More

    ಸಾವಲ್ಲೂ ಒಂದಾದ ಸ್ನೇಹಿತೆಯರು

    ಉಡುಪಿ: ಇಬ್ಬರು ಸ್ನೇಹಿತೆಯರು ಸಾವಿನಲ್ಲೂ ಒಂದಾಗುವ ಮೂಲಕ 25 ವರ್ಷಗಳ ಸ್ನೇಹಕ್ಕೆ ಸಾರ್ಥಕತೆ ತಂದಿದ್ದಾರೆ. ಉದ್ಯಾವರ ನಿವಾಸಿಗಳಾದ ಸುಂದರಿ ಪೂಜಾರ್ತಿ(64)ಹಾಗೂ ಬೇಬಿ ಪೂಜಾರ್ತಿ( 70)ಸಾವಿನಲ್ಲೂ ಒಂದಾದ ಸ್ನೇಹಿತೆಯರು.

    ಇವರು ಉದ್ಯಾವರದ ಬಿಲ್ಲವರ ಮಹಾಜನ ಸಂಘದಲ್ಲಿ ಹಲವಾರು ವರ್ಷಗಳಿಂದ ಪರಿಚಾರಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಘದಲ್ಲಿ ಪರಿಚಾರಕಿಯರಾಗಿ ಸುಂದರಿ 35 ವರ್ಷ ಸೇವೆ ಸಲ್ಲಿಸಿದರೆ, ಬೇಬಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಈ ಇಬ್ಬರೂ ಸ್ನೇಹಿತೆಯರಲ್ಲಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೇ ಸೂರಿನಡಿಯಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಒಂದೇ ದಿನ (ಸೋಮವಾರ) ಮೃತಪಟ್ಟಿದ್ದಾರೆ. ಬೇಬಿ ಅವರು ಬೆಳಗ್ಗೆ ನಿಧನ ಹೊಂದಿದರೆ, ಸುಂದರಿ ಸಾಯಂಕಾಲ ಸಾವಿಗೀಡಾಗಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆಯನ್ನು ಉದ್ಯಾವರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಸುಂದರಿ ಪೂಜಾರ್ತಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಾಗೂ ಉದ್ಯಾವರ ಸಾರ್ವಜನಿಕ ರುದ್ರಭೂಮಿಯ ನಿರ್ವಾಹಕ ಕುಟ್ಟಿ ಪೂಜಾರಿ ಅವರ ಪತ್ನಿಯಾಗಿರುವ ಬೇಬಿ ಅವರು ಪತಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts