More

    ರಾಹುಲ್​ ಗಾಂಧಿ ಸೇರಿ ಸಾವಿರಾರು ಕಾಂಗ್ರೆಸಿಗರಿಗೆ ಮತ್ತೆ ಸಿಕ್ತು ಅಭಿವ್ಯಕ್ತಿ ಸ್ವಾತಂತ್ರ್ಯ; ‘ಸತ್ಯಮೇವ ಜಯತೇ’ ಎಂದ ಕಾಂಗ್ರೆಸ್​

    ನವದೆಹಲಿ: ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಕಾಂಗ್ರೆಸಿಗರಿಗೆ ಟ್ವಿಟರ್​ನಲ್ಲಿ ಮತ್ತೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ವಾರದ ಹಿಂದೆ ಬ್ಲಾಕ್ ಮಾಡಲಾಗಿದ್ದ ಅವರ ಟ್ವಿಟರ್​ ಖಾತೆಗಳನ್ನು ಇಂದು ಅನ್​ಬ್ಲಾಕ್​ ಮಾಡಲಾಗಿದೆ. ರಾಹುಲ್​ ಗಾಂಧಿ ಸೇರಿದಂತೆ ಇತರ ಕಾಂಗ್ರೆಸಿಗರ ಟ್ವಿಟರ್​ ಖಾತೆಗಳನ್ನು ಟ್ವಿಟರ್ ಇಂಡಿಯಾ ಅನ್​ಬ್ಲಾಕ್​ ಮಾಡಿದೆ.

    ರಾಹುಲ್​ ಗಾಂಧಿ ಹಾಗೂ ಇತರ ಕಾಂಗ್ರೆಸಿಗರ ಲಿಖಿತ ಕೋರಿಕೆ ಮೇರೆಗೆ ಅವರೆಲ್ಲರ ಟ್ವಿಟರ್​ ಖಾತೆಗಳನ್ನು ಅನ್​ಬ್ಲಾಕ್​ ಮಾಡಲಾಗಿದೆ ಎಂದು ಟ್ವಿಟರ್​ ಇಂಡಿಯಾ ವಕ್ತಾರ ತಿಳಿಸಿದ್ದಾರೆ. ಭಾರತದ ರಾಜಕಾರಣದಲ್ಲಿ ಟ್ವಿಟರ್​ ಮಧ್ಯಪ್ರವೇಶಿಸುತ್ತಿದೆ, ದೇಶದ ಪ್ರಜಾಪ್ರಭುತ್ವದ ಮೇಲೆ ಟ್ವಿಟರ್ ದಾಳಿ ನಡೆಸುತ್ತಿದೆ ಎಂದು ಶುಕ್ರವಾರ ರಾಹುಲ್​ ಗಾಂಧಿ ಯೂಟ್ಯೂಬ್​ ಮೂಲಕ ಹೇಳಿದ್ದರು. ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮನೆಯವರ ಫೋಟೋ ಟ್ವೀಟ್ ಮಾಡಿದ್ದ ಹಿನ್ನೆಲೆಯಲ್ಲಿ ಎನ್​ಸಿಪಿಸಿಆರ್​ ಟ್ವಿಟರ್​ ಗಮನ ಸೆಳೆದಿದ್ದು, ಅದು ರಾಹುಲ್​ ಗಾಂಧಿ ಸೇರಿ ಅಂಥದ್ದೇ ಟ್ವೀಟ್​ ಮಾಡಿದ್ದ ಇತರ ಸಾವಿರಾರು ಕಾಂಗ್ರೆಸಿಗರ ಟ್ವಿಟರ್​ ಖಾತೆಗಳನ್ನು ಬ್ಲಾಕ್​ ಮಾಡಿತ್ತು.

    ತಾತ್ಕಾಲಿಕವಾಗಿ ಬ್ಲಾಕ್​ ಆಗಿದ್ದ ರಾಹುಲ್​ ಗಾಂಧಿ ಅವರ ಟ್ವಿಟರ್ ಖಾತೆ ಅನ್​ಬ್ಲಾಕ್​ ಆಗುತ್ತಿದ್ದಂತೆ ಕಾಂಗ್ರೆಸ್​ ಇಂಡಿಯಾದ ಟ್ವಿಟರ್​ ಖಾತೆಯಿಂದ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಲಾಗಿದೆ. ಆದರೆ ರಾಹುಲ್​ ಗಾಂಧಿ ಇನ್ನೂ ಯಾವುದೇ ಟ್ವೀಟ್ ಮಾಡಿಲ್ಲವಾದರೂ, ಅನ್​ಬ್ಲಾಕ್ ಆದ ಬಳಿಕ ಅವರ ಮೊದಲ ಟ್ವೀಟ್​ ಏನಾಗಿರಬಹುದು ಎಂಬ ಕುತೂಹಲ ಮೂಡಿದೆ. (ಏಜೆನ್ಸೀಸ್​)

    ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ಹೋರಾಡುವೆ: ವಿಜಯವಾಣಿ ಕ್ಲಬ್​ಹೌಸ್​​ನಲ್ಲಿ ವೀರಯೋಧ ಮಹೇಶ್

    ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts