More

    ಇಬ್ಬರು ಎಲ್​ಇಟಿ ಉಗ್ರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರಿಗೆ ಸಿಕ್ತು ಭಾರೀ ನಗದು ಬಹುಮಾನ!

    ಶ್ರೀನಗರ: ಶಸ್ತ್ರ ಸಜ್ಜಿತ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ.

    ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಇಬ್ಬರು ಉಗ್ರರಲ್ಲಿ ಓರ್ವ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ರಜೌರಿಯ ನಿವಾಸಿಯಾಗಿದ್ದ ಎಲ್​ಇಟಿ ಕಮಾಂಡರ್​ ತಲಿಬ್​ ಹುಸೇನ್ ಮತ್ತು ಫೈಜಲ್​ ಅಹ್ಮದ್​ ಬಂಧಿತ ಉಗ್ರನಾಗಿದ್ದು, ಬಂಧಿತರಿಂದ ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್​​ಗಳು, ಒಂದು ಪಿಸ್ತೂಲ್​ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಗ್ರಾಮಸ್ಥರ ಈ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಜಿಪಿ ದಿಲ್ಬಗ್​ ಸಿಂಗ್​​​ ಗ್ರಾಮಸ್ಥರಿಗೆ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಧೂಮ್​​ ಚಿತ್ರದ ಪ್ರೇರಣೆಯಿಂದ ಶಾಲೆಗೆ ಕನ್ನ: ಕಳ್ಳತನ ಬಳಿಕ ಬೋರ್ಡ್​​ ಮೇಲೆ ಬರೆದಿದ್ದು ನೋಡಿ ಶಿಕ್ಷಕರೇ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts