ್ಲಿ ಸಂಘಟನೆಗೆ ಹೋದಾಗ ಅಲ್ಲಿನ ನಮ್ಮ ಶಾಸಕರು ಹಾಗೂ ನಾಯಕರು ಜತೆಯಲ್ಲಿರುತ್ತಾರೆ. ಶಾಸಕರು ಅವರವರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ ಎಂದರು.

ಬೆಳಗಾವಿ ಬೈ-ಫೈಟ್‌ಗೆ ಮೂವರ ಹೆಸರು

ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಸ್ತಕ್ಷೇಪ ಮಾಡಿದರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಡಿಪಿ ಸಭೆಯಲ್ಲಿ ಪ್ರಶ್ನಿಸುವ ಅವಕಾಶವಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಮೂವರ ಹೆಸರು ಶಿಫಾರಸು ಮಾಡಲಾಗಿದೆ. ಆದರೆ, ಯಾರ ಹೆಸರು ಕಳುಹಿಸಲಾಗಿದೆಯೋ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.

ಮಹಾದಾಯಿ ಸಮಸ್ಯೆ ನಿವಾರಣೆಗೆ ಮಧ್ಯಸ್ಥಿಕೆ ವಹಿಸಿ

ಮಹಾದಾಯಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ನಮ್ಮ ಪಾಲಿನ ನೀರು ಪಡೆಯಲೂ ನಾವು ನಾನಾ ಇಲಾಖೆಯ ಅನುಮತಿ ಪಡೆಯಬೇಕಿದೆ. ಹೀಗಾಗಿ ಮೂರು ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಬೇಕು. ಚುನಾಚಣೆ ಬಂದಾಗ ಬಿಜೆಪಿಯವರು ಮಹದಾಯಿ ವಿಷಯ ಪ್ರಸ್ತಾಪಿಸುವುದು ಹೊಸದೇನಲ್ಲ ಎಂದರು.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…