More

    ಸಬರಮತಿ ಆಶ್ರಮಕ್ಕೆ ಬಂದಿದ್ದು ಟ್ರಂಪ್​ಗೆ ಖುಷಿ ಕೊಟ್ಟಂತೆ ಕಂಡಿಲ್ಲ: ಆಶ್ರಮದಲ್ಲಿ ಗಾಂಧಿ ಬಗ್ಗೆ ಮಾತನಾಡದೆ, ಮೋದಿಗೇ ಥ್ಯಾಂಕ್ಸ್​ ಹೇಳಿದ್ದಾರೆ ಎಂದ ಮಹಾತ್ಮ ಗಾಂಧಿ ಮೊಮ್ಮಗ

    ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇಂದು ಭಾರತದ ಎರಡನೇ ದಿನದ ಪ್ರವಾಸದಲ್ಲಿದ್ದಾರೆ. ಮೊದಲನೇ ದಿನದ ಪ್ರವಾಸದಲ್ಲಿ ಅಹಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು ಟ್ರಂಪ್​ ಅವರಿಗೆ ಖುಷಿ ಕೊಟ್ಟಂತೆ ಕಂಡಿಲ್ಲ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತಾಗಿ ಮಾತನಾಡಿರುವ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್​ ಗಾಂಧಿ, “ಟ್ರಂಪ್​ ಅವರು ಸಬರಮತಿ ಆಶ್ರಮದಲ್ಲಿ ಚರಕವನ್ನು ತಿರುಗಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಅಲ್ಲಿ ಮೆಲಾನಿಯಾ ಗಾಂಧಿಯವರು ಚರಕವನ್ನು ತಿರುಗಿಸಿದ್ದಾರೆ. ಟ್ರಂಪ್​ ಅದರ ಬಳಿ ಸುಮ್ಮನೆ ಕುಳಿತಿದ್ದರು ಅಷ್ಟೇ. ಅವರು ಅತಿಥಿಗಳ ಪುಸ್ತಕದಲ್ಲಿಯೂ ಮಹಾತ್ಮ ಗಾಂಧಿಯವರ ಹೆಸರನ್ನೂ ಬರೆದಿಲ್ಲ. ಅಲ್ಲಿಯೂ ಸಹ ತನ್ನ ಗೆಳೆಯರಾದ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

    ಡೊನಾಲ್ಡ್​ ಟ್ರಂಪ್​ ನಿನ್ನೆ ಅಹಮದಾಬಾದ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಗಾಂಧೀಜಿಯವರ ಚರಕದ ಬಳಿ ಕುಳಿತು ಚರಕ ತಿರುಗಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಹಾಗೆಯೇ ಅವರು ಅತಿಥಿಗಳ ಪುಸ್ತಕದಲ್ಲಿ ಗಾಂಧಿಯ ಹೆಸರನ್ನೂ ಉಲ್ಲೇಖಿಸಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts