More

    ತುಂಗಭದ್ರಾ ಡ್ಯಾಂ ಭರ್ತಿಗೆ ರೈತರ ಪ್ರಾರ್ಥನೆ

    ಕಂಪ್ಲಿ: ಕೆಲ ದಿನಗಳಿಂದ ಮಳೆಯಾಗುತ್ತಿದ್ದರೂ ವಾಡಿಕೆ ಮಳೆ ಪ್ರಮಾಣದಷ್ಟು ವರ್ಷಧಾರೆಯಾಗಿಲ್ಲ. ಇದು ರೈತರಿಗೆ ಚಿಂತೆಗೀಡು ಮಾಡಿಸಿದೆ.
    ಸದ್ಯ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಕಡಿಮೆಯಿದೆ. ಕಾಲುವೆ ನೀರು ಆಧಾರಿತ ರೈತರಿಗೆ ಆತಂಕ ಮೂಡಿಸಿದೆ. ತುಂಗಭದ್ರಾ ಜಲಾಶಯ ಭರ್ತಿಗೆ ರೈತರು ಪ್ರಾರ್ಥಿಸುವಂತಾಗಿದೆ.

    ಇದನ್ನೂ ಓದಿ: Huge Cobra Rescued In Tumakuru | ತುಮಕೂರಿನಲ್ಲಿ ಬೃಹತ್ ಗಾತ್ರದ ನಾಗರಹಾವಿನ ರಕ್ಷಣೆ

    ತಾಲೂಕಿನ ವಾಡಿಕೆ ಮಳೆಯು ಜನವರಿಯಲ್ಲಿ 0.2ಮಿ.ಮೀ, ಫೆಬ್ರವರಿಯಲ್ಲಿ 1.1, ಮಾರ್ಚ್‌ನಲ್ಲಿ 5.6, ಏಪ್ರೀಲ್‌ನಲ್ಲಿ 15.8, ಮೇ ನಲ್ಲಿ 37.8, ಜೂನ್‌ನಲ್ಲಿ 54.3, ಜುಲೈನಲ್ಲಿ 53.5, ಆಗಷ್ಟ್‌ನಲ್ಲಿ 74.8, ಸೆಪ್ಟಂಬರ್‌ನಲ್ಲಿ 127ಮಿ.ಮೀ. ಆಗಬೇಕಿತ್ತು. ಆದರೆ, 2023ರ ಮೇನಲ್ಲಿ 35.2, ಜೂನ್‌ನಲ್ಲಿ 57.2 ಮಿ.ಮೀನಷ್ಟು ಹಾಗೂ ಜುಲೈ 20ರವೆರಗೆ 142.2ಮಿ.ಮೀ ನಷ್ಟು ಮಳೆಬಿದ್ದಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದೆ. ಆದರೆ, ಜು.18ರಂದು ಬಿದ್ದ 27.4ಮಿ.ಮೀ. ಈ ವರ್ಷದಲ್ಲಿ ಬಿದ್ದ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಬೇಸಾಯಕ್ಕೆ ಅನುಕೂಲಕರವಾದ ಉತ್ತಮ ಪ್ರಮಾಣದ ಮಳೆಯಾಗಿಲ್ಲ ಎಂಬುದು ರೈತರ ಕೊರಗಾಗಿದೆ.

    ಮೇ, ಜೂನ್ ನಲ್ಲಿ ಕೈಕೊಟ್ಟ ಮಳೆರಾಯ

    ಈಗ ಬೀಳುತ್ತಿರುವ ವರುಣ ಮಳೆಯಾಶ್ರಿತ ಪ್ರದೇಶದ ರೈತರಿಗೆ ಉತ್ತಮವಾಗಿದೆ. ಈ ರೈತರು ಶೇಂಗಾ, ಸಜ್ಜೆ, ರಾಗಿ, ನವಣೆ, ಮೆಕ್ಕೆಜೋಳ, ತೊಗರಿ, ಗುರೆಳ್ಳು, ಹುರುಳಿ ಬೆಳೆಗಳನ್ನು ಬೆಳೆಯಲು ಭೂಮಿ ಹದ ಮಾಡಿಕೊಳ್ಳುವಲ್ಲಿ ರೈತರು ನಿರತರಾಗಿದ್ದಾರೆ.
    ತಾಲೂಕು 35,235.30 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಈ ಪೈಕಿ 3,917 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದೆ. 1,262 ಹೆಕ್ಟೇರ್ ಭೂಮಿ ವಿಜಯನಗರ ಕಾಲುವೆಗೆ ವ್ಯಾಪ್ತಿ ಬರುತ್ತದೆ. ಇನ್ನು 6,695 ಹೆಕ್ಟೇರ್ ಜಮೀನಿನ ರೈತರು ಎಲ್‌ಎಲ್‌ಸಿಯ ನೀರನ್ನು ನೆಚ್ಚಿಕೊಂಡಿದ್ದಾರೆ. ಎಲ್‌ಎಲ್‌ಸಿ ವ್ಯಾಪ್ತಿಯ ಭೂ ಪ್ರದೇಶದಲ್ಲಿ ಭತ್ತ ಬೆಳೆಯೇ ಪ್ರಧಾನವಾಗಿದೆ. ಬೆಳೆಗೆ ಕಾಲುವೆ ನೀರೇ ಆಧಾರವಾಗಿದೆ. ಕಾಲುವೆಗೆ ನೀರು ಹರಿಸಲು ತುಂಗಭದ್ರಾ ಜಲಾಶಯದಲ್ಲಿ ಸೂಕ್ತ ಪ್ರಮಾಣದ ನೀರಿನ ಸಂಗ್ರಹ ಅಗತ್ಯ. ಸದ್ಯದ ಜಲಾಶಯದ ಪರಿಸ್ಥಿತಿ ಗಮನಿಸಿದರೆ ಜಲಾಶಯಕ್ಕೆ ಸರಾಸರಿ 10 ಸಾವಿರ ಕ್ಯೂಸೆಕ್ ನಷ್ಟು ಮಾತ್ರ ಒಳಹರಿವಿದೆ. ಹೀಗಾಗಿ ರೈತರು ತುಂಗಭದ್ರಾ ಜಲಾಶಯ ಭರ್ತಿಯಾಗಲೆಂದು ಪ್ರಾರ್ಥಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts